ಸುಲಭ್‌ ಇಂಟರ್‌ನ್ಯಾಷನಲ್‌ ಸಂಸ್ಥಾಪಕ ಬಿಂದೇಶ್ವರ್‌ ಪಾಠಕ್‌ ನಿಧನ

By Santosh NaikFirst Published Aug 15, 2023, 5:06 PM IST
Highlights

Bindeshwar Pathak: ಸುಲಭ್ ಇಂಟರ್‌ನ್ಯಾಶನಲ್‌ನ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ಅವರು ಮಂಗಳವಾರ 80 ನೇ ವಯಸ್ಸಿನಲ್ಲಿ ನಿಧನರಾದರು.
 

ನವದೆಹಲಿ (ಆ.15): ಸುಲಭ್ ಇಂಟರ್‌ನ್ಯಾಶನಲ್‌ನ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ಅವರು ಮಂಗಳವಾರ 80 ನೇ ವಯಸ್ಸಿನಲ್ಲಿ ನಿಧನರಾದರು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ವೈಶಾಲಿ ಜಿಲ್ಲೆಯ ರಾಮ್‌ಪುರ ಬಾಘೆಲ್ ಗ್ರಾಮದಲ್ಲಿ ಜನಿಸಿದ ಪಾಠಕ್ ಅವರು 1964 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿದ್ದರು. 1980 ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಮತ್ತು 1985 ರಲ್ಲಿ ತಮ್ಮ ಪಿಎಚ್‌ಡಿಯನ್ನು ಪಾಟ್ನಾ ವಿಶ್ವವಿದ್ಯಾಲಯದಿಂದ ಇವರು ಪಡೆದುಕೊಂಡಿದ್ದರು. ದೇಶದ ನೈರ್ಮಲ್ಯ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಅವರು 1970 ರಲ್ಲಿ ಸುಲಭ್ ಇಂಟರ್ನ್ಯಾಷನಲ್ ಸಮಾಜ ಸೇವಾ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದರು. 1991 ರಲ್ಲಿ, ಪಾಠಕ್ ಅವರು ಸ್ಕ್ಯಾವೆಂಜರ್‌ಗಳನ್ನು ವಿಮೋಚನೆ ಮತ್ತು ಪುನರ್ವಸತಿಗಾಗಿ ಮತ್ತು ಪೋರ್-ಫ್ಲಶ್ ಟಾಯ್ಲೆಟ್ ತಂತ್ರಜ್ಞಾನವನ್ನು ಒದಗಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಕೆಲಸಕ್ಕಾಗಿ ಪದ್ಮಭೂಷಣವನ್ನು ಪಡೆದರು ಎಂದು ಸುಲಭ್ ಇಂಟರ್‌ನ್ಯಾಷನಲ್‌ ತನ್ನ ಸೈಟ್‌ನಲ್ಲಿ ಬರೆದುಕೊಂಡಿದೆ.

click me!