ಕೊರೋನಾ ಭೀತಿ: ಗಣರಾಜ್ಯ ಪರೇಡ್‌ನಲ್ಲಿ ಬಹುದೊಡ್ಡ ಬದಲಾವಣೆ!

By Suvarna NewsFirst Published Dec 31, 2020, 8:00 AM IST
Highlights

ಕೊರೋನಾ ಭೀತಿ: ಗಣರಾಜ್ಯ ಪರೇಡ್‌ನಲ್ಲಿ ಹಲವು ನಿರ್ಬಂಧ| 1 ಲಕ್ಷ ಬದಲು 25 ಸಾವಿರ ಮಂದಿಗೆ ಅವಕಾಶ

ನವದೆಹಲಿ(ಡಿ.31): ಪ್ರತಿ ಬಾರಿ ದಿಲ್ಲಿಯ ರಾಜಪಥದಲ್ಲಿ ಭಾರಿ ಸಂಭ್ರಮದೊಂದಿಗೆ ನಡೆಯುತ್ತಿದ್ದ ಗಣರಾಜ್ಯೋತ್ಸವ ಪರೇಡ್‌ಗೆ ಈ ಸಲ ಕೊರೋನಾ ಭೀತಿ ಆವರಿಸಿದೆ. ಹೀಗಾಗಿ ಕಡಿಮೆ ಪ್ರೇಕ್ಷಕರ ಸಮ್ಮುಖದಲ್ಲಿ ಸಕಲ ಕೊರೋನಾ ಸುರಕ್ಷತಾ ಕ್ರಮಗಳೊಂದಿಗೆ ಗಣರಾಜ್ಯೋತ್ಸವ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಪ್ರತಿ ವರ್ಷ 1 ಲಕ್ಷ ಜನರು ರಾಜಪಥಕ್ಕೆ ಪರೇಡ್‌ ವೀಕ್ಷಣೆಗೆ ಬರುತ್ತಿದ್ದರು. ಈ ಬಾರಿ ಕೇವಲ 25 ಸಾವಿರ ಮಂದಿಗೆ ಮಾತ್ರ ಅವಕಾಶವಿರುತ್ತದೆ. ಆಸನ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರ ಕಾಪಾಡಲಾಗುತ್ತದೆ. 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿವೆ.

ಪಥಸಂಚಲನ ಸಂಕ್ಷಿಪ್ತವಾಗಿ ಇರಲಿದೆ. ಕಳೆದ ವರ್ಷಕ್ಕೆ ಹೋಲಿಸಿದೆ ಪಥಸಂಚಲನದ ತಂಡಗಳಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ಜನರು ಇರುತ್ತಾರೆ. ಒಂದು ತಂಡಗಳಲ್ಲಿ ಈ ಮುನ್ನ 144 ಜನರು ಇರುತ್ತಿದ್ದರು. ಈ ಸಲ ಇದನ್ನು 96ಕ್ಕೆ ಕಡಿತ ಮಾಡಲಾಗುತ್ತದೆ. ಪರೇಡ್‌ನ ಹಾದಿಯನ್ನು ಕೂಡ ಕುಗ್ಗಿಸಲಾಗುತ್ತದೆ. ಈ ಮುನ್ನ ರಾಜಪಥದಿಂದ ಕೆಂಪುಕೋಟೆವರೆಗೆ ತೆರಳುತ್ತಿದ್ದ ತಂಡಗಳು, ಈಗ ನ್ಯಾಷನಲ್‌ ಸ್ಟೇಡಿಯಂಗೆ ಪಥಸಂಚಲನ ನಿಲ್ಲಿಸಲಿವೆ. ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಕಮ್ಮಿ ಪ್ರಮಾಣದಲ್ಲಿರಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸಲದ ಗಣರಾಜ್ಯ ದಿನಕ್ಕೆ ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌ ಮುಖ್ಯ ಅತಿಥಿ. ಈಗ ಬ್ರಿಟನ್‌ನಲ್ಲಿ ಹೊಸ ಬಗೆಯ ಕೊರೋನಾ ತಾಂಡವ ಆಡುತ್ತಿದ್ದು, ವೈರಸ್‌ ಭಾರತವನ್ನೂ ಪ್ರವೇಶಿಸಿದೆ. ಹೀಗಾಗಿ ಅವರು ಬರುತ್ತಾರಾ ಎಂಬುದೂ ಪ್ರಶ್ನೆಯಾಗಿದೆ.

click me!