ಲಾಲು ಯಾದವ್‌ ಭದ್ರತೆಗೆ ನಿಯೋಜಿತ 9 ಭದ್ರತಾ ಸಿಬ್ಬಂದಿಗೆ ಕೊರೋನಾ!

Published : Aug 22, 2020, 10:41 AM ISTUpdated : Aug 22, 2020, 10:44 AM IST
ಲಾಲು ಯಾದವ್‌ ಭದ್ರತೆಗೆ ನಿಯೋಜಿತ 9 ಭದ್ರತಾ ಸಿಬ್ಬಂದಿಗೆ ಕೊರೋನಾ!

ಸಾರಾಂಶ

ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಹಾರದ ಮಾಜಿ ಸಿಎಂ| ಲಾಲು ಯಾದವ್‌ ಭದ್ರತೆಗೆ ನಿಯೋಜಿತ 9 ಭದ್ರತಾ ಸಿಬ್ಬಂದಿಗೆ ಕೊರೋನಾ!

ರಾಂಚಿ(ಆ.22): ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ಗೂ ಇದೀಗ ಕೊರೋನಾ ಭೀತಿ ಎದುರಾಗಿದೆ.

ಅನಾರೋಗ್ಯ ಹಿನ್ನೆಲೆ ಇಲ್ಲಿನ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್‌) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಭದ್ರತೆಗಾಗಿ ನಿಯೋಜನೆಗೊಂಡ 9 ಪೊಲೀಸ್‌ ಸಿಬ್ಬಂದಿ ಕೊರೋನಾಗೆ ತುತ್ತಾಗಿರುವುದು ಗುರುವಾರ ದೃಢಪಟ್ಟಿದೆ. ಆದರೆ, ಸೋಂಕು ದೃಢಪಟ್ಟಿರುವ ಪೊಲೀಸ್‌ ಸಿಬ್ಬಂದಿ ಲಾಲು ಇರುವ ಕೊಠಡಿಯಿಂದ ಹೊರಗಿರುತ್ತಾರೆ.

ಹೀಗಾಗಿ, ಲಾಲುಗೆ ಪೊಲೀಸ್‌ ಸಿಬ್ಬಂದಿಯಿಂದ ಸೋಂಕು ಹಬ್ಬಿದ ಸಾಧ್ಯತೆ ಕ್ಷೀಣ. ಅಲ್ಲದೆ, ಲಾಲುರಲ್ಲಿ ಕೊರೋನಾ ಲಕ್ಷಣ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಲಿಸುತ್ತಿದ್ದ ವಿಮಾನದಿಂದ ಜಿಗಿದ ಪ್ರಯಾಣಿಕ; ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ
'ಯಾ ಅಲ್ಲಾ, ರಸಗುಲ್ಲಾ' ಎಂದ ಹಾಸ್ಯ ನಟರ​ ವಿರುದ್ಧ ಎಫ್​ಐಆರ್​: ಹೈಕೋರ್ಟ್​ ಹೇಳಿದ್ದೇನು?