2 ದಿನ ಬೆಟ್ಟದಲ್ಲಿ ಸಿಲುಕಿದ್ದ ಯುವಕನನ್ನು ಕೊನೆಗೂ ರಕ್ಷಿಸಿದ ಸೇನೆ, ರಕ್ಷಣಾ ಕಾರ್ಯ ಪೂರ್ಣ!

By Suvarna News  |  First Published Feb 9, 2022, 12:15 PM IST

* ಕೇರಳದ ಬೆಟ್ಟದಲ್ಲಿ ಸಿಕ್ಕಾಕೊಂಡಿದ್ದ ಟ್ರೆಕ್ಕರ್

* ಬರೋಬ್ಬರಿ ಎರಡು ದಿನಗಳ ಬಳಿಕ ಯುವಕನ ರಕ್ಷಣೆ

* ಸೇನೆಯ ರಕ್ಷಣಾ ಕಾರ್ಯಾಚರಣೆ ಕೊನೆಗೂ ಪೂರ್ಣ


ತಿರುವನಂತಪುರಂ(ಫೆ.09): ಕೇರಳದ ಪಾಲಕ್ಕಾಡ್ ಪ್ರದೇಶದ ಮಲಂಪುಳ ಬೆಟ್ಟದಲ್ಲಿ ಎರಡು ದಿನಗಳಿಂದ ಸಿಲುಕಿದ್ದ ವ್ಯಕ್ತಿಯನ್ನು ಸೇನೆ ರಕ್ಷಿಸಿದೆ. ಸೋಮವಾರದಿಂದ ಸಿಕ್ಕಿಬಿದ್ದಿರುವ ಯುವಕನನ್ನು ರಕ್ಷಿಸಲು ಪ್ರಯತ್ನಗಳು ನಡೆದಿದ್ದವು, ಆದರೆ ರಕ್ಷಣಾ ತಂಡಕ್ಕೆ ಈ ಯುವಕನಿಗೆ ಆಹಾರ ಮತ್ತು ನೀರನ್ನು ತಲುಪಿಸಲು ಸಾಧ್ಯವಾಗಿರಲಿಲ್ಲ. ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸಹಾಯದಿಂದ ಈ ಯುವಕನನ್ನು ರಕ್ಷಿಸಲು ಪ್ರಯತ್ನಿಸಲಾಯಿತು. ಇನ್ನೂ ಹಲವು ಪ್ರಯತ್ನಗಳು ನಡೆದರೂ ಇಂದು ಬೆಳಗಿನ ಜಾವದವರೆಗೂ ಬೆಟ್ಟದ ಬಂಡೆಗಳಲ್ಲಿ ಸಿಲುಕಿದ್ದ ಆರ್.ಬಾಬು ಅವರನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ವೀಡಿಯೋವೊಂದರಲ್ಲಿ, ಸುಮಾರು 20 ವರ್ಷ ವಯಸ್ಸಿನ ಆರ್ ಬಾಬು ಅವರು ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿರುವುದನ್ನು ನೋಡಬಹುದಾಗಿದೆ. ಅಪಾಯಕಾರಿ ಭಂಗಿಯಲ್ಲಿ ಕುಳಿತಿದ್ದ ಆರ್ ಬಾಬು ಸಣ್ಣದೊಂದು ಬಿರುಕಿನಲ್ಲಿ ಹೇಗೋ ಸಮತೋಲನ ಕಾಯ್ದುಕೊಂಡು ಕುಳಿತಿದ್ದರು.

Kerala Trekker Trapped: ಬೆಟ್ಟದಿಂದ ಜಾರಿ ಬಂಡೆ ಮಧ್ಯೆ ಸಿಕ್ಕಿಬಿದ್ದ ಯುವಕ: ರಕ್ಷಣೆಗಾಗಿ ಸೇನೆ ನೆರವು ಕೋರಿಕೆ!

Latest Videos

undefined

ಇಂದು ಬೆಳಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದು, ಸೇನೆಯ ರಕ್ಷಣಾ ತಂಡ ಯುವಕರೊಂದಿಗೆ ಮಾತನಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

Efforts are in full swing to rescue the youth trapped in Cherat hill. There are currently two units of the at the scene. Army members were able to talk to him. The rescue operation will be intensified today. helicopter is ready to be deployed.

— Pinarayi Vijayan (@vijayanpinarayi)

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, "ಮಲಂಪುಳ ಬೆಟ್ಟದಲ್ಲಿ ಸಿಲುಕಿರುವ ಯುವಕರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರಸ್ತುತ, ಸೇನಾ ರಕ್ಷಣಾ ತಂಡಗಳ ಎರಡು ತಂಡಗಳು ಸ್ಥಳದಲ್ಲಿವೆ. ಸೇನಾ ಸದಸ್ಯರು ಅವರೊಂದಿಗೆ ಮಾತುಕತೆ ನಡೆಸಿದರು. ಇಂದು ರಕ್ಷಣಾ ಕಾರ್ಯಾಚರಣೆ. "ಇನ್ನಷ್ಟು ವೇಗವನ್ನು ಹೆಚ್ಚಿಸಲಾಗುವುದು. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಕೂಡ ಈ ಕಾರ್ಯಾಚರಣೆಗೆ ಸೇರಲು ಸಿದ್ಧವಾಗಿದೆ ಎಂದಿದ್ದರು.

ಸೇನೆಯ ಹೊರತಾಗಿ ಭಾರತೀಯ ವಾಯುಸೇನೆ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ ಎಂದು ಮುಖ್ಯಮಂತ್ರಿ ಕಚೇರಿಯಿಂದ ಬಿಡುಗಡೆಯಾದ ಪ್ರಕಟಣೆಯಲ್ಲಿ ಹೇಳಲಾಗಿತ್ತು. ಸ್ಥಳೀಯರ ಪ್ರಕಾರ, ಯುವಕ ತನ್ನ ಇಬ್ಬರು ಸಹಚರರೊಂದಿಗೆ ಚೇರಾದ್ ಬೆಟ್ಟದ ತುದಿಗೆ ಹೋಗಲು ಯೋಜಿಸಿದ್ದರು. ಇದರಂತೆ ಟ್ರೆಕ್ಕಿಂಗ್ ಆರಂಭಿಸಿದ್ದರು. ಆದರೆ ಉಳಿದ ಇಬ್ಬರು ಅರ್ಧದಾರಿಯಲ್ಲೇ ಹಿಂತಿರುಗಿದ್ದರು. ಆದರೆ ಬಾಬು ಶಿಖರ ಏರುತ್ತಲೇ ಇದ್ದ. ಅಲ್ಲಿಗೆ ತಲುಪಿದ ನಂತರ ಕಾಲು ಜಾರಿ ಬಿದ್ದು ಪರ್ವತದ ಬದಿಯ ಬಂಡೆಗಳ ನಡುವೆ ಸಿಲುಕಿಕೊಂಡಿದ್ದರು.

ಕೇರಳದ ಆರೋಗ್ಯ ಸಚಿವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ, "ಆರ್ ಬಾಬು ಅವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ವೈದ್ಯಕೀಯ ತಂಡವನ್ನು ಸ್ಥಳಕ್ಕೆ ತಲುಪಲು ಸೂಚಿಸಲಾಗಿದೆ. ಎಲ್ಲಾ ಆರೋಗ್ಯ ಅಗತ್ಯಗಳನ್ನು ಪಾಲಕ್ಕಾಡ್ ಜಿಲ್ಲಾ ವೈದ್ಯಾಧಿಕಾರಿ ನೋಡಿಕೊಳ್ಳುತ್ತಾರೆ. ಆಂಬ್ಯುಲೆನ್ಸ್‌ಗಳನ್ನು ಸಹ ನಿಯೋಜಿಸಲಾಗಿದೆ ಎಂದಿದ್ದರು. 

click me!