Air India Plane Crash: ಟೇಕ್ ಆಫ್ ಆಗ್ತಿದ್ದಂತೆ ವಿಮಾನ ಅಪಘಾತಕ್ಕೀಡಾಗಲು ಕಾರಣ ಏನು?

Published : Jun 12, 2025, 03:32 PM ISTUpdated : Jun 12, 2025, 03:39 PM IST
Ahmedabad Plane Crash

ಸಾರಾಂಶ

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗ್ತಿದ್ದಂತೆ ವಿಮಾನ ಅಪಘಾತಕ್ಕೀಡಾಗಿದ್ದು, 242 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬಹುತೇಕ ಬಾರಿ ವಿಮಾನ ಟೇಕ್ ಆಫ್ ಆದ ತಕ್ಷಣ ಅಪಘಾತಕ್ಕೀಡಾಗುತ್ತದೆ. ಅದಕ್ಕೆ ಕಾರಣ ಇಲ್ಲಿದೆ. 

ಅಹಮದಾಬಾದ್ (Ahmedabad)ನಲ್ಲಿ ಏರ್ ಇಂಡಿಯಾ (Air India ) ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ.  ಲಂಡನ್‌ ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 737 ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿ 242 ಪ್ರಯಾಣಿಕರೂ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು, ದೊಡ್ಡ ಹೊಗೆ ಇಡೀ ಪ್ರದೇಶವನ್ನು ಆವರಿಸಿದೆ. ಆರಂಭಿಕ ಮಾಹಿತಿಯ ಪ್ರಕಾರ, ಸರ್ದಾರ್ ವಲ್ಲಭ ಭಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಅಪಘಾತ ಸಂಭವಿಸಿದೆ. ವಿಮಾನ ಟೇಕ್ ಆಪ್ ಆಗಿ ಕೆಲವೇ ಕ್ಷಣದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ಟೇಕ್ ಆಫ್ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು ಇದೇ ಮೊದಲಲ್ಲ. ಬಹುತೇಕ ವಿಮಾನ ಅಪಘಾತಗಳು ಟೇಕ್ ಆಫ್ ಆಗುವಾಗ ನಡೆಯುತ್ತವೆ. ಇದಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

• ಟೇಕ್ ಆಫ್ ಸಮಯವನ್ನು ಅತ್ಯಂತ ನಿರ್ಣಾಯಕ ಸಮಯ ಎಂದು ಪರಿಗಣಿಸಲಾಗುತ್ತದೆ. ಟೇಕ್ ಆಫ್ ಸಮಯದಲ್ಲಿ, ವಿಮಾನ ಹೆಚ್ಚಿನ ವೇಗವನ್ನು ಪಡೆಯುತ್ತದೆ. ಪೈಲಟ್ ಸೀಮಿತ ಸಮಯದಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತೆ. ಎಂಜಿನ್, ರನ್ವೇ, ಹವಾಮಾನ ಮತ್ತು ವಿಮಾನದ ವ್ಯವಸ್ಥೆಯ ಮೇಲೆ ಗಮನ ಹರಿಸ್ಬೇಕು. ಯಾವುದೇ ಸಣ್ಣ ತಪ್ಪು ಅಥವಾ ದೋಷವಿದ್ರೂ ಅದು ದೊಡ್ಡ ಅಪಘಾತಕ್ಕೆ ಕಾರಣವಾಗುತ್ತದೆ.

• ಪೈಲಟ್ ತಪ್ಪು ಕೂಡ ಟೇಕ್ ಆಫ್ ವೇಳೆ ವಿಮಾನ ಅಪಘಾತಗಳಿಗೆ ಪ್ರಮುಖ ಕಾರಣವಾಗಿರುತ್ತದೆ. ಪೈಲಟ್ ಟೇಕ್ ಆಫ್ ಸಮಯದಲ್ಲಿ ವೇಗ, ರನ್ವೇ ಲಿಫ್ಟ್-ಆಫ್ ಪಾಯಿಂಟ್ ಅಥವಾ ಪಿಚ್ ಕೋನವನ್ನು ತಪ್ಪಾಗಿ ನಿರ್ಣಯಿದ್ರೆ, ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗದೆ ಅಪಘಾತವಾಗುತ್ತದೆ.

• ಟೇಕ್ ಆಫ್ ಸಮಯದಲ್ಲಿ, ಎಂಜಿನ್ ಗರಿಷ್ಠ ಸಾಮರ್ಥ್ಯದಲ್ಲಿರುತ್ತೆ. ಈ ಟೈಂನಲ್ಲಿ ಎಂಜಿನ್ನಲ್ಲಿ ಯಾವುದೇ ತಾಂತ್ರಿಕ ದೋಷ ಕಾಣಿಸಿಕೊಂಡ್ರೂ ಅಪಾಯ ಹೆಚ್ಚು. ಪಕ್ಷಿ ಡಿಕ್ಕಿ ಹೊಡೆದ್ರೆ, ಇಂಧನ ಒತ್ತಡದ ಸಮಸ್ಯೆಯಾದ್ರೆ ಅಥವಾ ಉತ್ಪಾದನಾ ದೋಷ ಕಂಡು ಬಂದ್ರೆ ಅದನ್ನು ತಡೆಯೋದು ಕಷ್ಟ.

• ಟೇಕ್ ಆಫ್ ಸಮಯದಲ್ಲಿ ವಿಮಾನದ ತಾಂತ್ರಿಕ ದೋಷಗಳು ಅಪಘಾತಕ್ಕೆ ಕಾರಣವಾಗುತ್ತವೆ, ಲ್ಯಾಂಡಿಂಗ್ ಗೇರ್, ಹೈಡ್ರಾಲಿಕ್ಸ್, ಆಟೋಥ್ರೊಟಲ್ ಸಿಸ್ಟಮ್ ಅಥವಾ ಏರ್ಸ್ಪೀಡ್ ಇಂಡಿಕೇಟರ್ನಲ್ಲಿ ದೋಷ ಕಂಡು ಬಂದ್ರೂ ವಿಮಾನ ಅಪಘಾತಕ್ಕೀಡಾಗುತ್ತದೆ.

• ಟೇಕ್ ಆಫ್ ಮಾಡುವಾಗ ಹವಾಮಾನ ಕೂಡ ಮುಖ್ಯವಾಗುತ್ತದೆ. ಅತಿಯಾದ ಗಾಳಿ, ಗುಡುಗು ಸಹಿತ ಮಳೆ, ಮೋಡ ಮುಸುಕಿದ ವಾತಾವರಣ ಇಲ್ಲವೆ ಹಠಾತ್ ಬಲವಾದ ಕೆಳಮುಖ ಗಾಳಿ ಅಪಘಾತಕ್ಕೆ ಕಾರಣವಾಗುತ್ತದೆ.

ಟೇಕ್ ಆಫ್ ಸಮಯದಲ್ಲಿ ನಡೆಯುವ ಅಪಘಾತಕ್ಕೆ ಪೈಲಟ್ ಕಾರಣ ಎನ್ನಲಾಗುತ್ತದೆ. ಯಾಕೆಂದ್ರೆ ಸಂಪೂರ್ಣ ಟೇಕ್ ಆಫ್ ಪ್ರಕ್ರಿಯೆ ಪೈಲಟ್ನ ನಿಯಂತ್ರಣದಲ್ಲಿರುತ್ತದೆ. ಪ್ರತಿಯೊಂದು ನಿರ್ಧಾರವನ್ನು ಸೆಕೆಂಡುಗಳಲ್ಲಿ ತೆಗೆದುಕೊಳ್ಳಬೇಕು. ಎಂಜಿನ್ ವಿಫಲವಾದ್ರೆ, ಪಕ್ಷಿ ಡಿಕ್ಕಿ ಹೊಡೆದ್ರೆ, ಸಿಸ್ಟಮ್ ಅಲಾರಾಂ ಸದ್ದು ಮಾಡಿದ್ರೆ ಪೈಲಟ್, ಟೇಕ್ ಆಫ್ ಮಾಡ್ಬೇಕೆ ಬೇಡ್ವೇ ಎಂಬುದನ್ನು ಸೆಕೆಂಡಿನಲ್ಲಿ ನಿರ್ಧರಿಸಬೇಕಾಗುತ್ತೆ. ಇಲ್ಲಿ ಪೈಲಟ್ನ ತರಬೇತಿ, ಅನುಭವ ಮತ್ತು ಮಾನಸಿಕ ಸ್ಥಿರತೆ ಹೆಚ್ಚು ಮುಖ್ಯವೆಂದು ತಜ್ಞರು ನಂಬ್ತಾರೆ.

ದಕ್ಷಿಣ ಕೊರಿಯಾದಲ್ಲಿ 737 ವಿಮಾನ ಅಪಘಾತಕ್ಕೀಡಾಗಿ 179 ಜನರು ಸಾವನ್ನಪ್ಪಿದ ಆರು ತಿಂಗಳಲ್ಲೇ ಈ ಅಪಘಾತ ಸಂಭವಿಸಿದೆ. ಅಕ್ಟೋಬರ್ 2018 ರಲ್ಲಿ, ಬೋಯಿಂಗ್ನ ಲಯನ್ ಏರ್ ಫ್ಲೈಟ್ 610 ಇಂಡೋನೇಷ್ಯಾದ ಜಕಾರ್ತಾದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲಿ ಜಾವಾ ಸಮುದ್ರಕ್ಕೆ ಅಪ್ಪಳಿಸಿತ್ತು. ಅದರಲ್ಲಿದ್ದ ಎಲ್ಲಾ 189 ಜನರು ಸಾವನ್ನಪ್ಪಿದ್ದರು. ಮಾರ್ಚ್ 2019 ರಲ್ಲಿ, ಇಥಿಯೋಪಿಯನ್ ಏರ್ಲೈನ್ಸ್ ಫ್ಲೈಟ್ 302 ಅಡಿಸ್ ಅಬಾಬಾದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು. ದುರ್ಘಟನೆಯಲ್ಲಿ 157 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು.

ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಪ್ರಕಾರ, ಟೇಕ್ ಆಫ್ ಅಪಘಾತ ಶೇಕಡಾ 65ರಷ್ಟು ಮಾನವ ದೋಷದಿಂದ ಆಗುತ್ತದೆ. ಶೇಕಡಾ 20ರಷ್ಟು ತಾಂತ್ರಿಕ ದೋಷದಿಂದ ಆಗುತ್ತದೆ. ಶೇಕಡಾ 10ರಷ್ಟು ಹವಾಮಾನ ಕಾರಣವಾಗುತ್ತದೆ. ಶೇಕಡಾ 5 ಇತರ ಕಾರಣಗಳಿಂದ ಸಂಭವಿಸುತ್ತದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್