* ಉತ್ತರ ಪ್ರದೇಶ ಚುನಾವಣಾ ಹೊಸ್ತಿಲಲ್ಲಿ ರಾಜಕೀಯ ನಾಯಕರ ಸಂದರ್ಶನ
* ಅಮೇಠಿ ಗೆಲುವಿನ ಬಗ್ಗೆ ಸ್ಮೃತಿ ಇರಾನಿ ಮಾತು
* ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಇರಾನಿ ವ್ಯಾಂಗ್ಯ
ಲಕ್ನೋ(ಡಿ.06): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮತ್ತು ಅಮೇಠಿ ಸಂಸದೆ ಸ್ಮೃತಿ ಇರಾನಿ (Union Minister And Amethi MP Smriti Irani) ಅವರು ಆಗಾಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Congress MP Rahul Gandhi) ಕಾಲೆಳೆಯುತ್ತಿರುತ್ತಾರೆ. ಸಂದರ್ಶನವೊಂದರಲ್ಲಿ ನೀವು ಅಮೇಥಿಯ ದೀದಿಯಾಗಿದ್ದೀರಿ ಆದರೆ ಅಲ್ಲಿ ನಿಮ್ಮ ಸಹೋದರನನ್ನು ವಯನಾಡಿನ (Wayanad) ಭಾಯ್ ಜಾನ್ ಆಗಿ ಮಾಡಿದ್ದೀರಿ ಎಂದು ಇರಾನಿ ಅವರನ್ನು ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ನಾನೇನೂ ಮಾಡಿಲ್ಲ ಎಂದಿದ್ದಾರೆ.
ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಸಂದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಮೃತಿ ಇರಾನಿ, ಐದು ದಶಕಗಳಿಂದ ಪ್ರಾಬಲ್ಯ ಮೆರೆದಿದ್ದ ಕುಟುಂಬವೊಂದನ್ನು, ಸಾಮಾನ್ಯ ಕುಟುಂಬದ ಮಹಿಳೆ ಬಂದು ಅಧಿಕಾರದಿಂದ ಉರುಳಿಸಿದ್ದಾಳೆ ಎಂದು ಹೇಳಲು ನಾನು ಧೈರ್ಯ ಮಾಡುವುದಿಲ್ಲ. ನಾನು ಏಕಾಂಗಿಯಾಗಿ ಅಮೇಠಿಯಲ್ಲಿ ಗೆದ್ದಿದ್ದೇನೆ ಎನ್ನುವುದು ತಪ್ಪು. ಅಮೇಥಿ ಮತ್ತು ಸಮಾಜವು ಕುಟುಂಬ ರಾಜಕಾರಂಣದಿಂದ ಬೇಸತ್ತಿತ್ತು. ಹೀಗಾಗಿ ಅದು ಸಾಮಾನ್ಯ ಮಹಿಳೆಗೆ ಅವಕಾಶ ನೀಡುವ ನಿರ್ಧಾರವನ್ನು ತೆಗೆದುಕೊಂಡಿತು ಎಂದಿದ್ದಾರೆ.
ಸ್ಮೃತಿ ಇರಾನಿ ಮೂಲಕ ಅಮೇಥಿ ಬದಲಾವಣೆ ಬಯಸಿತ್ತು ಎಂದು ಇರಾನಿ ಹೇಳಿದ್ದಾರೆ. ಪ್ರಜಾಪ್ರಭುತ್ವವು ಎಲ್ಲರಿಗೂ ಸುಧಾರಿಸುವ ಅವಕಾಶವನ್ನು ನೀಡುತ್ತದೆ. ಆದರೆ ಪ್ರಜಾಪ್ರಭುತ್ವದ (Democracy) ಘನತೆಯನ್ನು ಗುರುತಿಸಲು ಸಾಧ್ಯವಾಗುತ್ತದೋ ಇಲ್ಲವೋ ಎಂಬುದು ವ್ಯಕ್ತಿಯನ್ನು ಅವಲಂಬಿಸಿರುತ್ತದೆ. ಆ ವ್ಯಕ್ತಿ ಅಮೇಥಿಯಲ್ಲಿ ಅಷ್ಟೊಂದು ನಂಬಿಕೆ ಇಟ್ಟಿರಲಿಲ್ಲ, ಅದರ ಹಿಂದಿನ ಕಾರಣ ಬಹುಶಃ ತಾನು ಅಧಿಕಾರವನ್ನು ಸಾಧಿಸಿದ್ದೇನೆ ಆದರೆ ಸೇವೆ ಮಾಡಲಿಲ್ಲ ಎಂದು ಮನಗಂಡಿರುವುದು ಆಗಿರಬಹುದು. ಅದಕ್ಕಾಗಿಯೇ ಅವರು ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸಿದರು ಎಂದು ರಾಹುಲ್‌ಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
2014ರ ಲೋಕಸಭೆ ಚುನಾವಣೆ ಬಗ್ಗೆಯೂ ಮಾತನಾಡಿದ ಇರಾನಿ, ನಾನು ಒಮ್ಮೆ ಸೋತಿದ್ದೇನೆ ಆದರೆ ನಾನು ನನ್ನ ಜನರನ್ನು ಬಿಡಲಿಲ್ಲ, ನಂತರ ಮುಂದಿನ ಲೋಕಸಭೆ ಚುನಾವಣೆಯಲ್ಲಿ (Loksabha Elections) ಜನರು ನನ್ನನ್ನು ಅಮೇಥಿಯ ದೀದಿ ಎಂದು ಒಪ್ಪಿಕೊಂಡರು. ನೀವು ಅವರ (ರಾಹುಲ್ ಗಾಂಧಿ) ವೃತ್ತಿಜೀವನವನ್ನು ಕೊನೆಗೊಳಿಸಿದ್ದೀರೇ? ಎಂದು ಆಂಕರ್ ಅಮನ್ ಚೋಪ್ರಾ ಕೇಳಿದರು? ಇದಕ್ಕೆ ಉತ್ತರಿಸಿದ ಸ್ಮೃತಿ, ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ನೀವು ನನಗೆ ಕಿರೀಟವನ್ನು ಹಾಕುತ್ತಿದ್ದೀರಿ, ಆದರೆ ಅದರ ಪಟ್ಟಿ ತುಂಬಾ ದೊಡ್ಡದಾಗಿದೆ ಎಂದು ನಕ್ಕಿದ್ದಾರೆ.
ಸ್ಮೃತಿ ಇರಾನಿ ಹೇಳಿದರು, “ಯಾರೇ ಆಗಲಿ ಜೀವನದ ಒಂದು ಘಟ್ಟದಲ್ಲಿ ಯಾವಾಗಲಾದರೂ ಒಂದು ಬಾರಿ ಸೋಲನ್ನು ಎದುರಿಸಬೇಕಾಗುತ್ತದೆ, ಆದರೆ ಈ ಸಂದರ್ಭದಲ್ಲಿ ನಿಮ್ಮ ನಡವಳಿಕೆ ಹೇಗಿರುತ್ತದೆ ಎಂಬುವುದು ಅತೀ ಮುಖ್ಯ. 2014ರ ಸೋಲಿನ ನಂತರವೂ ನಾನು ಅಮೇಠಿ ಬಿಟ್ಟು ಹೋಗಲಿಲ್ಲ ಆದರೆ ಅವರು ಗೆದ್ದರೂ ಅಲ್ಲಿನ ಜನರನ್ನು ಬಿಟ್ಟು ಓಡಿದರು ಎಂದು ರಾಹುಲ್ ಗಾಂಧಿಯನ್ನು ಗುರಿಯಾಗಿಸಿ ಹೇಳಿದರು.., ಅಲ್ಲಿ ಯನ್ನು ಸೋಲಿಸಿದರು.
ಇಷ್ಟೇ ಅಲ್ಲದೇ ರಾಹುಲ್ ಗಾಂಧಿ ಅಮೇಠಿಯ ಅಭಿವೃದ್ಧಿ ಕಾರ್ಯ ಹಾಗೂ ಸಮಸ್ಯೆಗಳ ಬಗ್ಗೆಯೂ ಸಂಸತ್ತಿನಲ್ಲಿ ಉಲ್ಲೇಖಿಸಲಿಲ್ಲ ಎಂದೂ ಸಂದರ್ಶನದಲ್ಲಿ ಕಿಡಿ ಕಾರಿದ್ದಾರೆ. ಇನ್ನು ಇರಾನಿಯ ಈ ದಾಳಿಗೆ ರಾಹುಲ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೊಡಬೇಕಷ್ಟೇ.