
ಬೇಗುಸರಾಯ್[ಫೆ.16]: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮಾಲಾರ್ಪಣೆ ಮಾಡಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಸಿಪಿಐ ಹಾಗೂ ಆರ್‌ಜೆಡಿ ಕಾರ್ಯಕರ್ತರು ಗಂಗಾಜಲದಿಂದ ಶುದ್ಧೀಕರಣ ಮಾಡಿದ ಘಟನೆ ಇಲ್ಲಿನ ಬಲಿಯಾ ಬ್ಲಾಕ್‌ನಲ್ಲಿ ನಡೆದಿದೆ.
ಗಿರಿರಾಜ್ ಸಿಂಗ್ ಮನುವಾದಿಯಾಗಿದ್ದು, ಅಂಬೇಡ್ಕರ್ ತತ್ವ- ಸಿದ್ಧಾಂತಗಳ ವಿರೋಧಿ. ಅಂಥವರು ಮಾಲಾರ್ಪಣೆ ಮಾಡುವುದು ಮೂರ್ತಿಯನ್ನು ಅಪವಿತ್ರಗೊಳಿಸಿದಂತೆ ಎಂದು ವಾದಿಸಿದ್ದಾರೆ. ಶುಕ್ರವಾರ ನಡೆದ ಸಿಎಎ ಪರ ರಾರಯಲಿ ವೇಳೆ ಗಿರಿರಾಜ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು.
ಇದಾದ ಮರುದಿನವೇ ಸಿಎಎ ವಿರೋಧಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಪಿಐ ಹಾಗೂ ಆರ್‌ಜೆಡಿ ನಾಯಕರು ಗಂಗಾಜಲದಿಂದ ಶುದ್ಧೀಕರಣ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ