ಪ್ರೇಮಿಗಳ ದಿನದಂದೇ ತಾಜ್‌ ಬಂದ್‌: ಜೋಡಿಗಳಿಗೆ ನಿರಾಸೆ

Suvarna News   | Asianet News
Published : Feb 15, 2020, 09:56 AM ISTUpdated : Feb 15, 2020, 09:57 AM IST
ಪ್ರೇಮಿಗಳ ದಿನದಂದೇ ತಾಜ್‌ ಬಂದ್‌: ಜೋಡಿಗಳಿಗೆ ನಿರಾಸೆ

ಸಾರಾಂಶ

ಪ್ರೇಮಿಗಳ ದಿನದಂದು ತಮ್ಮ ಪ್ರೀತಿಪಾತ್ರರ ಜೊತೆ ತಾಜ್ ಮಹಲ್ ನೋಡಲು ಹೋದ ನವಜೋಡಿಗಳಿಗೆ ನಿರಾಸೆಯಾಗಿದೆ. ಶುಕ್ರವಾರದ ಪ್ರಾರ್ಥನೆಗಾಗಿ ತಾಜ್‌ಮಹಲನ್ನು ಕ್ಲೋಸ್ ಮಾಡಲಾಗಿತ್ತು. 

ಆಗ್ರಾ (ಫೆ. 15): ಪ್ರೇಮಿಗಳ ದಿನವನ್ನು ಪ್ರೇಮ ಸೌಧ ತಾಜ್‌ ಮಹಲ್‌ನಲ್ಲಿ ಆಚರಿಸಲು ಹೋಗಿದ್ದ ಪ್ರಣಯ ಜೋಡಿಗಳಿಗೆ ಭಾರೀ ನಿರಾಸೆಯಾಗಿದೆ. ಪ್ರಾರ್ಥನೆಗಾಗಿ ಪ್ರತೀ ಶುಕ್ರವಾರ ರಜೆಯಾಗಿರುವುದರಿಂದ ಪ್ರೇಮಿಗಳ ದಿನದಂದೇ ಪ್ರವಾಸಿಗರಿಗೆ ತಾಜ್‌ ಮಹಲ್‌ ಮುಚ್ಚಲಾಗಿತ್ತು.

ಪ್ರೇಮಿಗಳ ದಿನ: 10 ಲಕ್ಷ ಗುಲಾಬಿ ಹೂವಿಗೆ ಬೇಡಿಕೆ, ಬೆಲೆಯೂ ಏರಿಕೆ

ಹೀಗಾಗಿ ಪ್ರೇಮ ಸೌಧದ ಮುಂದೆ ಪ್ರೇಮ ನಿವೇದನೆಗೆ ಮುಂದಾಗಿದ್ದ ನವ ಜೋಡಿಗಳು ಹಾಗೂ ಪ್ರೀತಿ ವ್ಯಕ್ತ ಪಡಿಸಲು ಅಣಿಯಾಗಿದ್ದ ಜೋಡಿ ಹಕ್ಕಿಗಳು ಪೆಚ್ಚು ಮೋರೆ ಹಾಕಿದ್ದಾರೆ. ಆದರೆ ತಾಜ್‌ ಗೋಚರಿಸುವ ಸುತ್ತ ಮುತ್ತಲಿನ ಪ್ರದೇಶದಲ್ಲಿ ಜೋಡಿಗಳು ಪ್ರೇಮಿಗಳ ದಿನವನ್ನು ಆಚರಿಸಿಕೊಂಡಿದ್ದಾರೆ.

ತಾಜ್‌ ಹಿಂಭಾಗದ ಮೆಹ್ತಾಬ್‌ ಬಾಗ್‌ ಪಾರ್ಕ್, ಯಮುನೆಯ ದಡ ಶುಕ್ರವಾರ ಪ್ರಣಯ ಹಕ್ಕಿಗಳ ನೆಚ್ಚಿನ ಸ್ಥಳವಾಗಿತ್ತು. ಸುತ್ತಮುತ್ತಲಿನ ಹೊಟೇಲ್‌, ರೆಸ್ಟೋರೆಂಟ್‌ ಪ್ರೇಮಿಗಳಿಂದ ತುಂಬಿ ತುಳುಕುತ್ತಿತ್ತು. ವ್ಯಾಲೆಂಟೈನ್ಸ್‌ ಡೇ ಸ್ಪೆಷಲ್‌ ಊಟಕ್ಕೆ ಭಾರೀ ಬೇಡಿಕೆ ಇದ್ದಿದ್ದು ಕಂಡು ಬಂತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಿದ್ರಿಸುತ್ತಿದ್ದ ಪೋಷಕರ ಮಧ್ಯೆ ಸಿಲುಕಿ ನವಜಾತ ಶಿಶು ಸಾವು
COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ