Covid Vaccine: 11 ಬಾರಿ ಕೊರೋನಾ ಲಸಿಕೆ ಪಡೆದ 84ರ ಅಜ್ಜ..!

By Kannadaprabha News  |  First Published Jan 6, 2022, 4:34 AM IST

*   12ನೇ ಬಾರಿ ಲಸಿಕೆ ಪಡೆಯುವಾಗ ಬಲೆಗೆ
*   ಬಿಹಾರ ಲಸಿಕೆ ಅಭಿಯಾನದ ಭಾರಿ ಲೋಪ
*   ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ ಜಿಲ್ಲಾ ಸಿವಿಲ್‌ ಸರ್ಜನ್‌
 


ಮಧೇಪುರ (ಬಿಹಾರ)(ಜ.06):  ದೇಶದ ಬಹುಸಂಖ್ಯಾತ ವಯಸ್ಕರು ಇನ್ನೂ ಎರಡನೇ ಡೋಸ್‌ ಲಸಿಕೆಯನ್ನೇ(Vaccine) ಪಡೆದಿಲ್ಲ. ಆದರೆ ಬಿಹಾರದ(Bihar) 84 ವರ್ಷದ ವೃದ್ಧ ಬ್ರಹ್ಮದೇವ್‌ ಮಂಡಲ್‌, ತಾವು 11 ಡೋಸ್‌ ಕೋವಿಡ್‌ ಲಸಿಕೆ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, 12ನೇ ಡೋಸ್‌ ಲಸಿಕೆ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ತನಿಖೆಗೆ ಸರ್ಕಾರ(Government of Bihar) ಆದೇಶಿಸಿದೆ.

ಮಧೇಪುರ ಜಿಲ್ಲೆಯ ಓರಾಯ್‌ ಗ್ರಾಮದ ನಿವಾಸಿಯಾದ ಇವರು ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿಯೂ ಹೌದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಡಲ್‌, ‘ಲಸಿಕೆಯಿಂದ ಬಹಳಷ್ಟು ಉಪಯೋಗವಾಗಿದೆ. ಹಾಗಾಗಿ ಪದೇ ಪದೇ ಲಸಿಕೆ ಪಡೆದೆ. ಕಳೆದ ವರ್ಷ ಫೆ.13ರಂದು ಮೊದಲ ಡೋಸ್‌ ಸ್ವೀಕರಿಸಿದ್ದೆ. ಅನಂತರ ಡಿ.30ರ ಒಳಗೆ 11 ಡೋಸ್‌ ಲಸಿಕೆ ಪಡೆದೆ. ಲಸಿಕೆ ಪಡೆದ ದಿನಾಂಕ, ಸ್ಥಳವನ್ನೂ ಬರೆದಿಟ್ಟಿದ್ದೇನೆ. 8 ಬಾರಿ ಲಸಿಕೆ ಪಡೆಯಲು ನನ್ನ ಆಧಾರ್‌ ಮತ್ತು ಫೋನ್‌ ನಂಬರ್‌ ನೀಡಿದ್ದೆ. ನಂತರ ಮೂರು ಬಾರಿ ವೋಟರ್‌ ಐಡಿ ಮತ್ತು ಪತ್ನಿಯ ಮೊಬೈಲ್‌ ನಂಬರ್‌ ನೀಡಿದ್ದೆ’ ಎಂದು ತಿಳಿಸಿದ್ದಾರೆ.

Latest Videos

undefined

5 States Election: ಚುನಾವಣಾ ರಾಜ್ಯಗಳಲ್ಲಿ ಲಸಿಕಾಕರಣ ತೀವ್ರಗೊಳಿಸಲು ಆಯೋಗದ ಆದೇಶ

ಈ ರೀತಿ ಆಗಿದ್ದು ಯಾಗೆ?:

ಲಸಿಕಾ ಕ್ಯಾಂಪ್‌ ವೇಳೆ, ಸಿಬ್ಬಂದಿಯು ಆಧಾರ್‌ ಮತ್ತು ಫೋನ್‌ ನಂಬರ್‌ ಪಡೆದು ತಮ್ಮ ಪುಸ್ತಕದಲ್ಲಿ ನಮೂದಿಸಿ ಲಸಿಕೆ ಹಾಕುತ್ತಾರೆ. ಅನಂತರ ಸಂಜೆ ವೇಳೆಗೆ ಡೇಟಾಬೇಸ್‌ನಲ್ಲಿ ಅಪ್ಲೋಡ್‌ ಮಾಡುತ್ತಾರೆ. ಅಪ್ಲೋಡ್‌ ಮಾಡುವಾಗ ಇವರು 2 ಡೋಸ್‌ ಲಸಿಕೆ ಪಡೆದಾಗಿದೆ ಎಂದು ಗೊತ್ತಾದರೂ, ಅಷ್ಟೊತ್ತಿಗಾಗಲೇ ಲಸಿಕೆ ಪಡೆದು, ನಿರ್ಗಮಿಸಿರುತ್ತಾರೆ. ಈ ಲೋಪದಿಂದಾಗಿ ಇವರು ಇಷ್ಟೊಂದು ಬಾರಿ ಲಸಿಕೆ ಸ್ವೀಕರಿಸಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾ ಸಿವಿಲ್‌ ಸರ್ಜನ್‌ ತಿಳಿಸಿದ್ದಾರೆ.

ಲಸಿಕೆ ಸ್ವೀಕರಿಸಿದ್ದು ಯಾವ್ಯಾವಾಗ?

ಮೊದಲ ಡೋಸ್‌: ಫೆ.13, ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರ
2ನೇ ಡೋಸ್‌: ಮಾ.13, ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರ
3ನೇ ಡೋಸ್‌: ಮೇ.19, ಔರೈ ಉಪ-ಆರೋಗ್ಯ ಕೇಂದ್ರ
4ನೇ ಡೋಸ್‌: ಜೂ.16, ಕ್ಯಾಂಪ್‌
5ನೇ ಡೋಸ್‌: ಜು.24, ಬಡೀ ಹಾತ್‌ ಶಾಲಾ ಕ್ಯಾಂಪ್‌
6ನೇ ಡೋಸ್‌: ಆ.31, ನಾಥ್‌ಬಾಬಾ ಕ್ಯಾಂಪ್‌
7ನೇ ಡೋಸ್‌: ಸೆ.11, ಬಡೀ ಹಾತ್‌ ಶಾಲಾ ಕ್ಯಾಂಪ್‌
8ನೇ ಡೋಸ್‌: ಸೆ.22, ಬಡೀ ಹಾತ್‌ ಶಾಲೆ
9ನೇ ಡೋಸ್‌: ಸೆ.24, ಕಲಾಸನ್‌ ಉಪ-ಆರೋಗ್ಯ ಕೇಂದ್ರ
10ನೇ ಡೋಸ್‌: ಪರ್ವತಾ, ಖಾಗಾರಿಯಾ ಜಿಲ್ಲೆ
11ನೇ ಡೋಸ್‌: ಕಹಾಗಾಂವ್‌, ಭಾಗಲ್ಪುರ

Children's Vaccine: ಬೆಂಗಳೂರಿನಲ್ಲಿ ಮೊದಲ ದಿನ 29000+ ಮಕ್ಕಳಿಗೆ ಲಸಿಕೆ: ಶೇ.47ರಷ್ಟುಗುರಿ ಸಾಧನೆ!

ಹೇಗೆ ಸಾಧ್ಯ?

- ಲಸಿಕೆಯ ಶಿಬಿರಗಳಲ್ಲಿ ಆಧಾರ್‌, ಫೋನ್‌ ಸಂಖ್ಯೆ ಪಡೆದು ಲಸಿಕೆ ಹಾಕಲಾಗುತ್ತದೆ
- ಅಭಿಯಾನ ಮುಗಿದ ಬಳಿಕ ಡೇಟಾಬೇಸ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ
- ಅಷ್ಟೊತ್ತಿಗಾಗಲೇ ಹೆಚ್ಚುವರಿ ಲಸಿಕೆ ಪಡೆದ ವ್ಯಕ್ತಿ ಸ್ಥಳದಿಂದ ನಿರ್ಗಮಿಸಿರುತ್ತಾನೆ
- ಈ ಲೋಪದಡಿ ಮಂಡಲ್‌ 11 ಬಾರಿ ಲಸಿಕೆ ಪಡೆದಿರಬಹುದು: ಅಧಿಕಾರಿಗಳು

5 ಲಕ್ಷ ಡೋಸ್‌ ಕೋವ್ಯಾಕ್ಸಿನ್‌ ಚೆಲ್ಲಬೇಕಾದ ದುಸ್ಥಿತಿ!

ಬೆಂಗಳೂರು: ಕೋವಿಡ್‌ ಸೋಂಕಿನ ವಿರುದ್ಧ ನೀಡುವ ಕೋವ್ಯಾಕ್ಸಿನ್‌ (Covaxin)  ಲಸಿಕೆಯನ್ನು ಅದರ ವಯಲ್‌ ಮೇಲೆ ಸೂಚಿಸಿರುವ ದಿನಾಂಕದೊಳಗೆ ಬಳಸಬೇಕು ಎಂದು ರಾಜ್ಯ ಸರ್ಕಾರ (Govt Of Karnataka) ಹೊರಡಿಸಿರುವ ಸುತ್ತೋಲೆಯ ಪರಿಣಾಮ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿರುವ ಸುಮಾರು 5 ಲಕ್ಷ ಲಸಿಕೆ ಚೆಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ.  

ಕೇಂದ್ರ ಸರ್ಕಾರ ಕೋವ್ಯಾಕ್ಸಿನ್‌ ಲಸಿಕೆಯನ್ನು ಉತ್ಪಾದನೆಯ ದಿನಾಂಕದಿಂದ ಒಂದು ವರ್ಷದ ತನಕ ಬಳಸಬಹುದು ಎಂದು ಹೇಳಿದ್ದರೆ, ರಾಜ್ಯ ಸರ್ಕಾರ ಮಂಗಳವಾರ ವಯಲ್‌ನಲ್ಲಿ ಸೂಚಿಸಿದ ಅಂತಿಮ ದಿನದವರೆಗೆ ಮಾತ್ರ ಬಳಸಬಹುದು ಎಂದು ಹೇಳಿರುವುದು ಖಾಸಗಿ ಆಸ್ಪತ್ರೆಗಳ (Hospital)  ಆಡಳಿತ ಮಂಡಳಿಯ ಚಿಂತೆಗೆ ಕಾರಣವಾಗಿದೆ.

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನಿರುವ ಬಹುಪಾಲು ಕೋವ್ಯಾಕ್ಸಿನ್‌ ವಯಲ್‌ಗಳ ಬಳಕೆ ದಿನಾಂಕ ನವೆಂಬರ್‌, ಡಿಸೆಂಬರ್‌ ತಿಂಗಳಿಗೆ ಕೊನೆಗೊಂಡಿತ್ತು. ಈ ಮಧ್ಯೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಕೋವ್ಯಾಕ್ಸಿನ್‌ ಬಳಕೆಯ ಅಂತಿಮ ದಿನಾಂಕವನ್ನು ಉತ್ಪಾದನೆಯಾದ ದಿನಾಂಕದಿಂದ ಒಂದು ವರ್ಷಕ್ಕೆ ಏರಿಸಿತ್ತು. ಹೀಗಾಗಿ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಕೋವ್ಯಾಕ್ಸಿನ್‌ ಲಸಿಕೆಯ ಡೋಸ್‌ ದಾಸ್ತಾನು ಹೊಂದಿದ್ದ ರಾಜ್ಯದ ಖಾಸಗಿ ಆಸ್ಪತ್ರೆಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದವು. ಆದರೆ ರಾಜ್ಯ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿ ಕೋವ್ಯಾಕ್ಸಿನ್‌ ಲಸಿಕೆಯನ್ನು ಅದರ ವಯಲ್‌ನ ಮೇಲೆ ಸೂಚಿಸಿರುವ ಬಳಕೆಯ ಅಂತಿಮ ದಿನದೊಳಗೆ ಮಾತ್ರ ಬಳಸಬೇಕು ಎಂದು ನಿರ್ದೇಶಿಸಿದೆ.
 

click me!