ಮನೆಗಾಗಿ 1942ರಿಂದ 8 ದಶಕಗಳ ಹೋರಾಟ, 93ನೇ ವಯಸ್ಸಿನಲ್ಲಿ ಕೇಸ್ ಗೆದ್ದ ಮುಂಬೈ ಅಜ್ಜಿ!

Published : May 06, 2023, 03:10 PM IST
ಮನೆಗಾಗಿ 1942ರಿಂದ 8 ದಶಕಗಳ ಹೋರಾಟ, 93ನೇ ವಯಸ್ಸಿನಲ್ಲಿ ಕೇಸ್ ಗೆದ್ದ ಮುಂಬೈ ಅಜ್ಜಿ!

ಸಾರಾಂಶ

ಮಹಿಳೆ ವಯಸ್ಸು 93, ಎದ್ದು ನಡೆದಾಡಲು ಆಗುತ್ತಿಲ್ಲ. ಆದರೆ ಕಳೆದ 8 ದಶಕಗಳಿಂದ ಕಾನೂನು ಹೋರಾಟ ನಡೆಸಿ ಕೊನೆಗೂ ಕೇಸ್ ಗೆದ್ದುಕೊಂಡಿದ್ದರೆ. ಬ್ರಿಟಿಷ್ ಆಡಳಿತದಿಂದ ಆರಂಭಗೊಂಡ ಪ್ರಕರಣಕ್ಕೆ ಹೈಕೋರ್ಟ್ ಅಂತ್ಯಹಾಡಿದೆ. ಸ್ವಂತ ಮನೆಯಿಂದ ದೂರ ಉಳಿದಿದ್ದ ಅಜ್ಜಿ ಕೊನೆಗೂ ತನ್ನ ಮನೆಗೆ ಕಾಲಿಡುವಂತಾಗಿದೆ.  

ಮುಂಬೈ(ಮೇ.6): ಭಾರತದಲ್ಲಿ ಕಾನೂನು ಹೋರಾಟ ಸುದೀರ್ಘ. ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆದು ತೀರ್ಪು ಹೊರಬೀಳಲಿದೆ. ಹೀಗಾಗಿ ಸುದೀರ್ಘ ಸಮಯ ಕಾನೂನು ಹೋರಾಟದಲ್ಲಿ ಕಳೆದುಹೋಗಲಿದೆ. ಇಲ್ಲೊಂದು ಪ್ರಕರಣ ಇತ್ಯರ್ಥಗೊಳ್ಳಲು ವರುಷಗಳಲ್ಲ, ದಶಕಗಳೇ ಹಿಡಿದೆ. ಮುಂಬೈ ಮೂಲದ ಮಹಿಳೆ ಎಲೈಸ್ ಡಿಸೋಜಾಗೆ  ಈಗ ವಯಸ್ಸು 93. ತಮ್ಮ ಸ್ವಂತ ಮನೆಗಾಗಿ 1942ರಿಂದ ನಡೆಯುತ್ತಿದ್ದ ಈ ಪ್ರಕರಣ ಇದೀಗ ಇತ್ಯರ್ಥಗೊಂಡು ತೀರ್ಪು ಹೊರಬಿದ್ದಿದೆ. ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಪ್ರಕರಣ ಇದೀಗ ಬಾಂಬೆ ಹೈಕೋರ್ಟ್ , ಎಲೈಸ್ ಡಿಸೋಜಾಗೆ ಮನೆ ಹಿಂತಿರುಗಿಸಲು ಕೋರ್ಟ್ ಸೂಚನೆ ನೀಡಿದೆ. ಸರ್ಕಾರ ಯಾವುದೇ ಸಮಸ್ಯೆಯಾಗದಂತೆ ಡಿಸೋಜಾಗೆ ಮನೆ ಹಿಂತಿರುಗಿಸಿ ಕೊಡಬೇಕು ಎಂದು ಸೂಚಿಸಿದೆ.

ಎಲೈಸ್ ಡಿಸೋಜಾಗೆ 12 ವರ್ಷವಿದ್ದಾಗ ಡಿಸೋಜಾ ಕುಟುಂಬ ತಮ್ಮ ಸ್ವಂತ ಮನೆಯಿಂದ ಹೊರಬರಬೇಕಾಯಿತು. ದಕ್ಷಿಣ ಮುಂಬೈನ ರುಬಿ ಮಾನ್ಸನ್ ಕಟ್ಟದ ಮೊದಲ ಮಹಡಿಯಲ್ಲಿದ್ದ 600 ಚದರ ಅಡಿ  ವಿಸ್ತೀರ್ಣ ಮನೆಯನ್ನು 1942ರಲ್ಲಿ ಬ್ರಿಟಿಷ್ ಸರ್ಕಾರ ವಶಕ್ಕೆ ಪಡೆದಿತ್ತು. 1942ರಲ್ಲಿ ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ನಿಯಮದಡಿ ಬ್ರಿಟಿಷರು ಹಲವು ಆಸ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಹಲವರ ಸಂಪತ್ತುಗಳು ಬ್ರಿಟೀಷರ ತಿಜೋರಿ ಸೇರಿತ್ತು. ಇದರಲ್ಲಿ ಎಲೈಸ್ ಡಿಸೋಜಾ ಪೋಷಕರ ಮನೆಯೂ ಸೇರಿತ್ತು. ಈ ವೇಳೆ ಎಲೈಸ್ ಡಿಸೋಜಾ ವಯಸ್ಸು ಕೇವಲ 12.

ವಿಧವೆ ಸೊಸೆ ಅತ್ತೆ-ಮಾವಂಗೆ ಆರ್ಥಿಕ ನೆರವು ನೀಡುವ ಅಗತ್ಯವಿಲ್ಲ: Bombay High Court

ಡಿಸೋಜಾ ಕುಟುಂಬ ಭಾತೀಯರ ರಕ್ಷಣಾ ಕಾಯಿದೆ ಅಡಿ ತಮ್ಮ ಮನೆ ಹಿಂತಿರುಗಿಸಬೇಕು ಎಂದು ಬ್ರಿಟಿಷ್ ಸರ್ಕಾರವನ್ನು ಮನವಿ ಮಾಡಿದ್ದರು. ಇದರ ಪ್ರಕಾರ ಬ್ರಿಟಿಷ್ ಸರ್ಕಾರ 1946ರಲ್ಲಿ ಡಿಸೋಜಾ ಕುಟುಂಬಕ್ಕೆ ಮನೆ ಹಿಂತಿರುಗಿಸಲು ಆದೇಶ ನೀಡಿತ್ತು. ಆದರೆ ಮನೆ ಮಾತ್ರ ವಾಪಸ್ ಸಿಗಲೇ ಇಲ್ಲ. ಹಲವು ಬಾರಿ ಮನವಿ ಮಾಡಿದರೂ ಮನೆ ಸಿಗಲಿಲ್ಲ. ಡಿಸೋಜಾ ಕುಟುಂಬ ಬೇರೆಡೆಗೆ ಸ್ಥಳಾಂತರಗೊಂಡರು, ಹೋರಾಟ ನಿಲ್ಲಿಸಲಿಲ್ಲ. ಬ್ರಿಟಿಷ್ ಸರ್ಕಾರದ ಬಳಿಕ ಸ್ವಾತಂತ್ರ್ಯಗೊಂಡ ಭಾರತ ನಿರ್ಮಾಣಗೊಂಡರು ಡಿಸೋಜಾ ಕುಟುಂಬ ಬವಣೆ ತಪ್ಪಲಿಲ್ಲ.

ಎಲೈಸ್ ಡಿಸೋಜಾ ಪೋಷಕರು ನಿಧನರಾದ ಬಳಿಕವೂ ಹೋರಾಟ ಮುಂದುವರಿಯಿತು  ಎಲೈಸ್ ಡಿಸೋಜಾ ಹಲವು ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಮನೆ ವಾಪಸ್ ಕೊಡಬೇಕು ಎಂದು ಮನವಿ ಮಾಡಿಕೊಂಡರು. ಹಲವು ಅರ್ಜಿಗಳನ್ನು ಬರೆದು ಸರ್ಕಾರಕ್ಕೂ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇತ್ತ ಸರ್ಕಾರ ಈ ಬಂಗಲೆಯಲ್ಲಿನ ಮನೆಗಳನ್ನು ನಿವೃತ್ತ ಸರ್ಕಾರಿ ನೌಕರರಿಗೆ ನೀಡಿತು.

1946ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ನೀಡಿದ ಆದೇಶದಂತೆ ತಮಗೆ ಮನೆ ವಾಪಸ್ ನೀಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಸರ್ಕಾರ ಈ ಕುರಿತು ಪರಿಶೀಲನೆ ನಡೆಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಎಲೈಸ್ ಡಿಸೋಜಾ ಕೋರ್ಟ್ ಮೊರೆ ಹೋದರು. ಈ ವೇಳೆ ಈ ನಿವಾಸದಲ್ಲಿ ವಾಸವಿದ್ದ ನಿವೃತ್ತ ಸಿವಿಲ್ ಸರ್ವೀಸ್ ಅಧಿಕಾರಿ ಡಿಎಸ್ ಲೌಡ್, ಇದಕ್ಕೆ ಪ್ರತಿಯಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಸರ್ಕಾರ ತಮಗೆ ನೀಡಿರುವ ನಿವಾಸ. ಹೀಗಾಗಿ ಇದು ತಮಗೆ ಸೇರಿದೆ ಎಂದು ವಾದ ಮಂಡಿಸಿದರು.

 

ವಿಚ್ಚೇದನದ ಮೇಲ್ಮನವಿ ಅವಧಿಗೂ ಕಾಯದೆ 2ನೇ ಮದುವೆಯಾದ ಮಹಿಳೆಗೆ ಸಂಕಷ್ಟ: ಹೈಕೋರ್ಟ್‌ ಹೇಳಿದ್ದೇನು..?

ಬಾಂಬೈ ಹೈಕೋರ್ಟ್ ಜಸ್ಟೀಸ್ ಧನುಕಾ ಹಾಗೂ ಎಂಎಂ ಸಾತೆಯಾ ನೇತೃತ್ವದ ಪೀಠ ಈ ಕುರಿತು ವಿಚಾರಣೆ ನಡೆಸಿ ಮೇ.4 ರಂದು ಮಹತ್ವದ ತೀರ್ಪು ನೀಡಿತು. 1946ರಲ್ಲಿ ಬ್ರಿಟಿಷ್ ಸರ್ಕಾರ ಮನೆ ಹಿಂತಿರುಗಿಸುವ ಆದೇಶ ನೀಡಿದರೂ ಮನೆ ವಾರಸುದಾರರ ಕೈಸೇರಿಲ್ಲ. ಈ ಮನೆ ಈಗಲೂ ಡಿಸೋಜಾ ಕುಟುಂಬಕ್ಕೆ ಸೇರಿದ್ದು ಅನ್ನೋದು ದಾಖಲೆಯಲ್ಲಿದೆ. ಇತ್ತ ಬ್ರಿಟಿಷ್ ಸರ್ಕಾರದ ಆದೇಶವೂ ಸ್ಪಷ್ಟವಾಗಿದೆ. ಇಷ್ಟಾದರೂ ಮನೆ ಯಾಕ ವಾರಸುದಾರರ ಕೈಸೇರಿಲ್ಲ. ತಕ್ಷಣವೇ ಈ ಮನೆಯಲ್ಲಿರುವರಿಗೆ ಖಾಲಿ ಮಾಡಿಸಿ ಈ ಮನೆಯನ್ನು ಎಲೈಸ್ ಡಿಸೋಜಾ ಅವರಿಗೆ ಒಪ್ಪಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ. 12ನೇ ವಯಸ್ಸಿನಿಂದ ಹೋರಾಟ ನಡೆಸುತ್ತಿರುವ ಎಲೈಸ್ ಡಿಸೋಜಾಗೆ 93ನೇ ವಯಸ್ಸಿನಲ್ಲಿ ತಮ್ಮ ಮನೆ ವಾಪಸ್ ಸಿಕ್ಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?