ಬೆಂಗಳೂರಿನಿಂದ ಸಿಂಗಾಪುರಕ್ಕೆ ಏರ್ ಇಂಡಿಯಾ ನಾನ್ ಸ್ಟಾಪ್ ವಿಮಾನ ಸೇವೆ ಆರಂಭ!

By Suvarna News  |  First Published Oct 23, 2023, 8:00 PM IST

ಬೆಂಗಳೂರಿನಿಂದ ಸಿಂಗಾಪೂರಕ್ಕೆ ನಾನ್ ಸ್ಟಾಪ್ ವಿಮಾನ ಸೇವೆ ಆರಂಭಗೊಂಡಿದೆ. ಇದರಿಂದ ಬೆಂಗಳೂರಿಗರೂ ಸುಲಭವಾಗಿ ಸಿಂಗಾಪುರ ಪ್ರಯಾಣ ಸಾಧ್ಯವಾಗಿದೆ.
 


ಬೆಂಗಳೂರು(ಅ.23) ಬೆಂಗಳೂರಿಗೆ ಇದೀಗ ಮತ್ತೊಂದು ನಾನ್ ಸ್ಟಾಪ್ ವಿಮಾನ ಸೇವೆ ಲಭ್ಯವಾಗಿದೆ. ಬೆಂಗಳೂರಿನಿಂದ ಸಿಂಗಾಪುರಕ್ಕೆ ನಾನ್ ಸ್ಟಾಪ್ ವಿಮಾನ ಸೇವ ಆರಂಭಗೊಂಡಿದೆ. ಏರ್ ಇಂಡಿಯಾ ಈ ವಿಶೇಷ ವಿಮಾನ ಸೇವೆ ಆರಂಭಿಸಿದೆ. ಇದರಿಂಗ ಬೆಂಗಳೂರು ಹಾಗೂ ಸಿಂಗಾಪುರದ ನಡುವಿನ ಅಂತರ ಕಡಿಮೆಯಾಗಿದೆ. ಏರ್ ಇಂಡಿಯಾ AI392 ವಿಮಾನ ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹಾರಾಟ ಆರಂಭಿಸಲಿದೆ. ಬೆಳಗ್ಗೆ 5.40ಕ್ಕೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. 

ಸಿಂಗಾಪುರದಿಂದ ಬೆಳಗ್ಗೆ 6.40ಕ್ಕೆ ಹೊರಡುವ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 8.35ಕ್ಕೆ ಲ್ಯಾಂಡ್ ಆಗಲಿದೆ. ಬೆಂಗಳೂರು ಟು ಸಿಂಗಾಪುರ ವಿಮಾನ 170 ಎಕಾನಮಿ ಸೀಟು, 12 ಐಷಾರಾಮಿ ಬ್ಯೂಸಿನೆಸ್ ಕ್ಲಾಸ್ ಸೀಟು ಲಭ್ಯವಿದೆ. ಸದ್ಯ ಏರ್ ಇಂಡಿಯಾ ಸೋಮವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರ ಹಾರಟ ನಡೆಸಲಿದೆ. ಶೀಘ್ರದಲ್ಲೇ ಪ್ರತಿ ದಿನ  ಏರ್ ಇಂಡಿಯಾ ಬೆಂಗಳೂರಿನಿಂದ ಸಿಂಗಾಪುರಕ್ಕೆ ಸೇವೆ ನೀಡಲಿದೆ.

Tap to resize

Latest Videos

ಬೆಂಗಳೂರು ಮಾತ್ರವಲ್ಲ  ಶಿವಮೊಗ್ಗದಿಂದ ಗೋವಾ-ತಿರುಪತಿ-ಹೈದರಾಬಾದ್​ಗೂ ವಿಮಾನಯಾನ, ಬುಕ್ಕಿಂಗ್ ಆರಂಭ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿದೆ. ಇತ್ತೀಚೆಗಷ್ಟೇ ಬೆಂಗಳೂರು ವಿಮಾನ ನಿಲ್ದಾಣ ಜಾಗತಿಕ ಮಟ್ಟದಲ್ಲಿ ಸಮಯಕ್ಕೆ ಸರಿಯಾಗಿ ಸೇವೆ ನೀಡಿದ ವಿಮಾನ ನಿಲ್ದಾಣ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಸಿರಿಯಂ’ ವಿಮಾನಯಾನ ಅನಾಲಿಸಿಸ್‌ ಸಂಸ್ಥೆ ಬಿಡುಗಡೆ ಮಾಡಿರುವ ‘ದಿ ಆನ್‌ ಟೈಂ ಪರ್ಫಾರ್ಮೆನ್ಸ್‌’ ಸೆಪ್ಟೆಂಬರ್ ತಿಂಗಳ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಕೆಐಎನಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಶೇ. 88.51ರಷ್ಟು ವಿಮಾನಗಳು ಸಮಯಕ್ಕೆ ಸರಿಯಾಗಿ ಹಾರಾಟ ನಡೆಸಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಲಾಗಿದೆ. ಅದೇ ರೀತಿ ಎರಡನೇ ಸ್ಥಾನದಲ್ಲಿ ಅಮೆರಿಕದ ಸಾಲ್ಟ್‌ ಲೇಕ್‌ ಸಿಟಿ ವಿಮಾನ ನಿಲ್ದಾಣ, ಮೂರನೇ ಸ್ಥಾನವನ್ನು ಹೈದರಾಬಾದ್‌ನ ರಾಜೀವ್‌ಗಾಂಧಿ ವಿಮಾನ ನಿಲ್ದಾಣ ಪಡೆದುಕೊಂಡಿದೆ.

 

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಪೂರ್ತಿ ಅದಾನಿ ವಶಕ್ಕೆ!

ಕೆಐಎ ಜುಲೈನಲ್ಲಿ ಶೇ. 87.51ರಷ್ಟು ಆನ್‌ ಟೈಂ ಸೇವೆ ನೀಡಿತ್ತು. ಅದೇ ಆಗಸ್ಟ್‌ನಲ್ಲಿ ಆ ಪ್ರಮಾಣ ಶೇ. 89.66ರಷ್ಟಿತ್ತು. ಆದರೆ, ಸೆಪ್ಟೆಂಬರ್‌ನಲ್ಲಿ ಆನ್‌ ಟೈಂ ಸೇವೆ ನೀಡಿದ ಪ್ರಮಾಣ ಶೇ. 1.15ರಷ್ಟು ಕಡಿಮೆಯಾಗಿದ್ದರೂ ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವರದಿ ಪ್ರಕಾರ ನಿಗದಿತ ಸಮಯದ 15 ನಿಮಿಷಗಳಲ್ಲಿ ನಿರ್ಗಮಿಸಿದ ವಿಮಾನಗಳ ಶೇಕಡಾವಾರು ಪ್ರಮಾಣವನ್ನಾಧರಿಸಿ ಆನ್‌ ಟೈಮ್‌ ಸೇವೆಯನ್ನು ಅಳೆಯಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

click me!