ಸಮ್ಮತಿ ಸೆಕ್ಸ್ ವಯೋಮಿತಿಯನ್ನು 18 ರಿಂದ 16 ಕ್ಕೆ ಇಳಿಸುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಮಧ್ಯ ಪ್ರದೇಶ ಹೈಕೋರ್ಟ್ ಮನವಿ ಮಾಡಿದೆ.
ಗ್ವಾಲಿಯರ್ (ಜುಲೈ 1, 2023): ದೈಹಿಕ ಸಂಬಂಧಕ್ಕೆ ಅಥವಾ ಸಮ್ಮತಿ ಸೆಕ್ಸ್‌ಗೆ ಒಪ್ಪಿಗೆ ನೀಡುವ ವಯಸ್ಸು ಭಾರತದಲ್ಲಿ ಹೆಚ್ಚು ಚರ್ಚಾಸ್ಪದ ವಿಷಯವಾಗಿದೆ. ಪ್ರಸ್ತುತ ಸಮ್ಮತಿ ಸೆಕ್ಸ್‌ಗೆ ಕನಿಷ್ಠ ವಯೋಮಿತಿ 18 ವರ್ಷವಾಗಿದ್ದರೂ ಕನಿಷ್ಠ ವಯೋಮಿತಿ 16 ಆಗಿರಬೇಕು ಎಂಬ ಬಹುದಿನಗಳ ಬೇಡಿಕೆ ಇದೆ. ಇದೀಗ ಮಧ್ಯಪ್ರದೇಶ ಹೈಕೋರ್ಟ್ ಕೂಡ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ವಯೋಮಿತಿಯನ್ನು ಪ್ರಸ್ತುತ 18 ವರ್ಷದಿಂದ 16 ವರ್ಷಕ್ಕೆ ಇಳಿಸುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಏನಿದು ಪ್ರಕರಣ?
14 ವರ್ಷದ ಬಾಲಕಿಯೊಬ್ಬಳ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ 17 ವರ್ಷದ ಬಾಲಕನ ಅರ್ಜಿಯ ವಿಚಾರಣೆ ನಡೆಸಿದ ಮಧ್ಯ ಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠ ಶುಕ್ರವಾರ ಈ ಶಿಫಾರಸು ಮಾಡಿದೆ. ದೈಹಿಕ ಸಂಬಂಧವನ್ನು ಇಬ್ಬರ (ಬಲಿಪಶು ಮತ್ತು ಆರೋಪಿ) ಸಮ್ಮತಿಯೊಂದಿಗೆ ಮಾಡಲಾಗಿದೆ ಎಂದು ಶುಕ್ರವಾರ ಪ್ರತಿವಾದಿ ವಕೀಲರು ವಾದಿಸಿದರು. ಬಳಿಕ, ಎರಡೂ ಕಡೆಯ ವಾದಗಳನ್ನು ಆಲಿಸಿದ ಪೀಠವು ಆರೋಪಿಯ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಿತು ಮತ್ತು ವಯೋಮಿತಿಯನ್ನು 18 ರಿಂದ 16 ಕ್ಕೆ ಇಳಿಸುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಇದನ್ನು ಓದಿ: 5 ವರ್ಷದ ನಿರಂತರ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಕರ್ನಾಟಕ ಹೈಕೋರ್ಟ್
ಹುಡುಗರಿಗೆ ಅನ್ಯಾಯ
ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದ ಅರಿವು ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ಇಂಟರ್ನೆಟ್ ಸಂಪರ್ಕದಿಂದಾಗಿ 14 ವರ್ಷ ವಯಸ್ಸಿನ ಪ್ರತಿಯೊಬ್ಬ ಗಂಡು ಅಥವಾ ಹೆಣ್ಣು ಚಿಕ್ಕ ವಯಸ್ಸಿನಲ್ಲಿಯೇ ಪ್ರೌಢಾವಸ್ಥೆ ಪಡೆಯುತ್ತಿದ್ದಾರೆ. ಇದರಿಂದಾಗಿ, ಹೆಣ್ಣು ಮತ್ತು ಗಂಡು ಮಕ್ಕಳು ಆಕರ್ಷಣೆ ಪಡೆಯುತ್ತಿದ್ದಾರೆ ಮತ್ತು ಈ ಆಕರ್ಷಣೆಗಳು ದೈಹಿಕವಾಗಿ ಪರಿಣಾಮ ಬೀರುತ್ತವೆ. ಈ ಹಿನ್ನೆಲೆ ಸಮ್ಮತಿ ಸೆಕ್ಸ್ ನಡೆಸಿದರೆ ತವಾ ಸಂಬಂಧ ಹೊಂದಿದರೆ ಈ ಪ್ರಕರಣಗಳಲ್ಲಿ, ಹುಡುಗರನ್ನೆ ಅಪರಾಧಿಗಳೆಂದು ಪರಿಗಣಿಸೋದು ಸರಿಯಲ್ಲ. ಅವರು ಹೆಣ್ಣಿನ ಸಂಪರ್ಕಕ್ಕೆ ಬಂದಾಗ ಮತ್ತು ದೈಹಿಕ ಸಂಬಂಧಗಳನ್ನು ಬೆಳೆಸಿದಾಗ ಅದು ವಯಸ್ಸಿನ ವಿಷಯವಾಗಿದೆ" ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ದೀಪಕ್ ಕುಮಾರ್ ಅಗರ್ವಾಲ್ ಹೇಳಿದರು.
"ಸಾಮಾನ್ಯವಾಗಿ, ಹದಿಹರೆಯದ ಹುಡುಗಿಯರು ಮತ್ತು ಹುಡುಗರು ಸ್ನೇಹ ಬೆಳೆಸುತ್ತಾರೆ ಹಾಗೂ ನಂತರ, ಆಕರ್ಷಣೆಯಿಂದಾಗಿ ದೈಹಿಕ ಸಂಬಂಧಗಳನ್ನು ಬೆಳೆಸುತ್ತಾರೆ. ಆದರೆ, ಈ ಸವಾರನ ಕಾರಣದಿಂದಾಗಿ ಸಮಾಜದಲ್ಲಿ ಹುಡುಗನನ್ನು ಅಪರಾಧಿಯಂತೆ ನೋಡಲಾಗುತ್ತದೆ’’ ಎಂದೂ ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿ: ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶ ನಿಷಿದ್ಧ: ಹೈಕೋರ್ಟ್ ಆದೇಶ
ಇದರಿಂದ ಹುಡುಗರಿಗೆ ಅನ್ಯಾಯವಾಗುತ್ತದೆ ಎಂದು ಜಸ್ಟೀಸ್ ಅಗರ್ವಾಲ್ ಕೇಂದ್ರ ಸರ್ಕಾರವನ್ನು ವಿನಂತಿಸಿದ್ದು, ಈ ಹಿನ್ನೆಲೆ ಸಮ್ಮತಿ ಸೆಕ್ಸ್ ವಯಸ್ಸನ್ನು ಮೊದಲಿನಂತೆ 18 ರಿಂದ 16 ವರ್ಷಕ್ಕೆ ಇಳಿಸಲು ಮನವಿ ಮಾಡಿದ್ದಾರೆ.
ಮೊದಲ ಶಿಫಾರಸು ಅಲ್ಲ
ಭಾರತದಲ್ಲಿ, ಆರಂಭದಲ್ಲಿ, ಸಮ್ಮತಿ ಸೆಕ್ಸ್‌ಗೆ ವಯಸ್ಸು 16 ವರ್ಷಗಳಿದ್ದರೂ 2013 ರಲ್ಲಿ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೋಕ್ಸೊ) ಕಾಯಿದೆ, 2012 ಜಾರಿಗೆ ಬಂದ ನಂತರ ಅದನ್ನು 18 ವರ್ಷಗಳಿಗೆ ಹೆಚ್ಚಿಸಲಾಯಿತು. ಆದರೆ, ಒಪ್ಪಿಗೆಯ ವಯಸ್ಸನ್ನು ಕಡಿಮೆ ಮಾಡಬೇಕೆಂದು ನ್ಯಾಯಾಲಯಗಳು ಸೂಚಿಸಿರುವುದು ಇದೇ ಮೊದಲಲ್ಲ.
ಇದನ್ನೂ ಓದಿ: ಪತಿ, ಮಕ್ಕಳನ್ನು ಬಿಟ್ಟು ಲಿವ್ ಇನ್ ಸಂಗಾತಿ ಜತೆ ವಾಸಿಸಲು ವಿವಾಹಿತ ಮಹಿಳೆಗೆ ಅನುಮತಿ ನೀಡಿದ ಹೈಕೋರ್ಟ್
2019 ಮತ್ತು 2022 ರಲ್ಲಿ, ಮದ್ರಾಸ್ ಹೈಕೋರ್ಟ್ ಎರಡು ವಿಭಿನ್ನ ಪ್ರಕರಣಗಳಲ್ಲಿ ಒಂದೇ ಶಿಫಾರಸು ಮಾಡಿದೆ. 2022 ರಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು, ಹದಿಹರೆಯದವರಲ್ಲಿ ಸಮ್ಮತಿಯ ಲೈಂಗಿಕ ಸಂಬಂಧಗಳನ್ನು ಒಳಗೊಂಡ ಪ್ರಕರಣಗಳು "ಸ್ಪೆಕ್ಟ್ರಮ್‌ನಾದ್ಯಂತ ನ್ಯಾಯಮೂರ್ತಿಗಳನ್ನು ಕಷ್ಟಕರವಾದ ಪ್ರಶ್ನೆಗಳನ್ನು" ಒಡ್ಡಿದ ಕಾರಣ, ಒಪ್ಪಿಗೆ ನೀಡುವ ವಯಸ್ಸನ್ನು ಮರುಪರಿಶೀಲಿಸುವಂತೆ ಸಂಸತ್ತಿಗೆ ಮನವಿ ಮಾಡಿದ್ದರು.
ಈ ವಾರದ ಆರಂಭದಲ್ಲಿ, ಗುಜರಾತ್‌ನ ನ್ಯಾಯಾಲಯವು ಪೋಕ್ಸೊ ಕಾಯ್ದೆಯಡಿ ಅತ್ಯಾಚಾರಕ್ಕಾಗಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆರೋಪಿ ಮತ್ತು 17 ವರ್ಷದ ಹುಡುಗಿಯ ನಡುವಿನ ಒಮ್ಮತದ ಸಂಬಂಧದಿಂದಾಗಿ 'ಭಾರವಾದ ಹೃದಯದಿಂದ' ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 18ಕ್ಕಿಂತ ಕಮ್ಮಿ ವಯಸ್ಸಲ್ಲಿ ಸೆಕ್ಸ್‌ಗೆ ಸಮ್ಮತಿ ಇದ್ದರೆ ಅಪರಾಧವೋ? ಅಲ್ವೋ? ಕೇಂದ್ರದ ಮೊರೆ ಹೋದ ಕಾನೂನು ಆಯೋಗ