ಮುಸ್ಲಿಂ ಮತಕ್ಕಾಗಿ ಸುನ್ನತ್‌ ಬೇಕಾದರೂ ಮಾಡಿಸಿಕೊಳ್ತಾರೆ: ಬಿಜೆಪಿ ಸಚಿವನ ವಿವಾದಿತ ಹೇಳಿಕೆ!

By Suvarna NewsFirst Published Nov 7, 2021, 8:06 AM IST
Highlights

* ಮುಸ್ಲಿಂ ಮತಕ್ಕಾಗಿ ಸುನ್ನತ್‌ ಬೇಕಾದರೂ ಮಾಡಿಸಿಕೊಳ್ತಾರೆ: ಶುಕ್ಲಾ

* ಮುಸ್ಲಿಂ ಮತಕ್ಕಾಗಿ ಅಖಿಲೇಶ್‌ ಕೀಳುಮಟ್ಟಕ್ಕೆ: ಬಿಜೆಪಿ ಸಚಿವನ ವಿವಾದಿತ ಹೇಳಿಕೆ

ಬರಿಲ್ಲಾ(ನ.07): ‘ಎಸ್‌ಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ (Former CM Akhilesh Yadav), ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿದ್ದಾರೆ. ಯಾದವ್‌ ಮುಸ್ಲಿಮರ ಮತಕ್ಕಾಗಿ ಮತಾಂತರವಾಗಿ, ಸುನ್ನತ್‌ ಬೇಕಾದ್ರೂ ಮಾಡಿಸಿಕೊಳ್ತಾರೆ’ ಎಂದು ಬಿಜೆಪಿ ಸಚಿವ ಸ್ವರೂಪ್‌ ಶುಕ್ಲಾ (Anand Swarup Shukla) ವಿವಾದಿತ ಹೇಳಿಕೆ ನೀಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಶುಕ್ಲಾ, ‘ದೇೕಶ ವಿಭಜನೆಗೆ ಕಾರಣವಾದ ಮಹ್ಮದ್‌ ಅಲಿ ಜಿನ್ನಾರನ್ನು (Muhammad Ali Jinnah) ಭಾರತದ ಸ್ವಾತಂತ್ರ್ಯ ಹೋರಾಟಗಾರನೆಂದು ಕರೆದು, ಹೀರೋ ಎಂದು ಅಖಿಲೇಶ್‌ ಬಣ್ಣಿಸಿದ್ದರು. ಅಖಿಲೇಶ್‌ ಯಾದವ್‌ ಮುಸ್ಲಿಂ ಮತಕ್ಕಾಗಿ ಮತಾಂತರವಾಗಿ, ಸುನ್ನತ್‌ (Sunnat) ಬೇಕಾದ್ರೂ ಮಾಡಿಸಿಕೊಳ್ತಾರೆ. ಮಾಜಿ ಸಿಎಂಗೆ ಪಾಕ್‌ನ ಗುಪ್ತಚರ ಇಲಾಖೆ ಐಎಸ್‌ಐನಿಂದ ದುಡ್ಡು ಬರುತ್ತಿದೆ ಎಂದೂ ಆರೋಪಿಸಿದರು.

ಇದರಿಂದ ಆಕ್ರೋಶಗೊಂಡಿರುವ ಎಸ್‌ಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸ್ವರೂಪ್‌ ಶುಕ್ಲಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು, ಅಲ್ಲದೇ ಸಮಾಜದಲ್ಲಿ ಕೋಮುದ್ವೇಷ ಹರಡಲು ಯತ್ನಿಸಿದ ಆರೋಪದ ಮೇಲೆ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಮುಸ್ಲಿಂರ ಮತಕ್ಕಾಗಿ ಅಖಿಲೇಶ್‌ ಯಾದವ್‌ ಸುನ್ನತ್‌ ಮಾಡಿ

ಜಿನ್ನಾ ಪರ ಹೇಳಿಕೆ: ಮತ್ತೆ ಅಖಿಲೇಶ್‌ ಸಮರ್ಥನೆ

ಇನ್ನು ಭಾರತವನ್ನು ಇಬ್ಭಾಗ ಮಾಡಿದ ಮೊಹಮ್ಮದ್‌ ಅಲಿಜಿನ್ನಾ ಅವರನ್ನು ಉತ್ತರ ಪ್ರದೇಶ (Uttar Pradesh) ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರು ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಅಖಿಲೇಶ್‌ ಅವರು, ‘ಜಿನ್ನಾ ಸ್ವಾತಂತ್ರ್ಯಯೋಧ’ ಎಂದಿದ್ದರು. ಅವರ ಹೇಳಿಕೆ ರಾಜಕೀಯ ನಾಯಕರಿಂದ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಉತ್ತರಿಸಿದ ಅಖಿಲೇಶ್‌, ‘ಜಿನ್ನಾ ಅವರ ಕುರಿತು ತಮ್ಮನ್ನು ಟೀಕಿಸುತ್ತಿರುವವರು ಮೊದಲು ಇತಿಹಾಸದ ಪುಸ್ತಕಗಳನ್ನು ಓದಬೇಕು’ ಎಂದು ಸಲಹೆ ನೀಡಿದ್ದಾರೆ.

ಇದಕ್ಕೆ ಹಿಂದಿಯಲ್ಲಿ ಟ್ವೀಟ್‌ ಮಾಡಿದ ಬಿಜೆಪಿ ನಾಯಕ ಸ್ವತಂತ್ರ ದೇವ ಸಿಂಗ್‌ (Swatantra Dev Singh), ‘ಅಖಿಲೇಶ್‌ ಅವರಲ್ಲಿ ಇನ್ನೂ ಜಿನ್ನಾ ಕುರಿತ ಪ್ರೀತಿ ಅಚಲವಾಗಿದೆ. ಜಿನ್ನಾ ಅವರ ಬಗ್ಗೆ ತಿಳಿಯಲು ನಾನು ಭಾರತ ಅಥವಾ ಪಾಕಿಸ್ತಾನದ ಪೈಕಿ ಯಾವ ಪುಸ್ತಕ ಓದಬೇಕು. ದಯವಿಟ್ಟು ಹೇಳಿ’ ಎಂದು ತೀಕ್ಷ್ಣ ತಿರುಗೇಟು ನೀಡಿದರು.

ಅಲ್ಲದೆ ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಸಚಿವ ಆನಂದ ಸ್ವರೂಪ್‌ ಶುಕ್ಲಾ ಅವರು, ‘ಭಾರತದ ಇಬ್ಭಾಗಕ್ಕೆ ಕಾರಣವಾದ ಜಿನ್ನಾ ಅವರನ್ನು ಭಾರತೀಯರು ಯಾರೂ ಇಷ್ಟಪಡಲ್ಲ. ಆದಾಗ್ಯೂ, ಅಖಿಲೇಶ್‌ ಅವರು ಯಾವ ಒತ್ತಡಕ್ಕೆ ಮಣಿದು ಜಿನ್ನಾ ಪರ ವಹಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ನಾನು ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ: ಅಖಿಲೇಶ್‌

 

 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಸ್ಪಷ್ಟಪಡಿಸಿದ್ದಾರೆ.

ಅಖಿಲೇಶ್‌ ಪ್ರಸ್ತುತ ಅಜಮಗಢ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು ಈ ಹಿನ್ನೆಲೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಸೋಮವಾರ ತಿಳಿಸಿದ್ದಾರೆ. ಆದರೂ ಈ ಹಿಂದಿನಂತೆ ಎಸ್‌ಪಿ ಅಧಿಕಾರಕ್ಕೆ ಬಂದರೆ ಅವರು ಮುಖ್ಯಮಂತ್ರಿ ಆಗಿ ವಿಧಾನ ಪರಿಷತ್‌ ಸದಸ್ಯರಾಗಬಹುದು ಎನ್ನಲಾಗಿದೆ.

ಇನ್ನು ರಾಷ್ಟ್ರೀಯ ಲೋಕ ದಳ(ಆರ್‌ಎಲ್‌ಡಿ) ಜತೆಗೆ ಚುನಾವಣಾಪೂರ್ವ ಮೈತ್ರಿ ಮಾತುಕತೆಯಾಗಿದ್ದು, ಸೀಟು ಹಂಚಿಕೆ ಕೂಡ ನಿರ್ಧಾರವಾಗಿದೆ. ಅಲ್ಲದೇ ಅವರ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಸ್ಥಾಪಿಸಿರುವ ಪ್ರಗತಿಶೀಲ ಸಮಾಜವಾದಿ ಲೋಹಿಯಾ ಪಕ್ಷ(ಪಿಎಸ್‌ಪಿಎಲ್‌) ದಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!