ಕನಿಷ್ಠ ಆಭರಣಗಳನ್ನು ಧರಿಸಿ, ಡ್ಯೂಟಿ-ಫ್ರೀಗೆ ಭೇಟಿ ನೀಡಬೇಡಿ, ಅತಿಥಿ ಬೋರ್ಡಿಂಗ್‌ಗೆ ಮೊದಲು ಕುಡಿಯಬೇಡಿ ಮತ್ತು ತಿನ್ನಬೇಡಿ ಎಂದು ಏರ್ ಇಂಡಿಯಾ ತನ್ನ ಸಿಬ್ಬಂದಿಗಳಿಗೆ ಹೊಸ ನಿಯಮ ಪ್ರಕಟಿಸಿದೆ.
ನವದೆಹಲಿ(ಫೆ.13): ಏರ್‌ಲೈನ್‌ನ (airline’s) ಸಮಯೋಚಿತ ಕಾರ್ಯಕ್ಷಮತೆಯನ್ನು (on-time performance) ಸುಧಾರಿಸುವ ನಿಟ್ಟಿನಲ್ಲಿ ಭಾನುವಾರ ಏರ್ ಇಂಡಿಯಾ (Air India) ತನ್ನ ಸಿಬ್ಬಂದಿಗಳಿಗೆ ಹೊಸ ಸಲಹೆಯನ್ನು ಪ್ರಕಟಿಸಿದೆ. ಕನಿಷ್ಠ ಆಭರಣಗಳನ್ನು ಧರಿಸಿ, ಡ್ಯೂಟಿ-ಫ್ರೀಗೆ ಭೇಟಿ ನೀಡಬೇಡಿ, ಅತಿಥಿ ಬೋರ್ಡಿಂಗ್‌ಗೆ ಮೊದಲು ಕುಡಿಯಬೇಡಿ ಮತ್ತು ತಿನ್ನಬೇಡಿ ಎಂದು ಹೊಸ ಸಲಹೆ ನೀಡಿದೆ.
ಏರ್ ಇಂಡಿಯಾ ಸಿಬ್ಬಂದಿಗಳಿಗೆ ನೀಡಿರುವ ಸಲಹೆ ಈ ಕೆಳಗಿನಂತಿದೆ:
ಬಾಡಿ ಮಾಸ್ ಇಂಡೆಕ್ಸ್ (BMI) ಮತ್ತು ವಿಮಾನ ಹಾರಾಟಕ್ಕೂ ಮುನ್ನ ಕ್ಯಾಬಿನ್ ಸಿಬ್ಬಂದಿಗೆ ಮಾಡುವ ತೂಕದ ತಪಾಸಣೆಗಳನ್ನು ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿ ಒಕ್ಕೂಟವು ವಿರೋಧಿಸಿದ ವಾರಗಳ ನಂತರ ಈಗ ಏರ್ ಇಂಡಿಯಾ ಹೊಸದಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಜನವರಿ 20 ರಂದು ನೀಡಿದ ಮಾರ್ಗಸೂಚಿಯಂತೆ ಪ್ರತಿ ಕ್ಯಾಬಿನ್ ಸಿಬ್ಬಂದಿ ಸದಸ್ಯರು ಈಗ ತ್ರೈಮಾಸಿಕ ಆಧಾರದ ಮೇಲೆ BMI ಮತ್ತು ತೂಕದ ತಪಾಸಣೆಗೆ ಒಳಪಡುತ್ತಾರೆ ಎಂದು ಏರ್ ಇಂಡಿಯಾ ಹೇಳಿದೆ.
2nd PUC Revised Time Table: ಗಮನಿಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ
ಏಕರೂಪದ ಮಾನದಂಡಗಳು ಮತ್ತು ನಿಬಂಧನೆಗಳ ಪ್ರಕಾರ ಚೆನ್ನಾಗಿ ಬಟ್ಟೆ ಧರಿಸಿರುವ ಮತ್ತು ಚೆನ್ನಾಗಿ ಮೇಕಪ್ ಮಾಡಿ ಅಂದವಾಗಿರುವ ಕ್ಯಾಬಿನ್ ಸಿಬ್ಬಂದಿ, ವಿಮಾನಯಾನದ ಧನಾತ್ಮಕ ಮತ್ತು ವೃತ್ತಿಪರ ಚಿತ್ರಣವನ್ನು ಪ್ರಸ್ತುತಪಡಿಸುತ್ತಾರೆ ಎಂದು ಏರ್‌ಇಂಡಿಯಾ ತನ್ನ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಜನವರಿ 27 ರಂದು ಟಾಟಾ ಕಂಪನಿ ಶೇಕಡಾ 50 ರಷ್ಟು ಜಂಟಿ ಪಾಲುದಾರಿಕೆಯೊಂದಿಗೆ ಏರ್ ಇಂಡಿಯಾವನ್ನು ಮರಳಿ ತನ್ನ ವಶಕ್ಕೆ ಪಡೆದುಕೊಂಡಿತು. ಇದಾದ ಬಳಿಕ ಕಂಪೆನಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ.
ಡ್ರೋನ್ ಚಲಾಯಿಸಲು ಇನ್ನ್ಮುಂದೆ ಪೈಲಟ್ ಲೈಸೆನ್ಸ್ ಅಗತ್ಯವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ!
75 ವರ್ಷಗಳ ಹಿಂದೆ ಏರ್ ಇಂಡಿಯಾ ಹೆಸರು ಬಂದಿದ್ದು ಹೇಗೆ? : ಸುಮಾರು ಏಳು ದಶಕಗಳ ನಂತರ ಏರ್ ಇಂಡಿಯಾ ನಿಯಂತ್ರಣ ಕಳೆದುಕೊಂಡಿದ್ದ ಟಾಟಾ ಕಂಪನಿ, ಕಳೆದ ತಿಂಗಳಷ್ಟೇ ಅದರ ಮರಳಿ ಅದನ್ನು ತೆಕ್ಕೆಗೆ ತೆಗೆದುಕೊಂಡಿತ್ತು. 1946 ರಲ್ಲಿ, ಟಾಟಾ ಏರ್ ಲೈನ್ಸ್ ಟಾಟಾ ಮಕ್ಕಳ ಪ್ರತ್ಯೇಕ ಹೊಂದಿ ಕಂಪನಿಯಾಗಿ ವಿಸ್ತರಿಸಿದಾಗ, ಹೆಸರನ್ನು ಆಯ್ಕೆ ಮಾಡಬೇಕಾಗಿತ್ತು."ದೇಶದ ಮೊದಲ ಏರ್‌ಲೈನ್ ಕಂಪನಿಗೆ ಇಂಡಿಯನ್ ಏರ್‌ಲೈನ್ಸ್, ಪ್ಯಾನ್-ಇಂಡಿಯನ್ ಏರ್‌ಲೈನ್ಸ್, ಟ್ರಾನ್ಸ್-ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾವೆಂದು ನಾಲ್ಕು ಹೆಸರನ್ನು ಆಯ್ಕೆ ಮಾಡಲಾಗಿತ್ತು ಎಂದು #AirIndiaOnBoard#WingsOfChange ಹ್ಯಾಷ್ ಟಾಗ್ ನಲ್ಲಿ ಟಾಟಾ ಗ್ರೂಪ್ ಫೆ,6 ರಂದು ಟ್ವೀಟ್ ಮಾಡಿ ತಿಳಿಸಿತ್ತು.
ಟ್ವೀಟ್‌ಗಳ ಸರಣಿಯಲ್ಲಿ, ಟಾಟಾ ಗ್ರೂಪ್ 1946 ರ ಟಾಟಾ ಮಾಸಿಕ ಬುಲೆಟಿನ್‌ನ ಆಯ್ದ ಭಾಗಗಳು ಒಳಗೊಂಡಂತೆ ಎರಡು ಚಿತ್ರಗಳನ್ನು ಹಂಚಿಕೊಂಡಿದೆ. ಏರ್ ಇಂಡಿಯಾ ಟ್ವೀಟ್ ಗಳನ್ನು ರೀಟ್ವೀಟ್ ಮಾಡಿದೆ.
(2/2): But who made the final decision? Read this excerpt from the Tata Monthly Bulletin of 1946 to know. pic.twitter.com/E7jkJ1yxQx
— Tata Group (@TataCompanies)ಬುಲೆಟಿನ್ ಪ್ರಕಾರ, ಔಪಚಾರಿಕವಾಗಿ ಹೊಸ ಏರ್ ಲೈನ್ಸ್ ನ್ನು ವಶಕ್ಕೆ ಪಡೆದ ನಂತರ ಅದಕ್ಕೆ ಹೆಸರನ್ನು ಇಡುವಲ್ಲಿ ಟಾಟಾ ಕಂಪನಿ ಸಮಸ್ಯೆಗೆ ಸಿಲುಕಿಕೊಂಡಿತ್ತು. ಇಂಡಿಯನ್ ಎರ್ ಲೈನ್ಸ್, ಏರ್ -ಇಂಡಿಯಾ ಪ್ಯಾನ್ - ಇಂಡಿಯನ್ ಏರ್ ಲೈನ್ಸ್ ಮತ್ತು ಟ್ರಾನ್ಸ್ ಇಂಡಿಯನ್ ಏರ್ ಲೈನ್ಸ್ ನಡುವಣ ಆಯ್ಕೆ ಮಾಡಬೇಕಿತ್ತು. ಆಗ ಟಾಟಾ ಸಂಸ್ಥೆಯ ಮುಖ್ಯಸ್ಥರಿಗೆ ಒಂದು ಉಪಾಯ ಹೊಳೆದು, ಟಾಟಾ ಕಂಪನಿ ಉದ್ಯೋಗಿಗಳ ಆಯ್ದ ಪ್ರತಿನಿಧಿಗಳು ಮೊದಲ ಹಾಗೂ ಎರಡನೇ ಪ್ರಶಸ್ತ್ಯ ಸೂಚಿಸುವಂತೆ ತಿಳಿಸಲಾಯಿತು.
ಏರ್ -ಇಂಡಿಯಾ ಹೆಸರಿನ ಪರ 64 ಮತಗಳು, ಇಂಡಿಯನ್ ಏರ್ ಲೈನ್ಸ್ ಪರ 51 ಮತಗಳು, ಟ್ರಾನ್ಸ್ ಇಂಡಿಯನ್ ಏರ್ ಲೈನ್ಸ್ ಪರ 28, ಮತ್ತು ಪ್ಯಾನ್- ಇಂಡಿಯನ್ ಏರ್ ಲೈನ್ಸ್ ಪರವಾಗಿ 19 ಮತಗಳು ಬಂದವು. ಇದರಲ್ಲಿ ಕಡಿಮೆ ಮತಗಳು ಬಂದ ಹೆಸರನ್ನು ಕೈ ಬಿಡಲಾಯಿತು. ಅಂತಿಮವಾಗಿ ಏರ್ ಇಂಡಿಯಾ ಪರವಾಗಿ 72 ಮತಗಳು, ಇಂಡಿಯನ್ ಏರ್ ಲೈನ್ಸ್ ಪರವಾಗಿ 58 ಮತಗಳು ಬಂದವು. ಹೀಗೆ ಹೊಸ ಕಂಪನಿಗೆ 'ಏರ್ -ಇಂಡಿಯಾ' ಎಂದು ಹೆಸರಿಡಲಾಯಿತು ಎಂದು ಬುಲೆಟಿನ್ ಹೇಳಿದೆ.