ಅಮೆರಿಕಾದ ದೆಹಲಿ ರಾಯಭಾರ ಕಚೇರಿಗೆ ಸ್ಮಿತ್‌ ನೇಮಕ

By Suvarna NewsFirst Published May 2, 2021, 1:36 PM IST
Highlights

ಪ್ರಭಾರಿ ಸೆಕ್ರೆಟರಿ ಆಫ್‌ ಸ್ಟೇಟ್‌ ಮತ್ತು ಹಂಗಾಮಿ ಡೆಪ್ಯುಟಿ ಸೆಕ್ರೆಟರಿ ಆಫ್‌ ಸ್ಟೇಟ್‌ ಆಗಿ ಕಾರ್ಯನಿರ್ವಹಿಸಿದ ಫಾರಿನ್‌ ಸರ್ವೀಸ್ ಇನ್ಸ್‌ಸ್ಟಿಟ್ಯೂಟ್‌ ನಿರ್ದೇಶಕರಾದ ಅಂಬಾಸಿಡರ್‌ ಡೇನಿಯಲ್‌ ಸ್ಮಿತ್‌ ಅವರು ಮಧ್ಯಂತರ ಚಾರ್ಜ್ ಡಿ ಅಫೇರ್ಸ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

 ಬೆಂಗಳೂರು (ಮೇ.02):  ನವದೆಹಲಿಯ ಅಮೆರಿಕ ರಾಯಭಾರ ಕಚೇರಿಗೆ ಚಾರ್ಜ್ ಡಿ ಅಫೈರ್ಸ್‌ ಆಗಿ ರಾಯಭಾರಿ ಡೇನಿಯಲ್‌ ಸ್ಮಿತ್‌ ಅವರನ್ನು ನೇಮಕ ಮಾಡಲಾಗಿದೆ.

ಇಲ್ಲಿಯವರೆಗೂ ಪ್ರಭಾರಿ ಸೆಕ್ರೆಟರಿ ಆಫ್‌ ಸ್ಟೇಟ್‌ ಮತ್ತು ಹಂಗಾಮಿ ಡೆಪ್ಯುಟಿ ಸೆಕ್ರೆಟರಿ ಆಫ್‌ ಸ್ಟೇಟ್‌ ಆಗಿ ಕಾರ್ಯನಿರ್ವಹಿಸಿದ ಫಾರಿನ್‌ ಸರ್ವೀಸ್ ಇನ್ಸ್‌ಸ್ಟಿಟ್ಯೂಟ್‌ ನಿರ್ದೇಶಕರಾದ ಅಂಬಾಸಿಡರ್‌ ಡೇನಿಯಲ್‌ ಸ್ಮಿತ್‌ ಅವರು ಮಧ್ಯಂತರ ಚಾರ್ಜ್ ಡಿ ಅಫೇರ್ಸ್‌ ಆಗಿ ಕಾರ್ಯನಿರ್ವಹಿಸಲು ನವದೆಹಲಿಗೆ ತೆರಳಲಿದ್ದಾರೆ. ರಾಯಭಾರಿ ಸ್ಮಿತ್‌ ಅವರು ರಾಯಭಾರಿ ವೃತ್ತಿಜೀವನದ ಅತ್ಯುನ್ನತ ವಿದೇಶಾಂಗ ಸೇವಾ ಶ್ರೇಣಿಯನ್ನು ಹೊಂದಿದ್ದಾರೆ.

ನನ್ನ ದೇಶ ಕಷ್ಟದಲ್ಲಿದೆ, ವ್ಯಾಕ್ಸೀನ್ ಕೊಡಿ: ಅಮೆರಿಕಾಗೆ ಪ್ರಿಯಾಂಕ ಮನವಿ

ಸ್ಮಿತ್‌ ಅವರ ನೇಮಕವು ಭಾರತ ಸರ್ಕಾರ ಮತ್ತು ಭಾರತೀಯರೆಡೆಗೆ ಅಮೆರಿಕದ ಸಹಭಾಗಿತ್ವ ಮತ್ತು ಬಲವಾದ ಬದ್ಧತೆಯನ್ನು ಪ್ರತಿಪಾದಿಸಲಿದೆ. ಜಾಗತಿಕ ಸಾಂಕ್ರಾಮಿಕ ಪಿಡುಗಿನ ನಿವಾರಣೆ ಸೇರಿದಂತೆ ಉಭಯ ದೇಶಗಳ ಸಮಾನ ಆದ್ಯತೆಗಳ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದೊಂದಿಗೆ ಸಹಕಾರವನ್ನು ಮುಂಚೂಣಿಯಲ್ಲಿ ನಿಂತು ನಿಭಾಯಿಸಲಿದ್ದಾರೆ.

ಇಡೀ ಭಾರತ ಲಾಕ್ಡೌನ್‌ ಮಾಡಿ: ಅಮೆರಿಕ ಸಲಹೆ!

ಅಮೆರಿಕ ಭಾರತದೊಂದಿಗೆ ಕೈಜೋಡಿಸಿ ನಿಂತಿದೆ ಮತ್ತು ರಾಯಭಾರಿ ಸ್ಮಿತ್‌ ಭಾರತದೊಂದಿಗೆ ಜತೆಗೂಡಿ ಕೆಲಸ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

click me!