3ನೇ ಲಾಕ್‌ಡೌನ್ ಮುಗಿದ ಮೇಲೆ ಹಿಂದಿನಂತೆ ಪ್ರಯಾಣಿಕರ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ತಯಾರಿ ಮಾಡಿಕೊಳ್ಳತೊಡಗಿತ್ತು. ಅಷ್ಟೇ ಅಲ್ಲ, ಗ್ರೀನ್ ಜೋನ್ ಟು ಗ್ರೀನ್ ಜೋನ್ ವಿಮಾನ ಹಾರಾಟ ಕೂಡ ಆರಂಭಿಸುವ ಬಗ್ಗೆ ಉತ್ಸುಕವಾಗಿತ್ತು. ಆದರೆ ಇದಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧ ಮಾಡಿದ್ದರಿಂದ ಪೂರ್ಣ ಪ್ರಮಾಣದಲ್ಲಿ ರೈಲ್ವೆ ಓಡಿಸುವ ನಿರ್ಧಾರದಿಂದ ಹಿಂದೆ ಸರಿದಿದೆ.
ಬೆಂಗಳೂರು (ಮೇ. 15): 3 ನೇ ಲಾಕ್‌ಡೌನ್ ಮುಗಿದ ಮೇಲೆ ಹಿಂದಿನಂತೆ ಪ್ರಯಾಣಿಕರ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ತಯಾರಿ ಮಾಡಿಕೊಳ್ಳತೊಡಗಿತ್ತು. ಅಷ್ಟೇ ಅಲ್ಲ, ಗ್ರೀನ್ ಜೋನ್ ಟು ಗ್ರೀನ್ ಜೋನ್ ವಿಮಾನ ಹಾರಾಟ ಕೂಡ ಆರಂಭಿಸುವ ಬಗ್ಗೆ ಉತ್ಸುಕವಾಗಿತ್ತು. ಆದರೆ ಇದಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧ ಮಾಡಿದ್ದರಿಂದ ಪೂರ್ಣ ಪ್ರಮಾಣದಲ್ಲಿ ರೈಲ್ವೆ ಓಡಿಸುವ ನಿರ್ಧಾರದಿಂದ ಹಿಂದೆ ಸರಿದಿದೆ.
ಮಮತಾ ದೀದಿ ಅವಕಾಶ ಸಿಕ್ಕಾಗೆಲ್ಲಾ ಮೋದಿ ಜೊತೆ ಜಗಳಕ್ಕೆ ಇಳಿಯುತ್ತಿರೋದರ ಗುಟ್ಟೇನು?
undefined
ವಿಪಕ್ಷದವರು ಬಿಡಿ, ಬಿಜೆಪಿ ಮುಖ್ಯಮಂತ್ರಿಗಳೂ ಕೂಡ ಅಂತರ್ ರಾಜ್ಯ ಸಾರಿಗೆಗೆ ತಯಾರಿಲ್ಲ. ಮೊದಲ ಬಾರಿಗೆ ಮೋದಿ ಸಾಹೇಬರು ಮುಖ್ಯಮಂತ್ರಿಗಳ ಮಾತನ್ನು ಸುಲಭವಾಗಿ ಒಪ್ಪಿಕೊಂಡಿದ್ದಾರೆ. ರೈಲ್ವೆ ಇಲ್ಲ ಅಂದ ಮೇಲೆ ವಿಮಾನ ಹಾರಾಟ ಸಾಧ್ಯವೇ ಇಲ್ಲ.
ಒಂದು ಅಂದಾಜಿನ ಪ್ರಕಾರ, ವಿಮಾನಗಳು ಶುರುವಾದರೂ ದರ ಮೂರು ಪಟ್ಟು ಹೆಚ್ಚಾಗಲಿದೆಯಂತೆ. ರೈಲ್ವೆಯನ್ನು ಕೂಡ ನಡುವಿನ ಸೀಟ್ ಖಾಲಿ ಇಟ್ಟು ಓಡಿಸಬೇಕಾದ ಅನಿವಾರ್ಯತೆ ಇದ್ದು, ನಷ್ಟವನ್ನು ಸರ್ಕಾರವೇ ತುಂಬಿಕೊಡಬೇಕಾಗಿ ಬರಬಹುದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ