ಪಾಕ್ ಹಿಮ್ಮೆಟ್ಟಿಸಿ ತಿರಂಗ ಹಾರಿಸಿದ ಕಾರ್ಗಿಲ್ ಹೀರೋ ಲೆ.ಜ.ಕೆಪಿಡಿ ಸಮಂತ ನಿಧನ!

By Suvarna NewsFirst Published Apr 13, 2020, 9:19 PM IST
Highlights

ಕೊರೋನಾ ವೈರಸ್ ಅಬ್ಬರದ ನಡುವೆ ಭಾರತ ಹೆಮ್ಮೆಯ ವೀರ ಯೋಧ,  ನಿವೃತ್ತ ಲೆ.ಜ. ಕೆಪಿಡಿ ಸಮಂತ ನಿಧನರಾಗಿದ್ದಾರೆ. ಭಾರತ-ಪಾಕಿಸ್ತಾನ ಯುದ್ದ, ಕಾರ್ಗಿಲ್ ಯುದ್ದದಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಸಮಂತ(70) ಕ್ಯಾನ್ಸರ್ ರೋಗದಿಂದ ನಿಧನರಾಗಿದ್ದಾರೆ.

ನವದೆಹಲಿ(ಏ.13): ವಿಶ್ವವೇ ಕೊರೋನಾ ವೈರಸ್‌ ವಿರುದ್ಧದ ಹೋರಾಡುತ್ತಿದೆ. ಆದರೆ ಪಾಕಿಸ್ತಾನ ಈಗಲೂ ಕಾಶ್ಮೀರ ಗಡಿಯಲ್ಲಿ ಖ್ಯಾತೆ ತೆಗೆಯುತ್ತಿದೆ. ಸುಖಾಸುಮ್ಮನೆ ಕಾಲು ಕೆರೆದು ಬರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡುತಲೇ ಬಂದಿದೆ ಭಾರತೀಯ ಸೇನೆ. ಆದರೆ ಅತಿಯಾದಾಗ ಅದೇ ಭಾಷೆಯಲ್ಲಿ ಉತ್ತರ ನೀಡಿದೆ. ಹೀಗೆ 1971ರ ಭಾರತ-ಪಾಕಿಸ್ತಾನ ಯುದ್ದ ಹಾಗೂ 1999ರ ಕಾರ್ಗಿಲ್ ಯುದ್ದದಲ್ಲಿ ಬದ್ಧವೈರಿ ಪಾಕಿಸ್ತಾನ ಹಿಮ್ಮೆಟ್ಟಿಸಿದ ಕೀರ್ತಿ ಭಾರತಕ್ಕಿದೆ. ಈ ಯುದ್ಧದಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಲೆಫ್ಟೆನೆಂಟ್ ಜನರಲ್ ಕೆಪಿಡಿ ಸಮಂತ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.

ಕೊರೋನಾದಿಂದ ಆರ್ಥಿಕ ಸಂಕಷ್ಟ; ಭಾರತ- ರಷ್ಯಾ ಮಿಸೈಲ್ ಖರೀದಿ ಒಪ್ಪಂದ ಕುರಿತು ರಾಯಭಾರಿ ಸ್ಪಷ್ಟನೆ!

70 ವರ್ಷದ ಲೆ.ಜ.ಸಮಂತ ಕಳೆದ ಹಲವು ತಿಂಗಳಿನಿಂದ ದೆಹಲಿಯ ಆಪೋಲೋ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಕಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ(ಏ.13)ರಂದು ನಿಧನರಾಗಿದ್ದಾರೆ. ದೆಹಲಿಯ ಬ್ರಾರ್ ಸ್ಕೇರ್ ಕಂಟೋನ್ಮೆಂಟ್‌ನಲ್ಲಿ ದೇಶದ ಹೆಮ್ಮೆಯ ವೀರಯೋಧನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 

1971ರ ಭಾರತ-ಪಾಕಿಸ್ತಾನ ಯುದ್ದ, 1984ರ ಆಪರೇಶ್ ಬ್ಲೂ ಸ್ಟಾರ್ ಹಾಗೂ 1999ರ ಕಾರ್ಗಿಲ್ ವಾರ್‌ಗಳಲ್ಲಿ ಹೋರಾಡಿದ ಸಮಂತ, ಪಾಕಿಸ್ತಾನ ಹಿಮ್ಮೆಟ್ಟಿಸಿ ತಿರಂಗ ಹಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ರಾಷ್ಟ್ರೀಯ ರೈಫಲ್ ರಿಜಿಮೆಂಟ್‌ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜಮ್ಮ ಮತ್ತು ಕಾಶ್ಮೀರದಲ್ಲಿನ ಭಯೋತ್ವಾದಕ ನಿಗ್ರಹ ದಳದ ಮೂಲಕ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕಾರ್ಗಿಲ್ ಯುದ್ದದ ವೇಳೆ ಬೋಫೋರ್ಸ್ ಆರ್ಟಿಲರಿ ಬ್ರಿಗೇಡ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. 

ಭಾರತ-ಪಾಕ್ ಲಕ್ಷ್ಮಣ ರೇಖೆಯಲ್ಲಿ ಮಾರಾಮಾರಿ, 5 ಉಗ್ರರು ಫಿನೀಶ್!.

ಕಾರ್ಗಿಲ್ ಯುದ್ದದ ವೇಳೆ ಸಮಂತ ಅವರ ಆರ್ಟಿಲರಿ ಬ್ರಿಗೇಡ್, ಪಾಕ್ ಯೋಧರು ಹಾಗೂ ಕಾರ್ಗಿಲ್‌ನಲ್ಲಿ ಅಡಗಿದ್ದ ಭಯೋತ್ಪಾದಕರ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಈ ಮೂಲಕ ಭಾರತದ ಯಶಸ್ಸಿನಲ್ಲಿ ಪ್ರಮುಖ ಕಾರಣರಾಗಿದ್ದರು. ಪಂಜಾಬ್‌ನಲ್ಲಿ ಅಡಗಿದ್ದ ಖೈಸ್ತಾನಿ ಭಯೋತ್ಪಾದಕರ ವಿರುದ್ಧದ ಕಾರ್ಯಚರಣೆಗಾಗಿ ರಾಜ್‌ಶಕ್ ಪಂಜಾಬ್ ಆಪರೇಶನ್‌ನಲ್ಲೂ ಪಾಲ್ಗೊಂಡಿದ್ದಾರೆ. ಭಾರತದ ಪಾರ್ಲಿಮೆಂಟ್ ಮೇಲಿನ ಭಯೋತ್ಪಾದಕ ದಾಳಿ ಬಳಿಕ ರಚಿಸಲಾದ ಆಪರೇಶನ್ ಪರಾಕ್ರಮ್ ತಂಡದ ಅಡಿಯಲ್ಲಿ ಯಶಸ್ವಿಯಾಗಿ ಕಾರ್ಯಚರಣೆ ನಡೆಸಿದ್ದಾರೆ.

ಕೆಪೆಡಿ ಸಮಂತ ಪರಮ ವಿಶಿಷ್ಠ ಸೇವಾ ಪದಕ,  ಅತಿ ವಿಶಿಷ್ಟ ಸೇವಾ ಪದಕ ಹಾಗೂ ವಿಶಿಷ್ಟ ಸೇವಾ ಪದಕಕಕ್ಕೆ ಭಾಜನರಾಗಿದ್ದಾರೆ. ಸಮಂತ ನಿಧನಕ್ಕೆ ಭಾರತೀಯ ಸೇನೆ ಹಾಗೂ ಹಲವು ನಿವೃತ್ತ ಯೋಧರು ಸಂತಾಪ ಸೂಚಿಸಿದ್ದಾರೆ. 

click me!