
ಚಂಡೀಗಢ : ‘ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಲ್ಲಿ ದಂಗೆಯಾಗಿ ಸರ್ಕಾರವನ್ನು ಕಿತ್ತೊಗೆದಂತೆ, ಭಾರತದಲ್ಲಿಯೂ ಯುವಕರು ದಂಗೆ ಎಬ್ಬಿಸಿ, ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಐಎನ್‌ಎಲ್‌ಡಿ ಪಕ್ಷದ ನಾಯಕ ಅಭಯ್ ಚೌಟಾಲಾ ಹೇಳಿಕೆ ನೀಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೌಟಾಲಾ, ‘ಶ್ರೀಲಂಕಾದಲ್ಲಿ ಅಲ್ಲಿನ ಯುವಜನತೆಯು ದಂಗೆ ಶುರು ಮಾಡಿ ಸರ್ಕಾರವನ್ನು ಕಿತ್ತೊಗೆದರು. ಅದೇ ರೀತಿ ಬಾಂಗ್ಲಾದ ದಂಗೆಯೂ ಸರ್ಕಾರದ ಪತನಕ್ಕೆ ಕಾರಣವಾಯಿತು. ನೇಪಾಳದ ಪ್ರತಿಭಟನೆಯು ಸರ್ಕಾರ ಮುಗ್ಗರಿಸಲು ಸಾಕ್ಷಿಯಾಯಿತು. ಇದೇ ರೀತಿಯ ತಂತ್ರಗಳು ಭಾರತದಲ್ಲಿಯೂ ಆಗಬೇಕು. ಆಗ ಇಲ್ಲಿನ ಸರ್ಕಾರವೂ ಬೀಳುತ್ತದೆ’ ಎಂದರು.
ಚೌಟಾಲಾ ಹೇಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಸಿರುವ ಭರದಲ್ಲಿ ವಿರೋಧಿ ಮುಖಗಳು ‘ಭಾರತ ವಿರೋಧಿ, ಸಂವಿಧಾನ ವಿರೋಧಿ ಮತ್ತು ಪ್ರಜಾಸತ್ತಾತ್ಮಕ ವಿರೋಧಿ’ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ