'ಸೂಪರ್‌ ಸ್ಪ್ರೆಡರ್‌'ಗಳಿಗೆ ಕೊರೋನಾ ಟೆಸ್ಟ್!

By Suvarna NewsFirst Published Mar 21, 2021, 11:17 AM IST
Highlights

ಕೋವಿಡ್‌ ಸೋಂಕು ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ| 'ಸೂಪರ್‌ ಸ್ಪ್ರೆಡರ್‌'ಗಳಿಗೆ ಕೊರೋನಾ ಟೆಸ್ಟ್!

ಅಹದಾಬಾದ್(ಮಾ.21)‌: ಕೋವಿಡ್‌ ಸೋಂಕು ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈರಸ್‌ ‘ಸೂಪರ್‌ ಸ್ಪ್ರೆಡರ್‌’ಗಳಿಗೆ ಕೊರೋನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.

ಸೋಂಕು ಹರಡಿಸುವ ಸಾಧ್ಯತೆ ಇರುವ ತರಕಾರಿ ವ್ಯಾಪಾರಿಗಳು, ಮೆಡಿಕಲ್‌ ಮಾಲೀಕರು, ಕಿರಾಣಿ ವ್ಯಾಪಾರಿಗಳು, ಆಟೋ ಚಾಲಕರು, ಸಲೂನ್‌ ಮಾಲೀಕರು ಮತ್ತಿತರರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲು ಅಹಮದಾಬಾದ್‌ ನಗರ ತೀರ್ಮಾನಿಸಿದೆ.

ಕಳೆದ ವರ್ಷ ಕೊರೋನಾ ಉಬ್ಬರ ಹೆಚ್ಚಾದಾಗಲೂ ಇದೇ ರೀತಿ ರಾರ‍ಯಂಡಮ್‌ ಪರೀಕ್ಷೆ ಕೈಗೊಳ್ಳಲಾಗಿತ್ತು. ಅವರೆಲ್ಲರಿಗೂ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ಮಾಡಿ ನೆಗೆಟಿವ್‌ ಪ್ರಮಾಣ ಪತ್ರ ನೀಡಲಾಗುತ್ತದೆ. ಅವರನ್ನು ಹೊರತುಪಡಿಸಿ ಸೂಪರ್‌ ಮಾರ್ಕೆಟ್‌ ಉದ್ಯೋಗಿಗಳು ಹಾಗೂ ಫುಡ್‌ ಡೆಲಿವರಿ ಉದ್ಯೋಗಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಇವರಿಗೆ ಕೊರೋನಾ ಪರೀಕ್ಷೆ ಮಾಡಿಸುವುದು ಅವರನ್ನು ನೇಮಕ ಮಾಡಿಕೊಂಡ ಏಜೆನ್ಸಿಗಳು ಅಥವಾ ಅವರು ಕೆಲಸ ಮಾಡುವ ಘಟಕಗಳ ಹೊಣೆ ಎಂದು ನಗರ ಪಾಲಿಕೆ ಸ್ಪಷ್ಟಪಡಿಸಿದೆ. ಅಹದಾಬಾದ್‌ ನಗರದಲ್ಲಿ ಈವರೆಗೆ 61,554 ಕೊರೋನಾ ಪ್ರಕರಣಗಳು ದೃಢವಾಗಿದ್ದು, 2272 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

click me!