
ಬೆಂಗಳೂರು(ಫೆ.05) ಪ್ರತಿಷ್ಠಿತ ಏರ್ ಶೋ 2021ಗೆ ತೆರೆ ಬಿದ್ದಿದೆ. ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಏರ್ ಶೋದಲ್ಲಿ ಲೋಹದ ಹಕ್ಕಿಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿತ್ತು. ಹಲವು ಒಪ್ಪಂದಕ್ಕೂ ಸಹಿ ಬಿದಿದ್ದೆ. ಕೊರೋನಾ ನಡುವೆ ನಡೆದ ಈ ಏರ ಶೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಇದೀಗ ಸಮಾರೋಪ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕನ್ನಡದಲ್ಲಿ ಮಾತು ಆರಂಭಿಸಿದ್ದಾರೆ. ಇತ್ತ ರಾಷ್ಟ್ರಪ್ರತಿ ರಾಮನಾಥ್ ಕೋವಿಂದ್, ಏರ್ ಶೋ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"
Aero India 2021 ಪ್ರದರ್ಶನ : ನೀವಿಲ್ಲಿ ಕಣ್ತುಂಬಿಕೊಳ್ಳಿ.
ಸಮಾರೋಪ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕನ್ನಡದಲ್ಲಿ ಮಾತು ಆರಂಭಿಸಿದ್ದಾರೆ. ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಜನಾಥ್ ಸಿಂಗ್, ಈ ರೀತಿಯ ಏರ್ ಶೋಗಳು ಭಾರತೀಯ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಯುದ್ಧ ವಿಮಾನವೇರಿದ ತೇಜಸ್ವಿ : ಸಾವಿರ ಕಿ.ಮೀ ವೇಗದ ಸಂಚಾರ
ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಭಾರತ ಅತ್ಯಂತ ಬಲಿಷ್ಠವಾಗಿದೆ. ಇಷ್ಟೇ ಅಲ್ಲ ವಿಶ್ವಕ್ಕೆ ಮಾದರಿಯಾಗಿದೆ. 2020ರಲ್ಲಿ ವಿಶ್ವವೇ ಕೊರೋನಾದಿಂದ ಬಳಲುತ್ತಿತ್ತು. 2021ರಲ್ಲೂ ಕೊರೋನಾ ವಿಶ್ವವನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಆದರೆ ಭಾರತ ಕೊರೋನಾ ಮೆಟ್ಟಿನಿಂತು ಅತೀ ದೊಡ್ಡ ಏರ್ ಶೋ ಆಯೋಜಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
2021ರ ಏರ್ ಶೋ ಅತ್ಯಂತ ಯಶಸ್ವಿಯಾಗಿದೆ. 5 ಲಕ್ಷಕ್ಕೂ ಅಧಿಕ ಮಂದಿ ಏರ್ ಶೋ ವೀಕ್ಷಣೆ ಮಾಡಿದ್ದಾರೆ. 120 ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇನ್ನು 203 ಕೋಟಿ ಮೊತ್ತದ ಆರ್ಡರ್ ಕುರಿತ ವಹಿವಾಟು ಆಗಿದೆ ಎಂದು ಏರ್ ಶೋದಲ್ಲಿನ ಒಪ್ಪಂದ ವಹಿವಾಟು ಕುರಿತ ಮಾಹಿತಿ ನೀಡಿದರು.
ಕೊರೋನಾ ನಿಯಮ ಪಾಲನೆ, ಹೈಬ್ರಿಡ್ ಏರ್ ಶೋಗಳಿಂದ ಏರೋ ಇಂಡಿಯಾ ಕಾರ್ಯಕ್ರಮದ ಗೌರವ ದುಪ್ಪಟ್ಟಾಗಿದೆ. ಹೈಬ್ರಿಡ್ ಫಾರ್ಮ್ಯಾಟ್ ನಲ್ಲಿ ನಡೆದಿರುವ ಮೊದಲ ಕಾರ್ಯಕ್ರಮ ಇದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಸ ಹಂಚಿಕೊಂಡರು. 530 ಕಂಪನಿಗಳು ಪ್ರಸಕ್ತ ಏರ್ ಶೋದಲ್ಲಿ ಪಾಲ್ಗೊಂಡಿದೆ ಎಂದರು.
ತೇಜಸ್ ಯುದ್ಧ ವಿಮಾನ ಖರೀದಿ ಆರ್ಡರ್ ಬೆಂಗಳೂರಿನ ಹೆಚ್ಎಎಲ್ ಕಂಪನಿಗೆ ದೊರೆತಿದೆ. ಬರೋಬ್ಬರಿ 48,000 ಕೋಟಿ ರೂಪಾಯಿ ಒಪ್ಪಂದ ಇದಾಗಿದ್ದು, ಭಾರತದ ಸ್ವಾವಲಂಬಿಯಾಗಿ ಯುದ್ಧ ಶಸ್ತಾಸ್ತ್ರಗಳನ್ನು ತಯಾರಿಸುತ್ತಿದೆ ಅನ್ನೋದೆ ಹೆಚ್ಚು ಸಂತಸ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.
ತಯಾರಕರಾಗಿ ಮತ್ತು ಸ್ವಾವಲಂವನೆಯ ಪ್ರತೀಕವಾಗಿ ಏರ್ ಶೋ ನಡೆದಿದೆ. ಇದೇ ವೇಳೆ ಅಚ್ಚುಕಟ್ಟಾಗಿ ಅತೀ ದೊಡ್ಡ ಏರ್ ಶೋ ಆಯೋಜಿಸಿದ ಕರ್ನಾಟಕ ಸರ್ಕಾರವನ್ನು ರಾಷ್ಟ್ರಪತಿ ಪ್ರಶಂಸಿದ್ದಾರೆ.
3 ದಿನಗಳ ಕಾಲ ನಡೆದ ಏರೋ ಇಂಡಿಯಾ ಶೋಗೆ ತೆರೆಬಿದ್ದಿದೆ. ಈ ಬಾರಿಯಾ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚೆರಿಕೆ ವಹಿಸಲಾಗಿತ್ತು. ಹೀಗಾಗಿ ಯಾವದೇ ಅಡೆತಡೆ ಇಲ್ಲದೇ ಕಾರ್ಯಕ್ರಮ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ