ಹಮಾಸ್ ಉಗ್ರ ದಾಳಿ ಬೆಂಬಲಿಸಿ ಯುಪಿ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಮೆರವಣಿಗೆ!

By Suvarna News  |  First Published Oct 9, 2023, 9:10 PM IST

ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯನ್ನು ಬಹುತೇಕ ರಾಷ್ಟ್ರಗಳು ಖಂಡಿಸಿದೆ. ಭಾರತ ಕೂಡ ಉಗ್ರ ದಾಳಿ ಖಂಡಿಸಿ ಇಸ್ರೇಲ್‌ಗೆ ಬೆಂಬಲ ನೀಡಿದೆ. ಆದರೆ ಉತ್ತರ ಪ್ರದೇಶದ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲದ ವಿದ್ಯಾರ್ಥಿಗಳು ಹಮಾಸ್ ಉಗ್ರರು ಹಾಗೂ ಪ್ಯಾಲೆಸ್ತಿನ್ ಬೆಂಬಲಿಸಿ ಮೆರವಣಿಗೆ ಮಾಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಆಲಿಘಡ(ಅ.08) ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ಬೆಂಬಲಿತ ಹಮಾಸ್ ಉಗ್ರರು ನಡೆಸಿದ ದಾಳಿಯನ್ನು ಭಾರತ ಖಂಡಿಸಿದೆ. ಇದೇ ವೇಳೆ ಸಂಕಷ್ಟದಲ್ಲಿರುವ ಇಸ್ರೇಲ್‌ಗೆ ಬೆಂಬಲ ಸೂಚಿಸಿದೆ. ಹಲವು ರಾಷ್ಟ್ರಗಳು ಇಸ್ರೇಲ್‌ಗೆ ಬೆಂಬಲ ಸೂಚಿಸಿದೆ. ಆದರೆ ಹಮಾಸ್ ಉಗ್ರರ ಭೀಕರ ದಾಳಿಯನ್ನು ಪ್ಯಾಲೆಸ್ತಿನ್, ಇರಾನ್ ಸೇರಿದಂತೆ ಕೆಲ ದೇಶಗಳು ಸಂಭ್ರಮಿಸಿದೆ. ಇಸ್ರೇಲ್ ನಾಗರೀಕರ ಹತ್ಯೆ, ಹೆಣ್ಣುಮಕ್ಕಳ ಮೇಲೆ ಪೈಶಾಚಿಕ ಕೃತ್ಯ,ಒತ್ತೆಯಾಳಾಗಿಟ್ಟುಕೊಂಡವರ ಸಂಖ್ಯೆ 1,000 ದಾಟಿದೆ. ಈ ಪ್ರತಿಯೊಂದು ಕೃತ್ಯವನ್ನು ಪ್ಯಾಲೆಸ್ತಿನಿಯರು, ಇರಾನ್ ಹಾಗೂ ವಿವಿಧ ದೇಶದಲ್ಲಿರುವ ಕೆಲವರು ಸಂಭ್ರಮಿಸಿದ್ದಾರೆ. ಈ ಸಾಲಿಗೆ ಉತ್ತರ ಪ್ರದೇಶದ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲದ ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ.

ಹಮಾಸ್ ಉಗ್ರರು ಇಸ್ರೇಲ್ ಮೇಲ ನಡೆಸಿದ ಬೀಕರ ದಾಳಿಯನ್ನು ಬೆಂಬಲಿಸಿ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮೆರವಣಿ ಮಾಡಿದ್ದಾರೆ. ಪ್ಲಕಾರ್ಡ್ ಹಿಡಿದು ಘೋಷಣೆ ಕೂಗುತ್ತಾ ಸಾಗಿದ್ದಾರೆ.  ಭಾರಿ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ಪ್ಯಾಲೆಸ್ತಿನ್ ಹಾಗೂ ಹಮಾಸ್ ಉಗ್ರರ ಪರ ಘೋಷಣೆ ಕೂಗಿದ್ದಾರೆ. ಇದೇ ವೇಳೆ ಇಸ್ರೇಲ್ ನಡೆಸುತ್ತಿರುವ ಪ್ರತಿದಾಳಿಯನ್ನು ಖಂಡಿಸಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಹಲವು ಘೋಷಣೆಗಳನ್ನು ಇಸ್ರೇಲ್ ವಿರುದ್ದ ಕೂಗಿದ್ದಾರೆ.

Tap to resize

Latest Videos

ಪತಿ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಭಾರತೀಯ ಮಹಿಳೆ ಮೇಲೆ ಹಮಾಸ್ ಉಗ್ರರ ದಾಳಿ!

ಈ ಮೆರವಣಿಗೆಗೆ ಯಾವುದೇ ಅನುಮತಿ ಪಡೆದಿಲ್ಲ. ಅಂತಾರಾಷ್ಟ್ರೀಯ ಸೂಕ್ಷ್ಮ ವಿಚಾರ ಕುರಿತು ಮೆರವಣಿ ಹಾಗೂಪ್ರತಿಭಟನೆ ನಡೆಸಿದ್ದಾರೆ. ಆದರೆ ಯಾವುದೇ ಅನುಮತಿ ಪಡೆದಿಲ್ಲ. ನಾಲ್ವರು ವಿದ್ಯಾರ್ಥಿಗಳಾದ ಖಾಲಿದ್, ಕಮ್ರಾನ್, ಆತೀಫ್ , ನವೀದ್ ಹಾಗೂ ಅಪರಿಚಿತ ವಿದ್ಯಾರ್ಥಿಗಳು ವಿರುದ್ದ ದೂರು ದಾಖಲಾಗಿದೆ.ಇತ್ತ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

 

They chose faith over nation. pic.twitter.com/FTAc7KNis5

— द Hindu Cafe (@TheHinduCafe)

 

ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಕೂಡ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಭಾರತ ಇಸ್ರೇಲ್‌ಗೆ ಬೆಂಬಲ ನೀಡಿದ್ದರೆ, ಕೆಲವರು ಮೂಲಭೂತವಾದಿಗಳು ಹಮಾಸ್ ಉಗ್ರರ ಪರ ನಿಂತಿದ್ದಾರೆ. ಹಮಾಸ್ ಉಗ್ರರು ನಡೆಸಿದ ದಿಢೀರ್ ದಾಳಿಯಲ್ಲಿ ಇಸ್ರೇಲ್ ಹಿಂದೆಂದೂ ಕಾಣದಂತ ನಷ್ಟಕ್ಕೆ ತುತ್ತಾಗಿದೆ. ಇಸ್ರೇಲಿಗರ ಹತ್ಯೆ, ಒತ್ತೆಯಾಳಾಗಿಟ್ಟುಕೊಂಡವರ ಸಂಖ್ಯೆ 1,000ಕ್ಕೂ ಹೆಚ್ಚು. ಪುಟ್ಟ ಕಂದಮ್ಮಗಳು, ಹೆಣ್ಣುಮಕ್ಕಳನ್ನು ಹತ್ಯೆ ಮಾಡಿದ್ದಾರೆ. ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ಇಸ್ರೇಲಿಗರ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ.

ಯುದ್ಧಪೀಡಿತ ಆರ್ಥಿಕತೆಗೆ ಬಲ ತುಂಬಲು 2.49 ಲಕ್ಷ ಕೋಟಿ ವಿದೇಶಿ ಮೀಸಲು ಮಾರಿದ ಇಸ್ರೇಲ್‌!
 

click me!