ಬೆಂಗಾವಲು ಪಡೆ ನಿಲ್ಲಿಸಿ, ಆಂಬುಲೆನ್ಸ್‌ಗೆ ದಾರಿ: ಸಿಎಂ ಜಗನ್ ನಡೆಗೆ ಭಾರೀ ಮೆಚ್ಚುಗೆ!

By Suvarna NewsFirst Published Sep 3, 2020, 8:12 AM IST
Highlights

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ| ಯುವಕನ ಪ್ರಾಣ ಉಳಿಸಲು ತಮ್ಮ ಬೆಂಗಾವಲು ವಾಹನಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಇತರರಿಗೆ ಮಾದರಿಯಾದ ಸಿಎಂ ಜಗನ್| ಜಗನ್ ನಡೆಗೆ ಭಾರೀ ಮೆಎಚ್ಚುಗೆ

ಅಮರಾವತಿ(ಸೆ.03): ಅಗತ್ಯದ ಕೆಲಸದ ನಡುವೆಯೂ ತನ್ನ ಬೆಂಗಾವಲು ಪಡೆ ನಿಲ್ಲಿಸಿ ಆ್ಯಂಬುಲೆನ್ಸ್​ ಹೋಗಲು ದಾರಿ ಮಾಡಿಕೊಟ್ಟ ಆಂಧ್ರ ಪ್ರದೇಶ ಸಿಎಂ ವೈಎಸ್‌​ ಜಗನ್​​ ಮೋಹನ್​​ ರೆಡ್ಡಿ ಮಾನವೀಯ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದು, ಆಪತ್ಭಾಂದವ ಎಂದಿದ್ದಾರೆ. ವಿಜಯವಾಡ ವಿಮಾನ ನಿಲ್ದಾಣದಿಂದ ಹಿಂದಿರುಗುತ್ತಿರುವಾಗ ಜಗನ್ ತಮ್ಮ ಬೆಂಗಾವಲು ವಾಹನಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಸಿಎಂ ಜಗನ್‌ ಮೋಹನ್‌ ರೆಡ್ಡಿ ವಿಜಯವಾಡ ವಿಮಾನ ನಿಲ್ದಾಣದಿಂದ ಹಿಂದಿರುಗುತ್ತಿದ್ದರು. ಇದೇ ವೇಳೆ ಅದೇ ದಾರಿಯಲ್ಲಿ ಆಂಬುಲೆನ್ಸ್‌ ಕೂಡ ಬಂದಿದೆ. ಆದರೆ, ಸಿಎಂ ಬೆಂಗಾವಲು ವಾಹನಗಳ ಸಾಲು ಬಹಳ ದೊಡ್ಡದಿದ್ದರಿಂದ ಆಂಬುಲೆನ್ಸ್‌ ಹೋಗಲು ಸಮಸ್ಯೆಯಾಗಿದೆ. ಹೀಗಾಗಿ ತಮ್ಮ ಬೆಂಗಾವಲು ಪಡೆ ವಾಹನಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸುವಂತೆ ಹೇಳಿ ಆಂಬುಲೆನ್ಸ್‌ ಯಾವುದೇ ಅಡೆ ತಡೆ ಇಲ್ಲದೆ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

Convoy of Andhra Pradesh Chief Minister Jagan Mohan Reddy () gives way to an ambulance in Vijayawada. pic.twitter.com/rpOKdZ3j1s

— Sanjay Jha (@JhaSanjay07)

ಬುಧವಾರ ಮಧ್ಯಾಹ್ನ ವೋಯೂರ್‌ನಿಂದ ಗನ್ನಾವರಂಗೆ ದ್ವಿಚಕ್ರ ವಾಹನದಲ್ಲಿ ಶೇಖರ್‌ ಹೋಗಬೇಕಾದ ಸಂದರ್ಭದಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಚಾಪರ್ಥಿನಾ ಶೇಖರ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡ ಗಾಯಾಳು ಶೇಖರ್‌ನನ್ನು ಆ್ಯಂಬುಲೆನ್ಸ್‌ ಮೂಲಕ ವಿಜಯವಾಡದ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈಗಿರುವಾಗ ಸಿಎಂ  ಸಿಎಂ ಕೂಡ ಅದೇ ದಾರಿಯಲ್ಲಿ ಬರುತ್ತಿದ್ದರು. ಈ ಕಾರಣಕ್ಕೆ ಆಂಬುಲೆನ್ಸ್‌ಗೆ ಹೋಗಲು ತೊಂದರೆಯಾಗಿತ್ತು. ಸಿಎಂ ವಿಮಾನ ನಿಲ್ದಾಣದಿಂದ ತಡೆಪಲ್ಲಿಯ ತಮ್ಮ ಸ್ವಗೃಹಕ್ಕೆ ಹೋಗುತ್ತಿದ್ದರು.

click me!