
ನವದೆಹಲಿ, (ಜುಲೈ.20): ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ರಾಷ್ಟ್ರ ರಾಜಧಾನಿ ಒಂದು ರೀತಿಯಲ್ಲಿ ಯಶಸ್ಸು ಕಂಡಿದೆ ಅಂತ ಹೇಳಬಬಹುದು.
ಯಾಕಂದ್ರೆ, ಮೊದಲ ಬಾರಿಗೆ ಒಂದು ಸಾವಿರದೊಳಕ್ಕೆ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮೂರು ತಿಂಗಳಿಂದ ದೆಹಲಿಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು.
3 ರಿಂದ 4 ಸಾವಿರ ತಲುಪುವುದು ಸಾಮಾನ್ಯ ಸಂಗತಿಯಾಗಿತ್ತು. ಈ ಕಾರಣಕ್ಕಾಗಿ ಮುಂಬೈಯನ್ನು ಮೀರಿಸುತ್ತಾ ಎಂಬ ಆತಂಕವೂ ಎದುರಾಗಿತ್ತು. ಆದ್ರೆ, ಇದೀಗ ಸಂತಸದ ಸಂಗತಿ ಅಂದ್ರೆ ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಹೊಸದಾಗಿ ವರದಿಯಾಗಿರುವ ಪ್ರಕರಣಗಳ ಸಂಖ್ಯೆ 954ಕ್ಕೆ ಇಳಿದಿದೆ.
ಕೊರೋನಾ ಲಸಿಕೆ ರೇಸ್‌ನಲ್ಲಿ ಭಾರತದ 7 ಕಂಪನಿಗಳು!
ಮೇ 27ರ ಬಳಿಕ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರುವುದು ಇದೇ ಮೊದಲಾಗಿದೆ. 35 ಜನರು ಮೃತಪಟ್ಟಿದ್ದಾರೆ.
ಸದ್ಯ ದೆಹಲಿಯಲ್ಲಿ 1,23,747 ಸೋಂಕಿತರಿದ್ದು, ಈ ಪೈಕಿ 1,04,918 ಒಟ್ಟು ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಸದ್ಯ 15,166 ಆಕ್ಟೀವ್ ಕೇಸ್‌ಗಳಿವೆ. ಇನ್ನು ಒಟ್ಟು 1,784 ಜನರು ಕೋವಿಡ್ನಿಂದ ಸಾವಿಗೀಡಾಗಿದ್ದು, 12 ಸಾವಿರ ಬೆಡ್ ಖಾಲಿ ಇವೆ. 696 ಕಂಟೈನ್ಮೆಂಟ್ ಜೋನ್‌ಗಳಿವೆ.
ಹತ್ತು ಸಾವಿರ ಬೆಡ್ಗಳ ಬೃಹತ್ ಆಸ್ಪತ್ರೆ ಸ್ಥಾಪಿಸಿ ಸೋಂಕಿತರನ್ನು ಚಿಕಿತ್ಸೆ ಹಾಗೂ ಐಸೋಲೇಷನ್ಗೆ ಒಳಪಡಿಸುತ್ತಿರುವ ಕಾರಣ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ತಗುಲುವುದರಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು, ಸಂತಸದ ಸಂಗತಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ