
ನವದೆಹಲಿ: ವಿಮಾನದಲ್ಲಿ ಪ್ರಯಾಣಿಕರ ದುರ್ವತನೆ ಮುಂದುವರೆದಿದ್ದು, ಏರಿಂಡಿಯಾದಲ್ಲಿ ನೇಪಾಳ ಪ್ರಜೆ ತೋರಿದ ದುರ್ವತನೆ ತಡವಾಗಿ ಬೆಳಕಿಗೆ ಬಂದಿದೆ. ಜು.8ರಂದು ಕೆನಡಾದ ಟೊರಾಂಟೋದಿಂದ ದೆಹಲಿಗೆ ಬರುತ್ತಿದ್ದ ಏರಿಂಡಿಯಾ ವಿಮಾನದಲ್ಲಿ ನೇಪಾಳ ಪ್ರಯಾಣಿಕ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಈತ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ, ಬಾಗಿಲಿಗೆ ಹಾನಿ ಮಾಡಿದ್ದು, ಅದನ್ನು ತಡೆಯಲು ಬಂದ ಸಿಬ್ಬಂದಿ ಹಾಗೂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಎಚ್ಚರಿಕೆಗಳಿಗೆ ಬಗ್ಗದ ಕಾರಣ ಸೀಟಿನಲ್ಲಿ ಕಟ್ಟಿಹಾಕಿ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು ಎಂದು ಏರಿಂಡಿಯಾ ತಿಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎ ಗಮನಕ್ಕೆ ತರಲಾಗಿದ್ದು, ಯುವಕನನ್ನು ತನಿಖೆಗೆ ಒಳಪಡಿಸಲಾಗಿದೆ.
ವಿಮಾನದ ಸೀಟ್‌ನಲ್ಲೇ ಮಲ-ಮೂತ್ರ ಮಾಡಿದ ವ್ಯಕ್ತಿಯ ಬಂಧನ!
ಕಳೆದ ತಿಂಗಳು ಮುಂಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಮಾನದ ಸೀಟ್‌ನಲ್ಲಿಯೇ ಮಲ ಮತ್ತು ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ದೆಹಲಿಯ ಐಜಿಐ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಫ್ಲೈಟ್ ಕ್ಯಾಪ್ಟನ್ ದಾಖಲಿಸಿದ ಎಫ್‌ಐಆರ್ ಪ್ರಕಾರ, ಜೂನ್ 24 ರಂದು ಮುಂಬೈನಿಂದ ದೆಹಲಿಗೆ ಪ್ರಯಾಣ ಮಾಡಿದ್ದ ಏರ್ ಇಂಡಿಯಾ ವಿಮಾನವಾದ ಎಐಸಿ 866ಯಲ್ಲಿ ಪ್ರಯಾಣಿಕನೊಬ್ಬ ಸೀಟ್ ನಂ. 17ರಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿದ್ದಲ್ಲದೇ ಉಗುಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈತ ಮಾಡಿದ್ದ ದುಷ್ಕೃತ್ಯವನ್ನು ಕ್ಯಾಬಿನ್ ಸಿಬ್ಬಂದಿ ಗಮನಿಸಿದ್ದಾರೆ. ಅದರ ಬೆನ್ನಲ್ಲಿಯೇ ಕ್ಯಾಬಿನ್ ಸೂಪರ್‌ವೈಸರ್ ಆತನಿಗೆ ಮೌಖಿಕವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ತಿಳಿಸಲಾಗಿದೆ. ಬಳಿಕ ಫ್ಲೈಟ್ ಕ್ಯಾಪ್ಟನ್‌ಗೂ ದುರ್ವರ್ತನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ರಷ್ಯಾದಲ್ಲಿ ವಿಮಾನ ತುರ್ತು ಭೂಸ್ವರ್ಶ, ನಿಲ್ದಾಣದಲ್ಲಿ ಸಿಲುಕಿದ ಪ್ರಯಾಣಿಕರಿಂದ ಗಾಯಂತ್ರಿ ಮಂತ್ರ ಪಠಣ!
ಕಾಕ್‌ಪಿಟ್‌ಗೆ ಸ್ನೇಹಿತೆಯ ಕರೆತಂದ ಏರ್ ಇಂಡಿಯಾ ಪೈಲಟ್ ಸಸ್ಪೆಂಡ್
ಕಳೆದ ಮೇ ತಿಂಗಳಲ್ಲಿ ದುಬೈ-ದಿಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ತನ್ನ ಸ್ನೇಹಿತೆಗೆ ಕಾಕ್‌ಪಿಟ್‌ನೊಳಗೆ ಪ್ರವೇಶಿಸಲು ಹಾಗೂ ಅದರಲ್ಲೇ ಉಳಿಯಲು ಅವಕಾಶ ನೀಡಿದ್ದಕ್ಕಾಗಿ ಪೈಲಟ್‌ನನ್ನು ಸಸ್ಪೆಂಡ್ ಮಾಡಲಾಗಿತ್ತು. ಅಲ್ಲದೆ, ಏರ್ ಇಂಡಿಯಾಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ (DGCA) 30 ಲಕ್ಷ ರು. ದಂಡ ವಿಧಿಸಿದೆ. ಕಳೆದ ಫೆಬ್ರವರಿಯಲ್ಲಿ ದುಬೈನಿಂದ ದೆಹಲಿಗೆ ಪ್ರಯಾಣಿಸುವಾಗ ಈ ಘಟನೆ ನಡೆದಿತ್ತು. ವಿಮಾನದ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣ ದಾಖಲಾಗಿತ್ತು. ಅನಧಿಕೃತ ಜನರನ್ನು ಕಾಕ್‌ಪಿಟ್‌ಗೆ (cockpit) ಪ್ರವೇಶಿಸಲು ಅನುಮತಿಸುವುದಿಲ್ಲ ಮತ್ತು ಅಂತಹ ಯಾವುದೇ ಪ್ರವೇಶವು ನಿಯಮಗಳ ಉಲ್ಲಂಘನೆಯಾಗಿದೆ. ಆದರೆ, ವಿಮಾನದ ಕಮಾಂಡ್‌ನಲ್ಲಿರುವ ಪೈಲಟ್ ಪ್ರಯಾಣದ ಸಮಯದಲ್ಲಿ ಸ್ನೇಹಿತೆಗೆ ಕಾಕ್‌ಪಿಟ್‌ಗೆ ಪ್ರವೇಶಿಸಲು ಅನುಮತಿಸಿದ್ದ. ಇದು ಸುರಕ್ಷತಾ ಉಲ್ಲಂಘನೆ ಆಗಿದ್ದರೂ ಏರ್ ಇಂಡಿಯಾ (Air India) ತ್ವರಿತ ಕ್ರಮ ಕೈಗೊಂಡಿರಲಿಲ್ಲ ಎಂದು ಡಿಜಿಸಿಎ ಕಿಡಿಕಾರಿದೆ.
ತಾಯ್ನಾಡು ತಲುಪುವ ಮೊದಲೇ ಹಾರಿದ ಪ್ರಾಣ: ವಿಮಾನದಲ್ಲೇ ಬೆಂಗಳೂರು ಮಹಿಳೆ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ