ಆಂಧ್ರ ಹೈವೇಯಲ್ಲೇ ಯುದ್ಧ ವಿಮಾನ ಇಳಿಸಲು ಏರ್‌ಸ್ಟ್ರಿಪ್‌: ತುರ್ತು ಅಗತ್ಯ ಇದ್ದಾಗ ಲ್ಯಾಂಡ್‌!

By Kannadaprabha News  |  First Published Mar 20, 2024, 8:44 AM IST

ಭಾರತೀಯ ವಾಯುಪಡೆಯು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯದ ಏರ್‌ಸ್ಟ್ರಿಪ್ ಅನ್ನು ಆರಂಭಿಸಿದೆ. 


ನವದೆಹಲಿ (ಮಾ.20): ಭಾರತೀಯ ವಾಯುಪಡೆಯು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯದ ಏರ್‌ಸ್ಟ್ರಿಪ್ ಅನ್ನು ಆರಂಭಿಸಿದೆ. ಯುದ್ಧ ಅಥವಾ ಪ್ರಾಕೃತಿಕ ವಿಕೋಪಗಳಂಥ ತುರ್ತು ಕಾಲದಲ್ಲಿ ಇಲ್ಲಿ ಹೆದ್ದಾರಿಯಲ್ಲೇ ಯುದ್ಧವಿಮಾನಗಳನ್ನು ಇಳಿಸಿ, ಅಗತ್ಯ ಕ್ರಮ ಕ್ರಮ ಜರುಗಿಸಲು ಇದು ನೆರವಾಗಲಿದೆ, ಮಾ.18ರಂದು ಇಲ್ಲಿ ಸುಖೋಯ್‌-30 ಹಾಗೂ ಹಾಕ್‌ ಯುದ್ಧವಿಮಾನ ಇಳಿಸಿ ಏರ್‌ಸ್ಟ್ರಿಪ್‌ಗೆ ಚಾಲನೆ ನೀಡಲಾಯಿತು ಎಂದು ಹಿರಿಯ ಐಎಎಫ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. 

33 ಮೀ. ಅಗಕ ಇರುವ ಹಾಗೂ 4.1 ಕಿ.ಮೀ. ಉದ್ದದ ಕಾಂಕ್ರೀಟ್ ಏರ್‌ಸ್ಟ್ರಿಪ್ ಇದಾಗಿದೆ. ಭಾರತೀಯ ವಾಯುಪಡೆ ನೀಡಿದ ಸಲಹೆಗಳನ್ನು ಆಧರಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇದನ್ನು ರಾಷ್ಟ್ರೀಯ ಹೆದ್ದಾರಿ-16ರಲ್ಲಿ ನಿರ್ಮಿಸಿದೆ. ಇಂಥ ಹಲವು ಏರ್‌ಸ್ಟ್ರಿಪ್‌ಗಳು ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವೆ. ಆಂಧ್ರಪ್ರದೇಶದಲ್ಲಿ ಇದು ಇದೇ ಮೊದಲ ಏರ್‌ಸ್ಟ್ರಿಪ್‌ ಆಗಿದೆ.

Tap to resize

Latest Videos

ಸಿಎಎ ಜಾರಿ ತಡೆ ನೀಡಲು ಸುಪ್ರೀಂಕೋರ್ಟ್‌ ನಕಾರ: 3 ವಾರದಲ್ಲಿ ಪ್ರತಿಕ್ರಿಯೆಗೆ ಕೇಂದ್ರಕ್ಕೆ ಸೂಚನೆ

ರಾತ್ರಿ ಹೊತ್ತಿನಲ್ಲಿ 130ಜೆ ಪ್ಲೇನ್‌ ಇಳಿಸಿದ ಭಾರತ: 24 ವರ್ಷಗಳ ಹಿಂದೆ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧಕ್ಕೆ ಸಾಕ್ಷಿಯಾದ ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯ ಸರಕು ಸಾಗಣೆ ವಿಮಾನ ‘ಸಿ-130ಜೆ ಸೂಪರ್‌ ಹರ್ಕ್ಯುಲೆಸ್‌’ ರಾತ್ರಿ ವೇಳೆ ಇಳಿದು ಸಂಚಲನ ಮೂಡಿಸಿದೆ. 

ಗರುಡಾ ಕಮಾಂಡೋಗಳನ್ನು ಹೊತ್ತ ಈ ವಿಮಾನ ಭಾರತಕ್ಕೆ ಅತ್ಯಂತ ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ, ಸಮುದ್ರ ಮಟ್ಟದಿಂದ 10500 ಅಡಿ ಎತ್ತರದಲ್ಲಿರುವ, ಪಾಕಿಸ್ತಾನ ಜತೆಗಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಗೆ ಸನಿಹದಲ್ಲೇ ಇರುವ ಕಾರ್ಗಿಲ್‌ ಏರ್‌ಸ್ಟ್ರಿಪ್‌ನಲ್ಲಿ ರಾತ್ರಿ ವೇಳೆ ಇಳಿಯುವ ಮೂಲಕ ಗಡಿಯಲ್ಲಿ ಭಾರತದ ಸನ್ನದ್ಧತೆಯನ್ನು ಎತ್ತಿ ತೋರಿಸಿದೆ ಎಂದು ವರದಿಗಳು ತಿಳಿಸಿವೆ. 

ನಾನೊಬ್ಬನೇ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಮಾಡಲು ಸಾಧ್ಯವಿಲ್ಲ: ಬಿ.ವೈ.ವಿಜಯೇಂದ್ರ

ಈ ಹಿಂದೆ ಕೂಡ ವಾಯುಪಡೆ ಸಿ-130ಜೆ ವಿಮಾನವನ್ನು ಈ ಏರ್‌ಸ್ಟ್ರಿಪ್‌ನಲ್ಲಿ ಇಳಿಸಿತ್ತು. ಆದರೆ ರಾತ್ರಿ ವೇಳೆ ಈ ವಿಮಾನ ಇಳಿಸಿದ್ದು ಇದೇ ಮೊದಲು. ಇತ್ತೀಚೆಗೆ ಆ ಸಾಹಸ ನಡೆದಿದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಸರಕು ಸಾಗಣೆ ಮಾಡಲು, ಯೋಧರನ್ನು ಜಮಾವಣೆ ಮಾಡಲು ವಾಯುಪಡೆಗೆ ಅನುಕೂಲವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಕ್ಷಣಾ ಸಚಿವಾಲಯ ಈಗಾಗಲೇ ಗಡಿಯಲ್ಲಿರುವ ಎಲ್ಲ ವಾಯುನೆಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಒತ್ತು ನೀಡುತ್ತಿದೆ.

click me!