
ಗುರುವಾರ (ಜೂನ್ 12) ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿ ಒಟ್ಟು 265 ಜನರು ಸಾವನ್ನಪ್ಪಿದ್ದಾರೆ. ಆದರೆ ಈ ಅಪಘಾತದಲ್ಲಿ ಒಬ್ಬ ವ್ಯಕ್ತಿ ಪವಾಡಸದೃಶವಾಗಿ ಬದುಕುಳಿದಿದ್ದಾನೆ. ಮೃತ್ಯುಂಜಯ ರಮೇಶ್. ಅಪಘಾತಕ್ಕೀಡಾದ ಡ್ರೀಮ್‌ಲೈನರ್ ವಿಮಾನದಲ್ಲಿದ್ದ 238 ಎಕಾನಮಿ ಕ್ಲಾಸ್ ಸೀಟುಗಳಲ್ಲಿ, ಅದರಲ್ಲಿ ಕುಳಿತಿದ್ದ ವ್ಯಕ್ತಿ ಸಾವನ್ನೇ ಗೆದ್ದು ಬಂದಿದ್ದಾನೆ.
ವಿಮಾನ ಕಟ್ಟಡಕ್ಕೆ ಅಪ್ಪಳಿಸುತ್ತಿದ್ದಂತೆ ಬೆಂಕಿಯುಂಡೆಯಂತೆ ಛಿದ್ರವಾಯಿತು. ಇದರಲ್ಲಿ ಯಾವುದೇ ವ್ಯಕ್ತಿ ಜೀವಂತವಾಗಿ ಬದುಕಿಬರಲು ಸಾಧ್ಯವಿರಲ್ಲ. ಆದರೆ ಈ ಪವಾಡ ಸದೃಶವಾಗಿ ಬದುಕುಳಿದ ಬ್ರಿಟಿಷ್ ಪ್ರಜೆ ರಮೇಶ್ ತುಂಬಾ ಅದೃಷ್ಟಶಾಲಿ, ಸಾವನ್ನೇ ಗೆದ್ದ ಮೃತ್ಯುಂಜಯ ಎನಿಸಿದ್ದಾನೆ.
ವಿಮಾನ ಅಪಘಾತದಲ್ಲಿ ಮತ್ತೊಂದು ಪವಾಡ!
ಈ ನಡುವೆ, ಮತ್ತೊಂದು ಪವಾಡವೂ ಸಂಭವಿಸಿದೆ. ಬೆಂಕಿಯು ಹಿಂದೂಗಳ ಪವಿತ್ರ ಧಾರ್ಮಿಕ ಗ್ರಂಥವಾದ ಶ್ರೀಮದ್ ಭಗವದ್ಗೀತೆಯನ್ನು ಮುಟ್ಟಲು ಸಹ ಸಾಧ್ಯವಾಗಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಅಪಘಾತದ ನಂತರ, ಪರಿಹಾರ ಮತ್ತು ರಕ್ಷಣಾ ತಂಡವು ಭಗ್ನಾವಶೇಷಗಳನ್ನು ತೆಗೆದುಹಾಕಲು ಸಿಬ್ಬಂದಿ ಕೆಲಸ ಮಾಡುತ್ತಿದ್ದಾಗ, ಅವರ ಕಣ್ಣುಗಳು ಪುಸ್ತಕದ ಮೇಲೆ ಬಿದ್ದಿವೆ. ಜ್ವಾಲೆ ಮತ್ತು ಹೊಗೆಯ ನಡುವೆಯೂ ಅದರ ಪುಟಗಳು ಸುರಕ್ಷಿತವಾಗಿದ್ದವು!
ಸುರಕ್ಷಿತವಾಗಿ ಉಳಿದ ಶ್ರೀಮದ್ ಭಗವದ್ಗೀತೆ ಪುಸ್ತಕ!
ವಿಮಾನ ಅಪಘಾತದ ನಂತರ ದೊರೆತ ಗೀತಾ ಪುಸ್ತಕದ ಪುಟಗಳು ಸಂಪೂರ್ಣವಾಗಿ ಹಾಗೆಯೇ ಇವೆ. ಯಾರಾದರೂ ಇನ್ನೂ ಅದನ್ನು ಸುಲಭವಾಗಿ ಓದಬಹುದು. ಈ ಭಯಾನಕ ಮತ್ತು ಭೀಕರ ಅಪಘಾತದ ನಡುವೆಯೂ ಭಗವದ್ಗೀತೆಯ ಪುಸ್ತಕದ ಸುರಕ್ಷತೆಯನ್ನು ಸ್ಥಳೀಯ ಜನರು ಆಶ್ಚರ್ಯವ್ಯಕ್ತಪಡಿಸಿದ್ದಾರೆ, ಇದು ದೇವರ ಪವಾಡ ಎಂದಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿದ್ದ 242 ಜನರಲ್ಲಿ 169 ಭಾರತೀಯರು, 53 ಬ್ರಿಟಿಷರು, ಏಳು ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದ ಪ್ರಜೆ ಇದ್ದರು ಎಂದು ವರದಿಯಾಗಿದೆ. ವಾಯು ಸಂಚಾರ ನಿಯಂತ್ರಣ (ಎಟಿಸಿ) ಪ್ರಕಾರ, ವಿಮಾನವು ಅಹಮದಾಬಾದ್‌ನಿಂದ ಮಧ್ಯಾಹ್ನ 1:39 ಕ್ಕೆ ರನ್‌ವೇ 23 ರಿಂದ ಹೊರಟಿತು ಮತ್ತು ಕೇವಲ 5 ನಿಮಿಷಗಳ ನಂತರ ಅದು ಮೇಘಾನಿ ನಗರದ ವಸತಿ ಪ್ರದೇಶದಲ್ಲಿರುವ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ