
ನವದೆಹಲಿ (ಜೂ.12): ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಬಿ787 ಏರ್‌ಕ್ರಾಫ್ಟ್ ವಿಟಿ-ಎಎನ್‌ಬಿ ವಿಮಾನವು ಗುಜರಾತ್‌ನ ಮೇಘನಿ ನಗರ ಪ್ರದೇಶದ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ಏರ್ ಇಂಡಿಯಾ 171 ಆಗಿ ಕಾರ್ಯನಿರ್ವಹಿಸುತ್ತಿದ್ದ ಈ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿತ್ತು.
ವಿಮಾನವು ಮಧ್ಯಾಹ್ನ 1:39 ಕ್ಕೆ ರನ್‌ವೇ 23 ರಿಂದ ಹೊರಟು ಟೇಕ್ ಆಫ್ ಆದ ಐದು ನಿಮಿಷಗಳಲ್ಲಿ ಪತನಗೊಂಡಿತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
1996 ರ ಚರ್ಕಿ ದಾದ್ರಿ ದುರಂತದ ನಂತರ ಭಾರತದಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ ಇದಾಗಿದೆ ಎಂದು ವರದಿಯಾಗಿದೆ. ಸೌದಿ ಅರೇಬಿಯನ್ ಏರ್ಲೈನ್ಸ್ ವಿಮಾನ SV 763 ದೆಹಲಿಯ ಪಶ್ಚಿಮಕ್ಕೆ ಚರ್ಕಿ ದಾದ್ರಿ ಬಳಿ ಕಝಾಕಿಸ್ತಾನ್ ಏರ್ಲೈನ್ಸ್ ವಿಮಾನ KZ 1907 ಗೆ ಡಿಕ್ಕಿ ಹೊಡೆದ ಪರಿಣಾಮ 349 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು.
1996 ನವೆಂಬರ್ 12ರಂದು, ಸೌದಿ ಅರೇಬಿಯನ್ ಏರ್ಲೈನ್ಸ್ ವಿಮಾನ SV 763 ಸಂಜೆ 6:40 ಕ್ಕೆ ಕಝಾಕಿಸ್ತಾನ್ ಏರ್ಲೈನ್ಸ್ ವಿಮಾನ KZ 1907ಗೆ ಢಿಕ್ಕಿ ಹೊಡೆದಿತ್ತು. ಒಂದು ವಿಮಾನ ದೆಹಲಿಯಿಂದ ಹೊರಡುತ್ತಿತ್ತು ಮತ್ತು ಇನ್ನೊಂದು ದೆಹಲಿಗೆ ಬಂದು ಇಳಿಯಬೇಕಿತ್ತು. ಎರಡೂ ಪ್ರಯಾಣಿಕ ವಿಮಾನಗಳಾಗಿದ್ದವು.
ಗಲ್ಫ್‌ನಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳೇ ಈ ಎರಡು ವಿಮಾನದಲ್ಲಿದ್ದರು. ಈ ದುರ್ಘಟನೆಯಲ್ಲಿ 349 ಮಂದಿ ಸಾವು ಕಂಡಿದ್ದರು. 94 ಶವಗಳ ಹೇಗೆ ಸಿಕ್ಕಿತ್ತವೆಂದರೆ, ಬರಿಗಣ್ಣಿನಲ್ಲಿ ಇದು ಮೃತದೇಹಗಳೋ ಅಲ್ಲವೋ ಎನ್ನುವುದನ್ನು ಗುರುತಿಸುವುದೇ ಸಾಧ್ಯವಾಗುತ್ತಿರಲಿಲ್ಲ.
ಕಝಾಕಿಸ್ತಾನ್ ಏರ್ಲೈನ್ಸ್ ಫ್ಲೈಟ್ 1907, ಇಲ್ಯುಶಿನ್ ಇಲ್-76, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ 23,000 ರಿಂದ 15,000 ಅಡಿಗಳಷ್ಟು ಕೆಳಕ್ಕೆ ಇಳಿಯಲು ನವದೆಹಲಿಯ ವಾಯು ಸಂಚಾರ ನಿಯಂತ್ರಣವು ಅನುಮತಿ ನೀಡಿತು. ಕಮಾಂಡರ್ ಗೆನ್ನಡಿ ಚೆರಪನೋವ್ ಸೂಚನೆಯನ್ನು ಒಪ್ಪಿಕೊಂಡಿದ್ದರು.
ಅದೇ ಸಮಯದಲ್ಲಿ, ಸೌದಿ ಅರೇಬಿಯನ್ ಏರ್ಲೈನ್ಸ್ ಫ್ಲೈಟ್ 763, ಬೋಯಿಂಗ್ 747, ದೆಹಲಿಯಿಂದ ಹೊರಟಿತ್ತು ಮತ್ತು 14,000 ಅಡಿಗಳಿಗೆ ಏರಲು ಅನುಮತಿ ಪಡೆದುಕೊಂಡಿತ್ತು. ಎರಡೂ ವಿಮಾನಗಳು ಇತ್ತೀಚೆಗೆ ಬಡ್ತಿ ಪಡೆದಿದ್ದ ಎಟಿಸಿ ಕಂಟ್ರೋಲರ್ ವಿ.ಕೆ. ದತ್ತಾ ಅವರ ಸೂಚನೆಗಳನ್ನು ಅನುಸರಿಸುತ್ತಿದ್ದವು.
ಫ್ಲೈಟ್ 763 ಭಾರತದಿಂದ ಹೊರಡುತ್ತಿದ್ದರೆ, ಫ್ಲೈಟ್ 1907 ಲ್ಯಾಂಡಿಂಗ್‌ಗಾಗಿ ಒಳ ಬರುತ್ತಿತ್ತು. ವಿಮಾನ ಸಂಚಾರ ನಿಯಂತ್ರಣವು ಕಝಕ್ ಸಿಬ್ಬಂದಿಗೆ 14 ಮೈಲಿ ದೂರದಲ್ಲಿ ಹತ್ತಿರದ ದಟ್ಟಣೆಯ ಬಗ್ಗೆ ಎಚ್ಚರಿಕೆ ನೀಡಿತು, ವಿಮಾನಗಳು 1,000 ಅಡಿ ಲಂಬವಾದ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿತ್ತು.
ದುರಂತವೆಂದರೆ, ಈ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳಲಾಗಲಿಲ್ಲ. ಎರಡೂ ವಿಮಾನಗಳು 300 mph ಗಿಂತ ಹೆಚ್ಚಿನ ವೇಗದಲ್ಲಿ ಆಕಾಶದಲ್ಲಿ ಡಿಕ್ಕಿ ಹೊಡೆದವು, ಇದು ಇತಿಹಾಸದಲ್ಲಿ ಅತ್ಯಂತ ಮಾರಕ ವಾಯುಯಾನ ವಿಪತ್ತುಗಳಲ್ಲಿ ಒಂದಾಗಿದೆ.
ಈ ಅಪಘಾತದ ಪರಿಣಾಮವಾಗಿ ಎಲ್ಲಾ ವಿಮಾನಗಳಲ್ಲಿ ಪ್ರಯಾಣ ಘರ್ಷಣೆ ತಪ್ಪಿಸುವ ವ್ಯವಸ್ಥೆಗಳು (TCAS) ಅಳವಡಿಸಲಾಯಿತು. ವಿಮಾನವು ತಮ್ಮ ವಾಯುಪ್ರದೇಶಕ್ಕೆ ಅತಿಕ್ರಮಣ ಮಾಡಿದರೆ ಈ ಸಾಧನವು ಪೈಲಟ್‌ಗಳಿಗೆ ಎಚ್ಚರಿಕೆ ನೀಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ