Accident In Bharat Jodo Yatra: ಭಾರತ್‌ ಜೋಡೋ ಯಾತ್ರೆಯಲ್ಲಿ ಅಪಘಾತ, ಕಾಂಗ್ರೆಸ್‌ ಕಾರ್ಯಕರ್ತ ಸಾವು!

By Santosh NaikFirst Published Nov 11, 2022, 12:51 PM IST
Highlights

ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆ ಶುಕ್ರವಾರ 65ನೇ ದಿನ. ಸದ್ಯ ಮಹಾರಾಷ್ಟ್ರದ ಮೂಲಕ ಸಾಗುತ್ತಿರುವ ಯಾತ್ರೆ ಇಂದು (ನ.10) ನಾಂದೇಡ್ ಜಿಲ್ಲೆಯಿಂದ ಹಿಂಗೋಲಿ ಜಿಲ್ಲೆ ಪ್ರವೇಶಿಸುತ್ತಿದೆ. ಇದರ ನಡುವೆ ಯಾತ್ರೆಯಲ್ಲಿ ಆಘಾತಕಾರಿ ಘಟನೆ ಸಂಭವಿಸಿದೆ.
 

ನಾಂದೇಡ್‌ (ನ.11): ಕಾಂಗ್ರೆಸ್‌ ಪಕ್ಷದ ಭಾರತ್‌ ಜೋಡೋ ಯಾತ್ರೆಗೆ ಒಂದರ ಮೇಲೆ ಒಂದು ಆಘಾತಗಳು ಸಂಭವಿಸುತ್ತಿದೆ. ಕಳೆದ ಮಂಗಳವಾರ ಕಾಂಗ್ರೆಸ್‌ ನಾಯಕ 75 ವರ್ಷದ ಕೃಷ್ಣಕುಮಾರ್ ಪಾಂಡೆ ಹೃದಯಾಘಾತದಿಂದ ಸಾವು ಕಂಡಿದ್ದರು. ಇದನ್ನು ಮರೆಯುವ ಮುನ್ನವೇ ಭಾರತ್‌ ಜೋಡೋ ಯಾತ್ರೆಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಗುರುವಾರ ರಾತ್ರಿ ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ ಯಾತ್ರೆ ಸಾಗುತ್ತಿರುವಾಗ ಟ್ರಕ್‌ ಇಬ್ಬರು ಪಾದಯಾತ್ರಿಗಳ ಮೇಲೆ ಹರಿದಿದೆ. ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಾಹುಲ್‌ ಗಾಂಧಿ ಅವರ ನಾಯಕತ್ವದಲ್ಲಿ ಪ್ರಸ್ತುತ ಭಾರತ್‌ ಜೋಡೋ ಯಾತ್ರೆ 65ನೇ ದಿನದಲ್ಲಿದೆ. ಪ್ರಸ್ತುತ ಯಾತ್ರೆ ಮಹಾರಾಷ್ಟ್ರದಿಂದ ಸಾಗುತ್ತಿದೆ. ಇಂದು ನಾಂದೇಡ್‌ ಜಿಲ್ಲೆಯಿಂದ ಹಿಂಗೋಲಿ ಜಿಲ್ಲೆಗೆ ಸಾಗುತ್ತಿದೆ. ಈ ವೇಳೆ ಆಘಾತಕಾರಿ ಅಪಘಾತ ಸಂಭವಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಟ್ರಕ್ ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬನಿಗೆ ಸ್ವಲ್ಪ ಗಾಯವಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ನಾಂದೇಡ್ ಜಿಲ್ಲೆಯ ನಾಂದೇಡ್-ಅಕೋಲಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

Moment of Silence for Shri. Ganesan - Yatri who passed away yesterday

pic.twitter.com/W0I72Ar2fH

— All India Mahila Congress (@MahilaCongress)


ನಾಂದೇಡ್ ಜಿಲ್ಲೆಯಲ್ಲಿರುವ ಭಾರತ್ ಜೋಡೋ ಯಾತ್ರೆಯ ನಾಲ್ಕನೇ ದಿನದಂದು ಯಾತ್ರೆ ಮೊಂಧಾ ಪ್ರದೇಶದಲ್ಲಿತ್ತು. ಮೊಂಡಾ ಪ್ರದೇಶದಲ್ಲಿ ರಾಹುಲ್ ಗಾಂಧಿ ಸಭೆ ನಡೆಸಿದರು. ಈ ಸಭೆಯ ನಂತರ, ಯಾತ್ರೆಯು ಪಿಂಪಲಗಾಂವ್‌ನಲ್ಲಿ ನಿಲುಗಡೆಗೆ ತೆರಳುವ ಹಾದಿಯಲ್ಲಿತ್ತು.ಇದೇ ವೇಳೆ ವೇಗವಾಗಿ ಬಂದ ಟ್ರಕ್ ನಾಂದೇಡ್ ಅಕೋಲಾ ಹೆದ್ದಾರಿಯಿಂದ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಗಣೇಶನ್ (62) ಮತ್ತು ಸಯ್ಯುಲ್‌ (30) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಣೇಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಯ್ಯುಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಣೇಶನ್ ಮತ್ತು ಸಯ್ಯುಲ್‌ ತಮಿಳುನಾಡಿನ ನಿವಾಸಿಗಳಾಗಿದ್ದಾರೆ.

Bharat Jodo Yatra Strict rules: 4 ಗಂಟೆಗೆ ಏಳ್ಬೇಕು, 5ನೇ ನಿಮಿಷದಲ್ಲಿ ಸ್ನಾನ ಆಗ್ಬೇಕು!

ಅಪಘಾತದ ಸುದ್ದಿ ತಿಳಿದ ತಕ್ಷಣ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಮತ್ತು ಶಾಸಕ ಮೋಹನ್ ಹುಂಬಾರ್ಡೆ ಸಯ್ಯುಲ್‌ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಧಾವಿಸಿದರು. ಅಶೋಕ್ ಚವ್ಹಾಣ್ ರಾತ್ರಿ 12:30ರ ಸುಮಾರಿಗೆ ಆಸ್ಪತ್ರೆಯಲ್ಲಿದ್ದರು ಎಂದು ತಿಳಿದುಬಂದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಗಣೇಶನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Rahul Gandhi T Shirt: 41 ಸಾವಿರ ರೂಪಾಯಿ ಟಿ-ಶರ್ಟ್‌ ಧರಿಸಿ ರಾಹುಲ್‌ ಯಾತ್ರೆ, ಬಿಜೆಪಿಯ ಟೀಕೆ!

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಶುಕ್ರವಾರ 65 ನೇ ದಿನಕ್ಕೆ ಕಾಲಿಟ್ಟಿದೆ. ನೆರೆಯ ತೆಲಂಗಾಣದಿಂದ ನವೆಂಬರ್‌ 7 ರಂದು ಮಹಾರಾಷ್ಟ್ರದ ನಾಂದೇಡ್‌ನ ದೇಗಳೂರು ತಲುಪಿತ್ತು. ಇಲ್ಲಿ ಐದು ದಿನಗಳಿಂದ ಯಾತ್ರೆ ನಡೆಯುತ್ತಿದೆ. ಯಾತ್ರೆಯು ನಾಂದೇಡ್‌ನ ಅರ್ಥಪುರದ ಪಿಂಪಲ್‌ಗಾಂವ್ ಮಹಾದೇವ್‌ನಲ್ಲಿರುವ ವಿಠ್ಠಲರಾವ್ ದೇಶಮುಖ್ ಅವರ ಕಚೇರಿಯಲ್ಲಿ ರಾತ್ರಿ ತಂಗಿತು. ಶುಕ್ರವಾರ ಬೆಳಗ್ಗೆ ದಬಾದ್‌ನಿಂದ ನಾಂದೇಡ್-ಹಿಂಗೋಲಿ ರಸ್ತೆಯ ಅರ್ಧಾಪುರದಲ್ಲಿ ಪಾದಯಾತ್ರೆ ಪುನರಾರಂಭ ಆಗಿತ್ತು. ಶುಕ್ರವಾರ ಬೆಳಗ್ಗೆ ಯಾತ್ರೆ ಆರಂಭವಾಗುವ ಮುನ್ನ ಮೃತರಾದ ಗಣೇಶನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ರಾಹುಲ್‌ ಗಾಂಧಿ ಭಾರತ್‌ ಜೋಡೀ ಯಾತ್ರೆ ಆರಂಭಿಸಿದ್ದಾರೆ.

click me!