ಓವೈಸಿ-ಮಾಧವಿ ಲತಾ ನಡುವೆ ಹಾವು-ಏಣಿ ಆಟ; ಯಾರಿಗೆ ಮುನ್ನಡೆ ? ಇಲ್ಲಿದೆ ಮಾಹಿತಿ 

By Mahmad Rafik  |  First Published Jun 4, 2024, 12:42 PM IST

 Assaduddin Owaisi vs madhavi lathaL ಅಸಾದುದ್ದೀನ್ ಓವೈಸಿ 57,810 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಓವೈಸಿ 2,28,577 ಮತ್ತು ಮಾಧವಿ ಲತಾ 1,70,787 ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮೊಹಮ್ಮದ್ ವಲಿಲುಲ್ಹಾ ಸಮೀರ್ 24,515 ಮತಗಳನ್ನು ಪಡೆದುಕೊಂಡಿದ್ದಾರೆ.


ಹೈದರಾಬಾದ್: ಈ ಬಾರಿ ಎಐಎಂಐಎಂ  (All India Majlis-E-Ittehadul Muslimeen -AIMIM) ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಪ್ರತಿನಿಧಿಸುವ ಹೈದರಾಬಾದ್‌ ಲೋಕಸಭಾ ಕ್ಷೇತ್ರ ದೇಶದ ಗಮನವನ್ನ ಸೆಳೆದಿದೆ. ಬಿಜೆಪಿ ಅಭ್ಯರ್ಥಿ ಮಾಧವಿ ಲತಾ (BJP Candidate Madhavi Latha) ಚುನಾವಣೆ ಪ್ರಚಾರದಲ್ಲಿ ಕೇಸರಿ ಕಹಳೆಯನ್ನು ಮೊಳಗಿಸಿದ್ದರು. ಹಾಗಾಗಿ ಅಸಾದುದ್ದೀನ್ ಓವೈಸಿ ಮತ್ತು ಮಾಧವಿ ಲತಾ ನಡುವೆ ನೇರ ಫೈಟ್ ಏರ್ಪಟ್ಟಿತ್ತು. ಸದ್ಯದ ಟ್ರೆಂಡ್ ಪ್ರಕಾರ, ಅಸಾದುದ್ದೀನ್ ಓವೈಸಿ ಮುನ್ನಡೆಯಲ್ಲಿದ್ದಾರೆ. ಆದ್ರೆ ಮತಗಳ ಅಂತರವೂ ಕಡಿಮೆ ಆಗುತ್ತಿದೆ. ಚುನಾವಣೆ ಆಯೋಗದ (Election Commission) ಸದ್ಯದ (12 PM) ಮಾಹಿತಿ ಪ್ರಕಾರ, ಅಸಾದುದ್ದೀನ್ ಓವೈಸಿ 57,810 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಓವೈಸಿ 2,28,577 ಮತ್ತು ಮಾಧವಿ ಲತಾ 1,70,787 ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮೊಹಮ್ಮದ್ ವಲಿಲುಲ್ಹಾ ಸಮೀರ್ 24,515 ಮತಗಳನ್ನು ಪಡೆದುಕೊಂಡಿದ್ದಾರೆ.

2019ರ ಚುನಾವಣೆಯಲ್ಲಿ ಅಸಾದುದ್ಧೀನ್ ಓವೈಸಿ 2.8 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದರು. ಅಸಾದುದ್ದೀನ್ ಚಲಾವಣೆಯಾದ ಮತಗಳಲ್ಲಿ ಶೇ.64ರಷ್ಟು ಮತ ಪಡೆದುಕೊಂಡಿದ್ದರು. ಹೈದರಾಬಾದ್ ಲೋಕಸಭಾ ಕ್ಷೇತ್ರ ಓವೈಸಿ ಕುಟುಂಬದ ಭದ್ರಕೋಟೆಯಾಗಿದೆ. ಆದ್ದರಿಂದ ಈ ಬಾರಿ ಕಮಲ ಪತಾಕೆಯನ್ನು ಹಾರಿಸುವ ದೃಷ್ಟಿಯಿಂದ ಪ್ರಬಲ ಅಭ್ಯರ್ಥಿ ಮಾಧವಿ ಲತಾರನ್ನು ಕಣಕ್ಕಿಳಿಸಿದೆ.  

Tap to resize

Latest Videos

undefined

Live Blog: ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಸರಳ ಬಹುಮತ

ಇಂಡಿಯಾ ಟುಡೇ ಎಕ್ಸಿಟ್ ಪೋಲ್ 

ಇಂಡಿಯಾ ಟುಡೇ-ಮೈ ಆಕ್ಸಿಸ್ ಎಕ್ಸಿಟ್ ಪೋಲ್, ದೇಶದಾದ್ಯಂತ ಬಿಜೆಪಿ ಪರ ಅಲೆ ಇರೋದನ್ನು ಹೇಳಿದೆ.ತ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಬಿಜೆಪಿ ಉತ್ತಮ ಪ್ರದರ್ಶನ ಕಾಣಲಿದೆ. ತೆಲಂಗಾಣದ 17 ಕ್ಷೇತ್ರಗಳಲ್ಲಿ 11 ರಿಂದ 12 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿಯವರ ಗೆಲುವು ಅಷ್ಟು ಸುಲಭವಾಗಿಲ್ಲ ಎಂದು ಇಂಡಿಯಾ ಟುಡೇ ಸಮೀಕ್ಷೆ ಹೇಳಿದೆ. ಅಸಾದುದ್ದೀನ್ ಓವೈಸಿ ಅವರಿಗೆ ಬಿಜೆಪಿ ಅಭ್ಯರ್ಥಿ ಮಾಧವಿಲತಾ (madhavi latha) ತೀವ್ರ ಪೈಪೋಟಿ ನೀಡಲಿದ್ದಾರೆ. 

ಮಾಧವಿಲತಾ ಅವರ ಅದ್ಧೂರಿ ಪ್ರಚಾರ, ಆಕ್ರಮಣಕಾರಿ ಶೈಲಿಯ ಮಾತುಗಳು ಅವರ ಪ್ಲಸ್ ಪಾಯಿಂಟ್. ಹಿಂದೂಗಳ ಮತಗಳನ್ನು ಕ್ರೋಢಿಕರಣ ಮಾಡುವಲ್ಲಿ ಮಾಧವಿಲತಾ ಯಶಸ್ವಿಯಾಗಿದ್ದಾರಂತೆ. ಇದರ ಜೊತೆ ಬಿಜೆಪಿಯ ಪ್ರಮುಖ ನಾಯಕರೆಲ್ಲಾ ಈ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಪ್ರಕಾರ ಮಾಧವಿ ಲತಾ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ. 

ಏಪ್ರಿಲ್‌ 19 ರಿಂದ ಆರಂಭವಾಗಿದ್ದ 18ನೇ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆದು ಜೂನ್‌ 1 ರಂದು ಮುಕ್ತಾಯವಾಗಿತ್ತು. ಇಂದು ಲೋಕಕದನದ ಮಹಾತೀರ್ಪು ಇಂದು ಹೊರಬೀಳಲಿದೆ.  ಜಿದ್ದಾಜಿದ್ದಿಯ ಚುನಾವಣೆಯ ಫಲಿತಾಂಶ ದೇಶದ ಕುತೂಹಲ ಕೆರಳಿಸಿದೆ. ಬಿಜೆಪಿಯ ಚಾರ್‌ ಸೌ ಪಾರ್‌ ಎನ್ನುವ ಟಾರ್ಗೆಟ್‌ ನಿಜವಾಗಲಿದೆಯೇ? ಅಥವಾ ಇಂಡಿಯಾ ಮೈತ್ರಿಯ ಅಧಿಕಾರದ ಆಸೆ ಈಡರೇಲಿದೆಯೇ ಅನ್ನೋದು  ತಿಳಿಯಲಿದೆ. 

Andhra Pradesh results 2024: ಆಂಧ್ರದಲ್ಲಿ ಜಗನ್‌ಗೆ ಶಾಕ್‌ ನೀಡಿದ ಬಿಜೆಪಿ-ಟಿಡಿಪಿ-ಜೆಎಸ್‌ಪಿ ಮೈತ್ರಿ!

ದೇಶದ 543 ಲೋಕಸಭಾ ಕ್ಷೇತ್ರಕ್ಕೆ ಶೇ. 66.33 ರಷ್ಟು ಮತದಾನವಾಗಿದೆ. ಬಿಜೆಪಿ ಒಟ್ಟು 441 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್‌ 328 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಚುನಾವಣಾ ಆರಂಭಕ್ಕೂ ಮುನ್ನವೇ ಸೂರತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಯನಾಡ್‌, ರಾಯ್‌ಬರೇಲಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ, ಗುಜರಾತ್‌ನ ಗಾಂಧಿನಗರದಲ್ಲಿ ಅಮಿತ್‌ ಶಾ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ರಿಸಲ್ಟ್‌ ಬಗ್ಗೆ ಹೆಚ್ಚಿನ ನಿರೀಕ್ಷ ಗರಿಗೆದರಿದೆ. 

ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ಹೇಗಿರಲಿದೆ, ಉತ್ತರ ಭಾರತದ ಮತದಾರರನ್ನು ಸೆಳೆಯಲು ಇಂಡಿಯಾ ಮೈತ್ರಿ ಯಶಸ್ವಿಯಾಗಿದ್ಯಾ ಅನ್ನೋದು ಇಂದು ತೀರ್ಮಾನವಾಗಲಿದೆ.

click me!