'ಮಹಾ' ಸರ್ಕಾರ ಸಂಪುಟ ವಿಸ್ತರಣೆ: ಆದಿತ್ಯ ಠಾಕ್ರೆಗೆ ಸಚಿವ ಸ್ಥಾನ!

By Suvarna NewsFirst Published Dec 30, 2019, 11:52 AM IST
Highlights

ಮಹಾರಾಷ್ಸ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆ| ಉದ್ಧವ್ ಮಗ ಆದಿತ್ಯ ಠಾಕ್ರೆಗೆ ಸಚಿವ ಸ್ಥಾನ?| ಶಿವಸೇನೆ ಹಾಗೂ ಕಾಂಗ್ರೆಸ್‌ನ ತಲಾ 13 ಶಾಸಕರಿಗೆ ಮಂತ್ರಿ ಭಾಗ್ಯ| ಕಾಂಗ್ರೆಸ್‌ನ 10 ಶಾಸಕರಿಗೂ ಖಾತೆ

ಮಹಾರಾಷ್ಟ್ರ[ಡಿ.30]: ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇಂದು[ಸೋಮವಾರ] ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಮಂತ್ರಿ ಮಂಡಲದಲ್ಲಿ ಉದ್ಧವ್ ಮಗ ಆದಿತ್ಯ ಠಾಕ್ರೆಯನ್ನೂ ಶಾಮೀಲುಗೊಳಿಸಲಾಗಿದೆ. 

ಆದಿತ್ಯ ಠಾಕ್ರೆ ಹೊರತುಪಡಿಸಿ ಕಾಂಗ್ರೆಸ್ ಪಕ್ಷದ 10 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್, ಅಮಿತ್ ದೇಶ್ ಮುಖ್, ಯಶೋಮತಿ ಠಾಕೂರ್ ಹಾಗೂ ಕೆ. ಸಿ. ಪಡ್ವೀ ಹೆಸರು ಇರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಶೋಕ್ ಚೌಹಾಣ್ ಗೆ PWD ಖಾತೆ ಕೊಡುವ ಸಾಧ್ಯತೆಗಳಿವೆ. 

ಲಭ್ಯವಾದ ಮಾಹಿತಿ ಅನ್ವಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ರಿಗೆ ಖಾತೆ ಸಿಗುವುದು ಬಹುತೇಕ ಅನುಮಾನ. ಈ ವಿಚಾರದಿಂದಲೇ ಪೃಶ್ವಿರಾಜ್ ಅಸಮಾಧಾನದಿಂದ ಇದ್ದಾರೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಚಿವರಾಗುವ ನಾಯಕರ ಪಟ್ಟಿ ಬಿಡುಗಡೆ ಮಾಡಿಲ್ಲವಾದರೂ, ಸಚಿವ ಸಂಪುಟ ವಿಸ್ತರಣೆಯಾಗುತ್ತಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ಇನ್ನು ಪ್ರಮಾಣ ವಚನ ಸ್ವೀಕರಿಸಲಿರುವ 10 ಕಾಂಗ್ರೆಸ್ ಸಂಭಾವ್ಯ ಶಾಸಕರ ಹೆಸರು ಹೀಗಿದೆ. ಶೋಕ್ ಚೌಹಾಣ್, ಕೆ. ಸಿ. ಫಡ್ವೀ, ವಿಜಯ್ ವಡೆಟ್ಟೀವಾರ್, ಅಮಿತ್ ದೇಶ್ ಮುಖ್, ಸುನಿಲ್ ಚತ್ರಪಾಲ್ ಕೇದಾರ್, ಯಶೋಮತಿ ಠಾಕೂರ್, ವರ್ಷಾ ಏಕನಾಥ್ ಗಾಯಕ್ವಾಡ್, ಅಸ್ಲಮ್ ಶೇಖ್, ಬಂಟೀ ಪಾಟೀಲ್, ವಿಶ್ವಜೀತ್ ಪತಂಗ್ ರಾವ್ ಕದಮ್. ಇವರನ್ನು ಹೊರತುಪಡಿಸಿ ಶಿವಸೇನೆ ಹಾಗೂ NCPಯ ತಲಾ 13 ಶಾಶಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

click me!