ವಿಮಾನ ಪ್ರಯಾಣದಲ್ಲಿ ಯಾವ ಏರ್‌ಲೈನ್ ಉತ್ತಮವಾಗಿದೆ? ಸಮಯ ನಿರ್ವಹಣೆ, ಪ್ರಯಾಣ, ಪ್ರಯಾಣಿಕರ ಅನುಭವ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಉತ್ತಮ ಏರ್‌ಲೈನ್ಸ್ ಯಾವುದು ಅನ್ನೋ ಪಟ್ಟಿ ಬಿಡುಗಡೆಯಾಗಿದೆ.
ನವದೆಹಲಿ(ಡಿ.04) ಭಾರತ ಸೇರಿದಂತೆ ವಿಶ್ವದಲ್ಲೇ ಇದೀಗ ವಿಮಾನ ಪ್ರಯಾಣದ ಸಂಖ್ಯೆ ಹೆಚ್ಚು. ಹೀಗಾಗಿ ಎಲ್ಲಾ ವಿಮಾನ ನಿಲ್ದಾಣಗಳು ತುಂಬಿ ತುಳುಕುತ್ತಿದೆ. ಮಹಾ ನಗರಗಳು ಎರಡು ಹಾಗೂ ಮೂರನೇ ವಿಮಾನ ನಿಲ್ದಾಣದ ಮೂಲಕ ಕಾರ್ಯನಿರ್ವಹಿಸಲು ಸಜ್ಜಾಗುತ್ತಿದೆ. ವಿಶ್ವದಲ್ಲೇ ಸಾವಿರಾರು ಏರ್‌ಲೈನ್ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಇದರಲ್ಲಿ ಅತ್ಯುತ್ತಮ ಯಾವುದು? ಆರಾಮದಾಯಕ ಪ್ರಯಾಣ, ತಕ್ಕ ಸಮಯದಲ್ಲಿ ಆಗಮನ ಹಾೂ ನಿರ್ಗಮನ, ವಿಮಾನದಲ್ಲಿ ನೀಡುವ ಆಹಾರ, ವಿಮಾನದ ಕಾರ್ಯನಿರ್ವಹಣೆ, ಶುಚಿತ್ವ, ಪ್ರಕರಣ, ಪ್ರಯಾಣಿಕರು ನೀಡಿದ ಅಭಿಪ್ರಾಯ ಸೇರಿದಂತೆ ಹಲವು ಕಾರಣಗಳನ್ನು ಆಧಾರವಾಗಿಟ್ಟುಕೊಂಡು ಏರ್‌ಹೆಲ್ ಸ್ಕೋರ್ 2024ರ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವದ ಅತ್ಯುತ್ತಮ ವಿಮಾನ ಪ್ರಯಾಣ ಹಾಗೂ ಅತೀ ಕೆಟ್ಟ ವಿಮಾನ ಪ್ರಯಾಣಗಳ ಪಟ್ಟಿ ಇದೀಗ ಬಿಡುಗಡೆಯಾಗಿದೆ. ಆದರೆ ಈ ಪಟ್ಟಿಯಲ್ಲಿ ಭಾರತದ ಅತೀದೊಡ್ಡ ವಿಮಾಯಾನ ಸಂಸ್ಥೆ ಇಂಡಿಗೋ ಅತ್ಯಂತ ಕಳಪೆ ಅಂಕ ಪಡೆದಿದೆ.
ಏರ್‌ಹೆಲ್ ಸಂಸ್ಥೆ ಪ್ರಯಾಣಿಕರ ಫೀಡ್ ಬ್ಯಾಕ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಆಧರಿಸಿ ಈ ಪಟ್ಟಿ ತಯಾರಿಸಿದೆ. ಈ ಪಟ್ಟಿಯಲ್ಲಿ ಭಾರತದ ಇಂಡಿಗೋ 103ನೇ ಸ್ಥಾನ ಪಡೆದು ಅತೀ ಕಳಪೆ ಅನ್ನೋ ಹಣೆಪಟ್ಟಿ ಹೊತ್ತುಕೊಂಡಿದೆ. ಭಾರತದಲ್ಲಿ ಅತೀ ಹೆಚ್ಚಿನ ಮಂದಿ ಪ್ರಯಾಣಿಸದ ವಿಮಾನ ಇಂಡಿಗೋ. ಇತರ ಕೆಲ ಏರ್‌ಲೈನ್ಸ್‌ಗೆ ಹೋಲಿಕೆ ಮಾಡಿದರೆ ಇಂಡಿಗೋ ಪರ್ವಾಗಿಲ್ಲ ಅನ್ನೋ ಮಾತನ್ನು ಹಲವು ಭಾರತೀಯರು ಹೇಳಿದ್ದಾರೆ.ಆದರೆ ಜಾಗತಿಕ ಮಟ್ಟದಲ್ಲಿ ಇಂಡಿಗೋ ಅತೀ ಕಳಪೆ ವಿಮಾನಯಾನಸಂಸ್ಥೆಯಾಗಿ ಮಾರ್ಪಟ್ಟಿದೆ.
ಪ್ರಮುಖವಾಗಿ ಪ್ರಯಾಣಿಕರ ಅನುಭವದಲ್ಲಿ ತೀರಾ ಕಳಪೆ ಎಂದವರೇ ಹೆಚ್ಚು. ಜೊತೆಗೆ ದೂರು ದುಮ್ಮಾನಗಳೂ ಕೂಡ ಹೆಚ್ಚು. ನಿರ್ಗಮನ ಹಾಗೂ ಆಗಮನ ಸಮಯದಲ್ಲೂ ವಿಳಂಭ ಸೇರಿದಂತೆ ಹಲವು ಫೀಡ್ ಬ್ಯಾಕ್ ಇಂಡಿಗೋಗೋ ವಿರುದ್ಧವಾಗಿದೆ. ಹೀಗಾಗಿ 103ನೇ ಸ್ಥಾನ ಪಡೆದಿದೆ. ಇನ್ನು ಕಳಪೆ ಪಟ್ಟಿಯಲ್ಲಿ 100ನೇ ಸ್ಥಾನದಲ್ಲಿ ಗ್ರೀಕ್ ಏರ್‌ಲೈನ್ಸ್ ಸ್ಕೈ ಎಕ್ಸ್‌ಪ್ರೆಸ್ ಸ್ಥಾನ ಪಡೆದಿದೆ. ಇನ್ನು ಮಾರಿಷಸ್‌ನ ತರೂಮ್ ಏರ್‌ಲೈನ್ಸ್ ಕೂಡ ಕಳಪೆ ಹಣೆಹಟ್ಟಿ ಪಡೆದುಕೊಂಡಿದೆ.
undefined
ಏರ್‌ಹೆಲ್ 2024ರ ವರದಿ ಪ್ರಕಾರ ಬೆಲ್ಜಿಯಂ ಬ್ರೂಸೆಲ್ಸ್ ಏರ್‌ಲೈನ್ಸ್ ನಂಬರ್ 1 ಸ್ಥಾನ ಪಡೆದಿದೆ. ಬ್ರೂಸೆಲ್ಸ್ ಏರ್‌ಲೈನ್ಸ್ ಅತ್ಯುತ್ತಮ ಪ್ರಯಾಣ ಅನುಭವ ನೀಡಲಿದೆ ಎಂದು ವರದಿ ಮಾಡಿದೆ. ತಕ್ಕ ಸಮಯಕ್ಕೆ ನಿರ್ಗಮನ ಹಾಗೂ ಆಗಮನ, ಪ್ರಯಾಣಿಕರ ಪ್ರಯಾಣ ಅನುಭವ, ಸಿಬ್ಬಂದಿಗಳ ನಡವಳಿಕೆ, ಆಹಾರ, ಶುಚಿತ್ವ ಸೇರಿದಂತೆ ಎಲ್ಲದರಲ್ಲೂ ಬ್ರೂಸೆಲ್ಲ್ ಏರ್‌ಲೈನ್ಸ್ ನಂಬರ್ 1 ಸ್ಥಾನ ಪಪಡೆದಿದೆ.
ವಿಶ್ವದ ಟಾಪ್ 10 ಅತ್ಯುತ್ತಮ ಏರ್‌ಲೈನ್ಸ್
ಬ್ರೂಸೆಲ್ಸ್ ಏರ್‌ಲೈನ್ಸ್
ಖತಾರ್ ಏರ್‌ವೇಸ್
ಯುನೈಟೆಡ್ ಏರ್‌ಲೈನ್ಸ್
ಅಮೆರಿಕನ್ ಏರ್‌ಲೈನ್ಸ್
ಪ್ಲೇ ಏರ್‌ಲೈನ್ಸ್(ಐಸ್‌ಲೆಂಡ್)
ಆಸ್ಟ್ರೀಯನ್ ಏರ್‌ಲೈನ್ಸ್
ಎಲ್ಒಟಿ ಪಾಲೀಶ್ ಏರ್‌ಲೈನ್ಸ್
ಏರ್ ಅರೇಬಿಯಾ
ವೈಡೆರ್ ಏರ್‌ಲೈನ್ಸ್
ಏರ್ ಸರ್ಬಿಯಾ
ಯುನೈಟೆಡ್ ಏರ್‌ಲೈನ್ಸ್ ಹಾಗೂ ಅಮೆರಿಕನ್ ಏರ್‌ಲೈನ್ಸ್ ಕೆಲ ಆಪರೇಶನ್ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅತ್ಯುತ್ತಮ ವಿಮಾನ ಸೇವೆಯಲ್ಲಿ 3 ಮತ್ತು ನಾಲ್ಕನೇ ಸ್ಥಾನ ಪಡೆದಿದೆ. ಇನ್ನು ಉತ್ತಮ ಸೇವೆಗೆ ಹೆಸರಾದ ಡೆಲ್ಟಾ ಏರ್‌ಲೈನ್ಸ್ ಜುಲೈ ತಿಂಗಳಲ್ಲಿ ತೀವ್ರ ಹಿನ್ನಡ ಅನುಭವಿಸಿತ್ತು. ಹೀಗಾಗಿ ಇದೀಗ 17ನೇ ಸ್ಥಾನಕ್ಕೆ ಕುಸಿದಿದೆ. ಕೆನಡಾ ಕ್ಯಾರಿಯರ್ ಏರ್ 36ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಹಲವು ವಿಮಾನಯಾನ ಸಂಸ್ಥೆಗಳ ಸ್ಥಾನಗಳು ಪಲ್ಲಟವಾಗಿದೆ. ದೂರುಗಳು ಹೆಚ್ಚಾಗುತ್ತಿದ್ದಂತೆ ವಿಮಾನ ಯಾನ ಸಂಸ್ಥೆಗಳು ಕಳಪೆ ಹಣೆಪಟ್ಟಿ ಹೊತ್ತುಕೊಂಡಿದೆ.