ಕರ್ನಾಟಕ, ಕೇರಳದಲ್ಲಿ ಐಸಿಸ್ ಉಗ್ರರ ಸಂಖ್ಯೆ ಹೆಚ್ಚಳ; ದಾಳಿಗೆ ಅಲ್‌ಖೈದಾ ಸಂಚು!

Published : Jul 25, 2020, 03:31 PM ISTUpdated : Jul 25, 2020, 06:00 PM IST
ಕರ್ನಾಟಕ, ಕೇರಳದಲ್ಲಿ ಐಸಿಸ್ ಉಗ್ರರ ಸಂಖ್ಯೆ ಹೆಚ್ಚಳ; ದಾಳಿಗೆ ಅಲ್‌ಖೈದಾ ಸಂಚು!

ಸಾರಾಂಶ

ಕೊರೋನಾ ವೈರಸ್ ಸಂಕಷ್ಟ, ಚೀನಾ ಅತಿಕ್ರಮದ ನಡುವೆ ಇದೀಗ ಭಾರತದೊಳಗೆ ಉಗ್ರರ ಸಂಖ್ಯೆ ಹೆಚ್ಚಾಗುತ್ತಿರುವ ಆತಂಕಕಾರಿ ಮಾಹಿತಿಯನ್ನು ಸಂಯುಕ್ತ ರಾಷ್ಟ್ರಗಳ ಒಕ್ಕೂಟ ತನ್ನ ವರದಿಯಲ್ಲಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿರುವ ಮತ್ತೊಂದು ಆತಂಕ ಕಾರಿ ಬೆಳವಣಿಗೆ ಎಂದರೆ ಕರ್ನಾಟಕ ಹಾಗೂ ಕೇರಳಲ್ಲಿ ಉಗ್ರರ ಬಹುದೊಡ್ಡ ಕ್ಯಾಂಪ್ ರೆಡಿಯಾಗಿದೆ  

ನವದೆಹಲಿ(ಜು.25): ಭಾರತದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿರುವ ಕುರಿತು ಗೌಪ್ಯ ಮಾಹಿತಿ ಕಲೆ ಹಾಕಿದ ಸಂಯುಕ್ತ ರಾಷ್ಟ್ರ ಒಕ್ಕೂಟ ಇದೀಗ ಮಹತ್ವದ ವರದಿ ಬಿಡುಗಡೆ ಮಾಡಿದೆ. ಈ ವರದಿ ಪ್ರಕರಾ ಕರ್ನಾಟಕ ಹಾಗೂ ಕೇರಳದಲ್ಲಿ ಐಸಿಸಿ ಉಗ್ರರ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾಹಿತಿ ನೀಡಿದೆ. ಈ ಗುಂಪು ಬಳಸಿಕೊಂಡು ಆಲ್ ಖೈದಾ ದಾಳಿ ನಡೆಸಲು ಸಂಚು ರೂಪಿಸಿರುವ ಕುರಿತು UN ವರದಿ ಹೇಳಿದೆ.

"

ಕರ್ನಾಟಕ ಸ್ಫೋಟಕ್ಕೆ ಬೆಂಗಳೂರಿನಿಂದಲೇ ಸಂಚು!.

ಭಾರತ, ಬಾಂಗ್ಲಾದೇಶ, ಮಯನ್ಮಾರ್ ರಾಷ್ಟ್ರಗಳಿಂದ 150 ರಿಂದ 200 ಉಗ್ರರನ್ನು ಹೊಂದಿರುವ ಅಲ್ ಖೈದಾ ಇದೀಗ ಐಸಿಸಿ ಉಗ್ರರ ಸಹಾಯದಿಂದ ಭಾರತದ ಮೇಲೆ ದಾಳಿ ಮಾಡಲು ಸಜ್ಜಾಗಿದೆ. ತಾಲಿಬಾನ್ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿರುವ ಅಲ್ ಖೈದಾ ಉಗ್ರರ ಸಂಘಟನೆಗೆ ಒಸಾಮಾ ಮೆಮೂದ್ ಮುಖ್ಯಸ್ಥನಾಗಿದ್ದಾನೆ. 

ಐಸಿಸ್ ಉಗ್ರ ಸಂಘಟನೆಯ ಅಂಗ ಸಂಸ್ಥೆಯಾಗಿ ಭಾರತಲ್ಲಿ ISISL(ಇಂಡಿಯನ್ ಅಫಿಲಿಯೇಟ್) ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ. 2019ರಲ್ಲಿ ಈ ಸಂಘಟನೆ ಭಾರತದಲಲ್ಲಿ 180 ರಿಂದ 200 ಉಗ್ರರೊಂದಿಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದೆ. ಇದೀಗ ಈ ಸಂಘಟನೆಯನ್ನು ಬಳಸಿಕೊಂಡು ಅಲ್ ಖೈದಾ ದಾಳಿಗೆ ಸಂಚು ರೂಪಿಸಿರುವುದು UN ವರದಿಯಲ್ಲಿ ಬಹಿರಂಗವಾಗಿದೆ.

2019ರಲ್ಲಿ ಭಾರತದಲ್ಲಿ ಐಸಿಸ್ ಸಂಘಟನೆ ಶಾಖೆ ತೆರೆದಿರುವುದಾಗಿ ಹೇಳಿಕೊಂಡಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಸಕ್ರಿಯಾಗಿದ್ದ ಐಸಿಸ್, ಸೇನೆ ಜೊತೆಗಿನ ಕಾಳಗದಲ್ಲಿ ಉಗ್ರ ಸಂಘಟೆ ಕಮಾಂಡರ್ ಹತನಾಗಿದ್ದ. ಈ ವೇಳೆ ಭಾರತದಲ್ಲಿ ಉಗ್ರ ಚಟುವಟಿಕೆ ಮತ್ತಷ್ಟು ಬಲಪಡಿಸುವುದಾಗಿ ಹೇಳಿಕೊಂಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು