ಇಲ್ಲೊಂದು ಕಡೆ ರೈಲ್ವೆ ಇಲಾಖೆಯ ನೌಕರನೇ ಚಲಿಸುತ್ತಿದ್ದ ಒಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಏರಲು ಹೋಗಿ ಸಾವಿನ ದವಡೆಯಿಂದ ಜಸ್ಟ್ ಮಿಸ್ ಆಗಿದ್ದಾರೆ.
ಅಹ್ಮದಾಬಾದ್: ಚಲಿಸುತ್ತಿರುವ ರೈಲನ್ನು ಏರುವ ಹಾಗೂ ಇಳಿಯುವಸಾಹಸವನ್ನು ಎಂದಿಗೂ ಮಾಡಬೇಡಿ, ಸ್ವಲ್ಪ ಹೆಚ್ಚು ಕಡಿಮೆ ಆದರೂ ನಿಮ್ಮ ಜೀವ ಹೋಗುತ್ತದೆ. ಅಥವಾ ಶಾಶ್ವತವಾಗಿ ಅಂಗವೈಕಲ್ಯಕ್ಕೀಡಾಗುವ ಸಾಧ್ಯತೆ ಇದೆ ಎಂದು ರೈಲು ನಿಲ್ದಾಣಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿರುವುದನ್ನು ನೀವು ನೋಡಿರಬಹುದು. ಇದರ ಜೊತೆಗೆ ಸ್ಟೇಷನ್ ಫ್ಲಾಟ್‌ಫಾರ್ಮ್‌ಗಳಲ್ಲಿ ತಿರುಗುವ ರೈಲ್ವೆ ಪೊಲಿಸರು ಕೂಡ ಈ ಬಗ್ಗೆ ಪ್ರಯಾಣಿಕರನ್ನು ಎಚ್ಚರಿಸುತ್ತಲೇ ಇರುತ್ತಾರೆ, ಜೊತೆಗೆ ರೈಲ್ವೆ ಅಧಿಕಾರಿಗಳು, ಸಿಬ್ಬಂದಿಗಳು, ಈ ಬಗ್ಗೆ ಗಮನ ಇರಿಸಿರುತ್ತಾರೆ, ಸ್ಟೇಷನ್‌ಗಳಲ್ಲಿ ಅಳವಡಿಸಲಾಗಿರುವ ಟಿವಿಗಳಲ್ಲಿಯೂ ದುರಂತದ ಚಿತ್ರಣ ಭಿತ್ತರಿಸಿ ಎಚ್ಚರಿಸುತ್ತಾರೆ. ಜೊತೆಗೆ ಧ್ವನಿವರ್ಧಕಗಳಲ್ಲಿಯೂ ಆಗಾಗ ಜಾಗೃತಿ ಮೂಡಿಸಲಾಗುತ್ತದೆ. ಹಾಗಿದ್ದರೂ ಚಲಿಸುತ್ತಿರುವ ರೈಲನ್ನು ಹತ್ತಲು ಅಥವಾ ಇಳಿಯಲು ಹೋಗಿ ಪ್ರಯಾಣಿಕರು ತಮ್ಮ ಜೀವ ಅಪಾಯಕ್ಕೆ ಒಡ್ಡುತ್ತಾರೆ. ಇದು ಜನಸಾಮಾನ್ಯರ ಸ್ಥಿತಿ, ಆದರೆ ಇಲ್ಲೊಂದು ಕಡೆ ರೈಲ್ವೆ ಇಲಾಖೆಯ ನೌಕರನೇ ಚಲಿಸುತ್ತಿದ್ದ ಒಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಏರಲು ಹೋಗಿ ಸಾವಿನ ದವಡೆಯಿಂದ ಜಸ್ಟ್ ಮಿಸ್ ಆಗಿದ್ದಾರೆ.
ಈ ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಟಿಕೆಟ್ ಚೆಕ್ಕರ್ ಅನ್ನು ಬಿಟ್ಟು
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣ ಆರಂಭಿಸಿದೆ. ರೈಲು ಚಲಿಸಲು ಆರಂಭಿಸಿದ್ದನ್ನು ನೋಡಿದ ಟಿಕೆಟ್ ಚೆಕ್ಕರ್, ರೈಲು ಬಿಟ್ಟು ಹೋಯ್ತು ಎಂದು ಗಾಬರಿಯಾಗಿ ರೈಲಿನ ಬೋಗಿಗೆ ಬಡಿದು ಚಾಲಕನ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ರೈಲು ಮಾತ್ರ ಪ್ರಯಾಣ ಮುಂದುವರಿಸಿದೆ. ಈ ವೇಳೆ ಅವರು ರೈಲನ್ನು ಹತ್ತಲು ಮುಂದಾಗಿದ್ದು ಟಿಕೆಟ್ ಚೆಕ್ಕರ್ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ರೈಲ್ವೆ ಸ್ಟೇಷನ್‌ನಲ್ಲಿದ್ದ ಇತರರು ಮೇಲೆಳೆದು ರಕ್ಷಣೆ ಮಾಡಿದ್ದಾರೆ. ತಪ್ಪಿದಲ್ಲಿ ಟಿಕೆಟ್ ಚೆಕ್ಕರ್‌ಗೇ ಟಿಕೆಟ್ ಸಿಕ್ತಿತ್ತು..!
ಧಾರವಾಡ-ಬೆಂಗ್ಳೂರು ‘ವಂದೇ ಭಾರತ್’ ರೈಲಿಗೆ ಕಲ್ಲೆಸೆತ, ಗಾಜು ಪುಡಿಪುಡಿ
ಗುಜರಾತ್‌ನ ಅಹ್ಮದಾಬಾದ್ (Ahmedabad) ರೈಲ್ವೆ ಸ್ಟೇಷನ್‌ನಲ್ಲಿ ಈ ಘಟನೆ ನಡೆದಿದ್ದು, ಅಹ್ಮದಾಬಾದ್‌ನಿಂದ ಮುಂಬೈಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲನ್ನು ಟಿಕೆಟ್ ಚೆಕ್ಕರ್ ಹತ್ತಲೆತ್ನೆಸಿದಾಗ ಈ ಘಟನೆ ನಡೆದಿದೆ. ಅಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆ ಆಗಿದೆ. ABS @iShekhab ಎಂಬ ಟ್ವಿಟ್ಟರ್ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಅಹಮದಾಬಾದ್ ನಿಲ್ದಾಣದಲ್ಲಿ ಮುಂಬೈಗೆ ಹೋಗುವ ವಂದೇ ಭಾರತ್ ರೈಲಿನ ಬಾಗಿಲುಗಳು ಟಿಕೆಟ್ ಪರಿಶೀಲಕನನ್ನು ಹೊರಗೆ ಬಿಟ್ಟು ಮುಚ್ಚಲ್ಪಟ್ಟವು. ಇದರಿಂದ ಹತಾಶನಾದ ಟಿಕೆಟ್ ಚೆಕ್ಕರ್ ತನ್ನ ಪ್ರಾಣವನ್ನು ಲೆಕ್ಕಿಸದೇ ರೈಲು ಹತ್ತಲೆತ್ನಿಸಿದಾಗ ಈ ಘಟನೆ ನಡೆದಿದೆ. ಜೂನ್ 26 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ ಎಂದು ಬರೆದು ಈ ವೀಡಿಯೋ ಶೇರ್ ಮಾಡಲಾಗಿದೆ.
ವಂದೇ ಭಾರತ ರೈಲಿನ ಆಹಾರದಲ್ಲಿ ಕೆಟ್ಟ ವಾಸನೆ: ಪ್ರಯಾಣಿಕರಿಂದ ತರಾಟೆ: ವೀಡಿಯೋ ವೈರಲ್
Video | Gates of Mumbai bound Vande Bharat closed at Ahmedabad station & a Ticket checker was left out. Desparate to get in, he attempted something that may have cost him his life. This is reported to have happened on 26th June. pic.twitter.com/WvzuQDGudN
— ABS (@iShekhab)