ಒಬ್ಬ ವ್ಯಕ್ತಿ ಆರೋಪಿ ಮತ್ತು ವಿಚಾರಣೆ ಎದುರಿಸುತ್ತಿರುವಾಗಲೂ ಅಂತಹ ಜೀವನದಲ್ಲಿ ಸಣ್ಣ ಸಂತೋಷಗಳ ವಿಶೇಷ ಕ್ಷಣಗಳನ್ನು ನಿರಾಕರಿಸಬಾರದು ಎಂದು ದೆಹಲಿ ಹೈಕೋರ್ಟ್ ಗಮನಿಸಿದೆ.
ದೆಹಲಿ (ಆಗಸ್ಟ್ 15, 2023): ಮನಿ ಲಾಂಡರಿಂಗ್ ಅಥವಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗೆ ಸಾಕಷ್ಟು ವಿರೋಧದ ನಡುವೆಯೂ ಹೈಕೋರ್ಟ್ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ. ಆರೋಪಿ ವ್ಯಕ್ತಿ ತನ್ನ ಮಗನನ್ನು ಅಡ್ಮಿಷನ್ ಮಾಡಿಸಲು ವಿದೇಶಕ್ಕೆ ತೆರಳಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಒಬ್ಬ ವ್ಯಕ್ತಿ "ಆರೋಪಿ ಮತ್ತು ವಿಚಾರಣೆ ಎದುರಿಸುತ್ತಿರುವಾಗಲೂ ಅಂತಹ "ಜೀವನದಲ್ಲಿ ಸಣ್ಣ ಸಂತೋಷಗಳ ವಿಶೇಷ ಕ್ಷಣಗಳನ್ನು" ನಿರಾಕರಿಸಬಾರದು ಎಂದು ಹೈಕೋರ್ಟ್ ಗಮನಿಸಿದೆ.
ಮಗನ ಅಡ್ಮಿಷನ್ ಪ್ರಕ್ರಿಯೆಗಾಗಿ ಆಗಸ್ಟ್ 26 ರಿಂದ ಸೆಪ್ಟೆಂಬರ್ 19 ರವರೆಗೆ ಕೆನಡಾ, ನಾರ್ವೆ ಮತ್ತು ಲಂಡನ್‌ಗೆ ಪ್ರಯಾಣಿಸಲು ವ್ಯಕ್ತಿ ಅನುಮತಿ ಕೋರಿದ್ದರು. ಅಲ್ಲದೆ, ವಿದೇಶಕ್ಕೆ ತೆರಳಲು ಅನುಮತಿ ನಿರಾಕರಿಸಿ ವಿಶೇಷ ನ್ಯಾಯಾಧೀಶ ರೋಸ್ ನ್ಯಾಯಾಲಯವು ಜುಲೈ 20 ರಂದು ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಮತ್ತು ಮಾರ್ಪಡಿಸುವಂತೆ ಕೋರಿ ವ್ಯಕ್ತಿ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ರು. ಮಗನ ಅಡ್ಮಿಷನ್ ಮತ್ತು ವಿರಾಮ ಹಾಗೂ ಬ್ಯುಸಿನೆಸ್ ಪ್ರಯಾಣಕ್ಕೆ ಅನುಮತಿ ನೀಡ್ಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದರು.
undefined
ಇದನ್ನು ಓದಿ: ತ್ರಿವರ್ಣ ಧ್ವಜ ಎಸೆದ ಉಕ್ರೇನ್ ಖ್ಯಾತ ಗಾಯಕಿ: ಉಮಾ ಶಾಂತಿ ವಿರುದ್ಧ ಕೇಸ್ ದಾಖಲು
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರ ಏಕಸದಸ್ಯ ಪೀಠವು, “ಶಾಲೆಯಲ್ಲಿ ಅಥವಾ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಮಗುವಿನ ಪ್ರವೇಶವನ್ನು ಪೋಷಕರು ಮತ್ತು ಮಕ್ಕಳು ಶಾಶ್ವತವಾಗಿ ಪ್ರೀತಿಸುವ ಕ್ಷಣವಾಗಿದೆ ಎಂಬ ಅಂಶವನ್ನು ಈ ನ್ಯಾಯಾಲಯವು ಗಮನಿಸುತ್ತದೆ. ಅಂತಹ ಮೈಲಿಗಲ್ಲನ್ನು ಸಾಧಿಸುವಾಗ ಪ್ರತಿ ಮಗು ಮತ್ತು ಪೋಷಕರು ಇದು ಒಗ್ಗಟ್ಟಿನ ಭಾವನೆ ಮತ್ತು ಪರಸ್ಪರರೊಂದಿಗಿನ ಕೇವಲ ಉಪಸ್ಥಿತಿ ಇದ್ದರೂ, ಇದಕ್ಕೆ ಬೆಂಬಲ ನೀಡಿದಂತೆ ಎಂದು ನಿರೀಕ್ಷಿಸುತ್ತಾರೆ. ಒಬ್ಬ ವ್ಯಕ್ತಿಯು ಆರೋಪಿಯಾಗಿದ್ದರೂ ಮತ್ತು ವಿಚಾರಣೆಯನ್ನು ಎದುರಿಸುತ್ತಿದ್ದರೂ ಸಹ, ಅವನು ಸಾಮಾನ್ಯವಾಗಿ ಜೀವನದಲ್ಲಿ ಸಣ್ಣ ಸಂತೋಷಗಳ ಈ ವಿಶೇಷ ಕ್ಷಣಗಳನ್ನು ನಿರಾಕರಿಸಬಾರದು’’ ಎಂದು ನ್ಯಾಯಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೆ, ಮಗನು ಬೆಳದು ದೊಡ್ಡವನಾಗ್ತಿದ್ದರೂ, ಮತ್ತೊಂದು ಹೊಸ ದೇಶದಲ್ಲಿ ಹೊಸ ಜೀವನಕ್ಕೆ ಪ್ರವೇಶಿಸಿದಾಗ ಮತ್ತು ಉನ್ನತ ಅಧ್ಯಯನದ ಪ್ರಯಾಣವನ್ನು ಅನುಸರಿಸುವಾಗ ಸಂದರ್ಭಗಳು ಸಮರ್ಥವಾಗಿದ್ದರೆ ಅನುಮತಿಸಸಬೇಕು’’ ಎಂದೂ ದೆಹಲಿ ಹೈಕೋರ್ಟ್ ಪೀಠ ತನ್ನ ಆಗಸ್ಟ್ 9 ರ ಆದೇಶದಲ್ಲಿ ಹೇಳಿದೆ. "ಈ ನ್ಯಾಯಾಲಯವು ಅವರ ಆಯ್ಕೆಯ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶದ ಸಮಯದಲ್ಲಿ ಕುಟುಂಬಕ್ಕೆ ಮತ್ತು ಮಗ ಹಾಗೂ ತಂದೆ ಒಟ್ಟಿಗೆ ಇರುವ ಈ ಕ್ಷಣವನ್ನು ನಿರಾಕರಿಸುವುದಿಲ್ಲ" ಎಂದೂ ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ: ಚಾಕೊಲೇಟ್ ಕೊಡ್ಸೋದಾಗಿ ಹೇಳಿ 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ!
ವಿಚಾರಣೆಯಲ್ಲಿ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ವಿಧಿಸಿದ ಯಾವುದೇ ಷರತ್ತುಗಳೊಂದಿಗೆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು "ಸಮತೋಲನ" ಹೊಂದಿರಬೇಕು ಎಂದು ಹೈಕೋರ್ಟ್ ಗಮನಿಸಿದೆ. ಅಲ್ಲದೆ, ವ್ಯಕ್ತಿಯ ಹಿಂದಿನ ನಡವಳಿಕೆಯ ಪ್ರಕಾರ, ಅವರಿಗೆ ವಿದೇಶಕ್ಕೆ ಹೋಗಲು 20 ಬಾರಿ ಅನುಮತಿ ನೀಡಲಾಗಿದೆ. ಅವರು, ಅಂತಹ ಆದೇಶಗಳ ಯಾವುದೇ ನಿಯಮಗಳನ್ನು ಉಲ್ಲಂಘಿಸಲಿಲ್ಲ ಮತ್ತು ಭಾರತಕ್ಕೆ ಮರಳಿದರು ಎಂಬುದನ್ನೂ ದೆಹಲಿ ಹೈಕೋರ್ಟ್ ಪೀಠ ಹೇಳಿದೆ.
ಇದನ್ನೂ ಓದಿ: ಮಲತಾಯಿ ಅಂದ್ರೆ ಹಿಂಗೇನಾ? ಬಾಲಕನಿಗೆ ಶಾಲೆಗೆ ಹೋಗದಂತೆ ತಡೆದು ತಂದೆಯಿಂದ ದೇಹದ ಹಲವೆಡೆ ಬರೆ ಹಾಕಿಸಿದ ಪಾಪಿ!