AAP Rally ಗುಜರಾತ್ ಮೇಲೆ ಆಪ್ ಕಣ್ಣು,ಏ.2ಕ್ಕೆ ಅಹಮದಾಬಾದಲ್ಲಿ ರಾರ‍ಯಲಿ!

By Kannadaprabha NewsFirst Published Mar 23, 2022, 4:13 AM IST
Highlights
  • ದಿಲ್ಲಿ, ಪಂಜಾಬ್‌ ಬಳಿಕ ಗುಜರಾತ್‌ ಮೇಲೆ ಆಪ್‌ ಕಣ್ಣು
  • ಅಹಮದಾಬಾದ್‌ನಲ್ಲಿ ಭರ್ಜರಿ ರೋಡ್‌ ಶೋ ಮತ್ತು ರಾರ‍ಯಲಿ
  • ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ
     

ಅಹಮದಾಬಾದ್‌(ಮಾ.23): ದಿಲ್ಲಿ ಬಳಿಕ ಪಂಜಾಬ್‌ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಆಮ್‌ ಆದ್ಮಿ ಪಕ್ಷ, ಇದೀಗ ಹಂತಹಂತವಾಗಿ ಬಿಜೆಪಿ ಪ್ರಾಬಲ್ಯ ಇರುವ ಗುಜರಾತ್‌ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ. ಮುಂದಿನ ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅದಕ್ಕೆ ಸಿದ್ಧತೆ ಎಂಬಂತೆ ಆಮ್‌ಆದ್ಮಿ ಪಕ್ಷ ಏ.2ರಂದು ಅಹಮದಾಬಾದ್‌ನಲ್ಲಿ ಭರ್ಜರಿ ರೋಡ್‌ ಶೋ ಮತ್ತು ರಾರ‍ಯಲಿ ನಡೆಸಲು ಮುಂದಾಗಿದೆ.

ಇದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಸೇರಿದಂತೆ ಪಕ್ಷದ ಎಲ್ಲಾ ಹಿರಿಯ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.

ಅಹಮದಾಬಾದ್‌ ಬಳಿಕ ಮುಂದೆ ಸೌರಾಷ್ಟ್ರದಲ್ಲೂ ರೋಡ್‌ ಶೋ ನಡೆಯಲಿದೆ. ಪಂಜಾಬ್‌ನಲ್ಲಿ ಸೃಷ್ಟಿಯಾದಂತೆ ಗುಜರಾತ್‌ನಲ್ಲೂ ಸುನಾಮಿ ಸೃಷ್ಟಿಯಾಗಲಿದೆ ಎಂದು ಆಪ್‌ನ ಹಿರಿಯ ನಾಯಕ ಇಸುದಾನ್‌ ಗಢ್ವಿ ಹೇಳಿದ್ದಾರೆ. ಗುಜರಾತ್‌ನ 182 ವಿಧಾನಸಭಾ ಸ್ಥಾನಗಳಿಗೆ ಈ ವರ್ಷ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಕಳೆದ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಹಿಡಿದಿತ್ತು. ಆಮ್‌ ಆದ್ಮಿ ಪಕ್ಷ ಕಳೆದ ಚುನಾವಣೆಯಲ್ಲಿ ಒಂದೂ ಸ್ಥಾನವನ್ನೂ ಗೆದ್ದಿರಲಿಲ್ಲ.

ಕ್ರಿಕೆಟಿಗ ಹರ್ಭಜನ್‌ ಸೇರಿ ಐವರು ಆಪ್‌ನಿಂದ ರಾಜ್ಯಸಭೆಗೆ

ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ನಾಯಕತ್ವ ಬದಲಾವಣೆ ಆಗದಿದ್ದಲ್ಲಿ ಮೂರೂ ಪಕ್ಷಗಳು ಧೂಳೀಪಟವಾಗುತ್ತವೆ. ದೆಹಲಿ ಮಾದರಿಯಲ್ಲಿ ಆಮ್‌ ಆದ್ಮಿ ಪಕ್ಷ ರಾಜ್ಯದಲ್ಲಿ ಎಲ್ಲರನ್ನೂ ಧೂಳೀಪಟ ಮಾಡಲಿದೆ ಎಂದು ಬಿಜೆಪಿ ಸದಸ್ಯ ಲೆಹರ್‌ ಸಿಂಗ್‌ ಎಚ್ಚರಿಸಿದ್ದಾರೆ.

ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಮೂರೂ ಪಕ್ಷಗಳು ಅಪ್ಪನ ನಂತರ ಮಕ್ಕಳಿಗೆ ಅವಕಾಶ ನೀಡುವ ಸಂಪ್ರದಾಯ ಬಿಡಬೇಕು. ಯುವಕರು, ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ, ಆಮ್‌ ಆದ್ಮಿ ಪಾರ್ಟಿ ಕರ್ನಾಟಕದಲ್ಲಿಯೂ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಎಲ್ಲ ಪಕ್ಷಗಳು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಕೆಲಸ ಮಾಡಿ ಇಲ್ಲವೇ ಹೊರಡಿ: ಪಂಜಾಬ್‌ ಸಚಿವರಿಗೆ ಕೇಜ್ರಿ ಫರ್ಮಾನು!

ಇದೇ ನನ್ನ ಕೊನೆಯ ಭಾಷಣ:

ಇದಕ್ಕೂ ಮುನ್ನ ಆರಂಭದಲ್ಲಿ ಮಾತನಾಡಿದ ಲೆಹರ್‌ ಸಿಂಗ್‌, ನಾನು ಕಳೆದ 12 ವರ್ಷಗಳಿಂದ ಈ ಸದನದಲ್ಲಿದ್ದೇನೆ. ಪಕ್ಷ ನನಗೆ ಎರಡು ಅವಧಿಗೆ ಅವಕಾಶ ಕೊಟ್ಟಿದೆ. ಮತ್ತೆ ನಾನು ಅವಕಾಶ ಕೇಳೋದಿಲ್ಲ. ಆ ನಿರೀಕ್ಷೆಯನ್ನೂ ಇರಿಸಿಕೊಂಡಿಲ್ಲ, ಹೊಸಬರಿಗೆ ಅವಕಾಶ ಮಾಡಿ ಕೊಡಬೇಕು. ಹಾಗಾಗಿ ಇದೇ ನನ್ನ ಕಡೆಯ ಭಾಷಣ, ಅವಕಾಶ ನೀಡಿದ ಪಕ್ಷದ ನಾಯಕರು, ಸಹಕಾರ ನೀಡಿದ ಸದನದ ಎಲ್ಲ ಸದಸ್ಯರಿಗೆ ಧನ್ಯವಾದ ತಿಳಿಸಿದರು.

ಗುಜರಾತ್‌ನಲ್ಲಿ 9 ತಿಂಗಳ ಮೊದಲೇ ಮೋದಿ ಚುನಾವಣಾ ಕಹಳೆ
ಪಂಚರಾಜ ಚುನಾವಣೆ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದು ಪುನಃ ಅಧಿಕಾರಕ್ಕೆ ಬಂದ ಮಾರನೇ ದಿನವಾದ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ತವರು ರಾಜ್ಯ ಗುಜರಾತ್‌ನಲ್ಲಿ 10 ಕಿ.ನೀ. ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಈ ಮೂಲಕ ಇದೇ ವರ್ಷ ಡಿಸೆಂಬರ್‌ನಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯದಲ್ಲಿ 9 ತಿಂಗಳ ಮೊದಲೇ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

ಕೇಸರಿ ಟೋಪಿ ಧರಿಸಿದ್ದ ಅವರು ತೆರೆದ ಕಾರಿನಲ್ಲಿ ನಿಂತು ಏರ್‌ಪೋರ್ಟ್‌ನಿಂದ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಾದ ‘ಕಮಲಂ’ವರೆಗೆ ರೋಡ್‌ ಶೋ ನಡೆಸಿ, ನೆರೆದಿದ್ದ ಭಾರೀ ಜನರಿಗೆ ಧನ್ಯವಾದ ಸಮರ್ಪಿಸಿದರು. ಬಳಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಪಂಚರಾಜ್ಯದ ಜನ ಅಭಿವೃದ್ಧಿಗೆ ಮತ ನೀಡಿದ್ದಾರೆ ಎಂದರು. ರೋಡ್‌ ಶೋ ಬಳಿಕ ಮೋದಿ ಅವರು ಮುಂದಿನ ಗುಜರಾತ್‌ ಚುನಾವಣೆ ಬಗ್ಗೆ ರಣನೀತಿ ರೂಪಿಸುವ ಸಭೆ ನಡೆಸಿದರು.

click me!