ಮಹಾ ಡಿಸಿಎಂ ಪವಾರ್‌ ಗಡಿ ಕ್ಯಾತೆ ಕನ್ನಡಿಗರ ಆಕ್ರೋಶ!

By Precilla Olivia DiasFirst Published May 2, 2022, 6:16 AM IST
Highlights

* ಕರ್ನಾಟಕದ ಮರಾಠಿ ಭಾಷಿಕ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕು

* ಮರಾಠಿಗರ ಹೋರಾಟಕ್ಕೆ ಎಲ್ಲಾ ಬೆಂಬಲ: ಡಿಸಿಎಂ ಅಜಿತ್‌ ಪವಾರ್‌

* ರಾಜ್ಯ ಸರ್ಕಾರ, ಜನಪ್ರನಿಧಿಗಳ ವಿರುದ್ಧ ಕನ್ನಡಪರ ಸಂಘಟನೆಗಳ ಕಿಡಿ

ಪುಣೆ(ಮೇ.02): ಪ್ರತಿವರ್ಷದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತೊಮ್ಮೆ ಕರ್ನಾಟಕದೊಂದಿಗೆ ಗಡಿ-ಕ್ಯಾತೆ ತೆಗೆದಿದ್ದಾರೆ. ಮಹಾರಾಷ್ಟ್ರ ಸಂಸ್ಥಾಪನಾ ದಿನದ ಅಂಗವಾಗಿ ಪುಣೆಯಲ್ಲಿ ಭಾನುವಾರ ಮಾತನಾಡಿದ ಅವರು ಮರಾಠಿ ಮಾತನಾಡುವ ಜನರು ನೆಲೆಸಿರುವ ಕರ್ನಾಟಕದ ಗಡಿಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸುವವರೆಗೂ ಅವರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

‘ಮಹಾರಾಷ್ಟ್ರ ಸಂಸ್ಥಾಪನೆಯ 62 ನೇ ವರ್ಷ ಆಚರಿಸುತ್ತಿದ್ದರೂ ಮರಾಠಿ ಭಾಷಿಕರು ವಾಸವಾಗಿರುವ ಕರ್ನಾಟಕದ ಬೀದರ್‌, ಭಾಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿ ಹಾಗೂ ಇನ್ನಿತರ ಪ್ರದೇಶಗಳು ಮಹಾರಾಷ್ಟ್ರದಲ್ಲಿ ಇನ್ನೂ ಸೇರ್ಪಡೆಯಾಗಿಲ್ಲ ಎಂಬುದು ವಿಷಾದನೀಯ. ಮಹಾರಾಷ್ಟ್ರದ ಸರ್ಕಾರ ಹಾಗೂ ಜನತೆ ಕರ್ನಾಟಕದ ಗಡಿಭಾಗದಲ್ಲಿರುವ ಮರಾಠಿ ಭಾಷಿಕರ ಹೋರಾಟಕ್ಕೆ ಬೆಂಬಲ ಸೂಚಿಸುತ್ತೇವೆ. ಕರ್ನಾಟಕದ ಮರಾಠಿ ಭಾಷಿಕ ಗ್ರಾಮಗಳು ಕರ್ನಾಟಕದ ಭಾಗವಾಗುವವರೆಗೂ ಬೆಂಬಲ ಮುಂದುವರೆಯಲಿದೆ’ ಎಂದು ಹೇಳಿದ್ದಾರೆ.

ಮಹಾ ಡಿಸಿಎಂ ಹೇಳಿಕೆಗೆ ಕನ್ನಡಿಗರ ಆಕ್ರೋಶ

click me!