
ಚೆನ್ನೈ(ಏ.06): ಪಂಚರಾಜ್ಯ ಚುನಾವಣೆ ಸದ್ಯ ಭಾರೀ ಕುತೂಹಲ ಮೂಡಿಸಿದೆ. ಇಂದು ಏಪ್ರಿಲ್ 6 ರಂದು ಐದೂ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮತದಾರರು ಸ್ಪರ್ಧಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಇನ್ನು ಈ ಐದು ರಾಜ್ಯಗಳ ಪೈಕಿ ತಮಿಳುನಾಡಿನ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಹೀಗಿರುವಾಗ ಇಲ್ಲಿ ನಡೆಯಲಿರುವ ಏಕ ಹಂತದ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಈ ಮಧ್ಯೆ ತಮಿಳು ನಟ 'ದಳಪತಿ' ವಿಜಯ್ ಕೂಡಾ ಮತ ಚಲಾಯಿಸಿದ್ದು, ಇವರು ಪೋಲಿಂಗ್ ಬೂತ್‌ಗೆ ಸೈಕಲ್‌ನಲ್ಲಿ ಆಗಮಿಸಿರುವುದು ಭಾರೀ ಸದ್ದು ಮಾಡಿದೆ.
ವಿಜಯ್‌ನ ದಳಪತಿ 65 ಲಾಂಚ್ ಕಾರ್ಯಕ್ರಮದಲ್ಲಿ ಹಿರೋಯಿನ್ ಮಿಸ್
ಹೌದು ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ನ್ಯಾಷನಲ್ ಪ್ರೀ ಸ್ಕೂಲ್ನ ಮತಗಟ್ಟೆಗೆ ನಟ ವಿಜಯ್ ಸೈಕಲ್ ಸವಾರಿ ಮಾಡಿ ಬಂದಿದ್ದಾರೆ. ಸ್ಟಾರ್ ನಟ ಕಾರು, ಬೈಕ್ ಬಿಟ್ಟು ಸೈಕಲ್‌ನಲ್ಲಿ ಬರುತ್ತಿರುವುದನ್ನು ಕಂಡ ಅವರ ಅಭಿಮಾನಿಗಳು ಸೆಲ್ಫೀ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಆದರೀಗ ಸದ್ಯ ನಟ ವಿಜಯ್ ಮತ ಚಲಾಯಿಸಲು ಸೈಕಲ್‌ನಲ್ಲಿ ಬಂದಿದ್ದೇಕೆ? ಇದು ಸರಳತೆಯೇ ಅಥವಾ ಅವರ ಈ ನಡೆ ಹಿಂದೆ ಬೇರಾವುದಾದರೂ ಉದ್ದೇಶವಿದೆಯೇ ಎಂಬುವುದು ಚರ್ಚೆ ಸೃಷ್ಟಿಸಿದೆ.
ಮಾಸ್ಟರ್ ಹಿಂದಿ ರಿಮೇಕ್..! ವಿಜಯ್ ರೋಲ್ ಮಾಡ್ತಾರಾ ಸಲ್ಮಾನ್ ?
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಖಂಡನೆ?
ನಟ ವಿಜಯ್ ಕೇಂದ್ರ ಸರ್ಕಾರದ ವಿರುದ್ಧ ಸೈಲೆಂಟ್ ಆಗಿ ಪ್ರತಿಭಟನೆ ನಡೆಸಿದ್ದಾರೆ ಎಂಬ ಮಾತುಗಳು ಜೋರಾಗಿವೆ. ಇಂಧನ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದು ಜನ ಸಾಮಾಣಗ್ಯರ ನಿದ್ದೆಗೆಡಿಸಿದೆ. ಸರ್ಕಾರ ಈ ಕ್ರಮವನ್ನು ಖಂಡಿಸುವ ಸಲುವಾಗಿ ವಿಜಯ್ ಮತ ಚಲಾಯಿಸಲು ಹೀಗೆ ಬಂದಿದ್ದರೆನ್ನಲಾಗಿದೆ. ಅದೇನಿದ್ದರೂ ತಮ್ಮ ನೆಚ್ಚಿನ ನಟ ಬಿಸಿಲಿನಲ್ಲೂ, ಫೇಸ್ ಮಾಸ್ಕ್ ಧರಿಸಿ ಸೈಕಲ್ ತುಳಿದುಕೊಂಡು ಬಂದಿದ್ದಾರೆ, ಅದು ಸುಲಭವಲ್ಲ ಎಂಬುವುದು ಅಭಿಮಾನಿಗಳ ಮಾತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ