* 3-4 ದಿನಗಳಲ್ಲಿ ಕಲ್ಲಿದ್ದಲು ಸಮಸ್ಯೆಗೆ ಪರಿಹಾರ: ಸಚಿವ ಜೋಶಿ ಭರವಸೆ
* ಈ ಬಗ್ಗೆ ಒಂದೆರಡು ದಿನದಲ್ಲಿ ದಾಖಲೆಯೊಂದಿಗೆ ಬರುವೆ
* ಮಳೆ, ಜಾಗತಿಕವಾಗಿ ಕಲ್ಲಿದ್ದಲು ಬೆಲೆ ಏರಿಕೆಯಿಂದ ಸಮಸ್ಯೆ
* ಕಲ್ಲಿದ್ದಲು ಹಾಹಾಕಾರಕ್ಕೆ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ
ನವದೆಹಲಿ(ಆ.10): ಕರ್ನಾಟಕ(Karnataka) ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಶಾಖೋತ್ಪನ್ನ ವಿದ್ಯುತ್ ಉತ್ಪಾದಕ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ(Coal Shortage) ಎದುರಾಗಿರುವ ಬೆನ್ನಲ್ಲೇ, ಕಲ್ಲಿದ್ದಲು ಕೊರತೆ ಸಮಸ್ಯೆ ಇನ್ನೂ 3-4 ದಿನಗಳಲ್ಲಿ ಪರಿಹಾರವಾಗಲಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಇನ್ನೂ ಒಂದೆರಡು ದಿನಗಳಲ್ಲಿ ಈ ಕುರಿತು ಪೂರ್ತಿ ದಾಖಲೆಯೊಂದಿಗೆ ನಾನು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
ಶನಿವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ ಅವರು, ‘ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಬೆಲೆಯ ದಿಢೀರ್ ಏರಿಕೆಯಿಂದಾಗಿ ದೇಶದ ಕೆಲ ವಿದ್ಯುತ್ ಉತ್ಪಾದಕ ಸಂಸ್ಥೆಗಳು ವಿದ್ಯುತ್ ಉತ್ಪಾದನೆಯನ್ನೇ ಸ್ಥಗಿತಗೊಳಿಸಿವೆ.
undefined
ಅಲ್ಲದೆ ದೇಶಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನೆಯ ಹೊರೆ ದೇಶೀಯ ಕಲ್ಲಿದ್ದಲು ಮೇಲೆ ಬಿದ್ದಿದೆ. ಮತ್ತೊಂದೆಡೆ ದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಲ್ಲಿದ್ದಲು ಕೊರತೆ ಉದ್ಭವವಾಗಿದೆ. ಇದರಿಂದ ದೇಶದಲ್ಲಿ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮವಾಗಿದೆ. ಆದರೆ ಇನ್ನೂ 3-4 ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದು ಭರವಸೆ ನೀಡಿದರು.
ಭಾರೀ ಮಳೆಯಿಂದಾಗಿ ಕಲ್ಲಿದ್ದಲು ಪೂರೈಕೆಯಾಗದೆ ಗುಜರಾತ್(Gujarat), ಪಂಜಾಬ್(Punjab), ರಾಜಸ್ಥಾನ(Rajasthan), ದೆಹಲಿ(Delhi) ಮತ್ತು ತಮಿಳುನಾಡಿನಲ್ಲಿ(Tamil Nadu) ವಿದ್ಯುತ್ ಉತ್ಪಾದನೆಯೇ ಆಗುತ್ತಿಲ್ಲ.