
ಲಕ್ನೋ(ಏ.14): ಕೊರೋನಾ ಸೋಂಕಿನ ಸಂಬಂಧ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಪೂರ್ಣ ಲಾಖ್‌ಡೌನ್ ಹೇರುವ ಕುರಿತಾಗಿ ಚಿಂತಿಸಲು ಸೂಚಿಸಿದೆ.ಕೊರೋನಾ ಪೀಡಿತ ನಗರಗಳಲ್ಲಿ ಮುಂದಿನ ಎರಡು ಅಥವಾ ಮೂರು ವಾರಗಳವರೆಗೆ ಪೂರ್ಣ ಲಾಕ್‌ಡೌನ್ ಹೇರುವ ಬಗ್ಗೆ ನಿರ್ಧರಿಸುವಂತೆಯೂ ಸೂಚಿಸಿದೆ. ಅಲ್ಲದೇ ಸರ್ಕಾರ ಟ್ರ್ಯಾಕಿಂಗ್, ಟೆಸ್ಟಿಂಗ್ ಹಾಗೂ ಚಿಕಿತ್ಸೆ ಇವುಗಳಲ್ಲಿ ಮತ್ತಷ್ಟು ವೇಗ ಹೆಚ್ಚಿಸಬೇಕೆಂದೂ ಆದೇಶಿಸಿದೆ. ಸ್ಟೇಡಿಯಂಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆಯೂ ಉಲ್ಲೇಖಿಸಿದೆ.
ಇನ್ನು ಈ ಬಗ್ಗೆ ಮುಂದಿನ ವಿಚಾರಣೆಯನ್ನು ಏಪ್ರಿಲ್ 19ಕ್ಕೆ ಮುಂದೂಡಿರುವ ಸರ್ಕಾರ ರಸ್ತೆಗಳಲ್ಲಿ ಮಾಸ್ಕ್ ಧರಿಸದ ಯಾವೊಬ್ಬ ವ್ಯಕ್ತಿಯೂ ಕಾಣಕೂಡದು. ಒಂದು ವೇಳೆ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕೋರ್ಟ್ ಪೊಲೀಸರನ್ನು ವಿಚಾರಣೆಗೊಳಪಡಿಸಲಿದೆ. ಇನ್ನು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಐವತ್ತಕ್ಕಿಂತ ಹೆಚ್ಚು ಜನರು ಕಾಣಿಸಿಕೊಳ್ಳಾರದೆಂದೂ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸದೆ.
ಕೊರೋನಾ ಪ್ರಕರಣ ಸಂಬಂಧ ದಾಖಲಾದ PIL ವಿಚಾರಣೆ ನಡೆಸಿದ ಕೋರ್ಟ್ ಇಂತಹುದ್ದೊಂದು ಆದೇಶ ನೀಡಿದೆ. ನೈಟ್ ಕರ್ಫ್ಯೂ ಕೊರೋನಾ ತಡೆಯುವಲ್ಲಿ ಇರಿಸುವ ಸಣ್ಣ ಪುಟ್ಟ ಹೆಜ್ಜೆಗಳಾಗಿವೆ. ಇದು ಧಾರ್ರಮಿಕ ಕಾರ್ಯಕ್ರಮ ಹಾಗೂ ಪಾರ್ಟಿಗಳಲ್ಲಿ ಹೆಚ್ಚಿನ ಜನರು ಸೇರುವುದನ್ನು ತಡೆಯುತ್ತದೆಯಷ್ಟೇ. ನದಿಯಲ್ಲಿ ಪ್ರವಾಹ ಬಂದರೆ ಅಣೆಕಟ್ಟು ಅದನ್ನು ತಡೆಯಲು ಸಾಧ್ಯವಿಲ್ಲ. ಹೀಗಿದ್ದರೂ ಪ್ರವಾಹದಂತೆ ಎರಗಿರುವ ಸೋಂಕನ್ನು ತಡೆಯಲು ನಮ್ಮ ಕೈಲಾದ ಪ್ರಯುತ್ನ ಮಾಡಬೇಕೆಂದು ನ್ಯಾಯಾಲಯ ಉಲ್ಲೇಖಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ