
ಮುಂಬೈ(ಮೇ.14): ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸೋಮವಾರ ಸಂಜೆ ದಿಢೀರನೆ ಬೀಸಿದ ಧೂಳಿನ ಬಿರುಗಾಳಿ ಭಾರೀ ಅನಾಹುತ ಸೃಷ್ಟಿಸಿದೆ. ಭಾರಿ ಬಲವಾದ ಗಾಳಿ ಬೀಸಿದ ಪರಿಣಾಮ ದೊಡ್ಡ ದೊಡ್ಡ ಬಿಲ್‌ಬೋರ್ಡ್ ಉರುಳಿ ಬಿದ್ದು 8 ಜನರು ಸಾವನ್ನಪ್ಪಿದ್ದು, 65 ಜನರು ಗಾಯಗೊಂಡಿದ್ದಾರೆ. ಗಾಳಿಯ ಬೆನ್ನಲ್ಲೇ ಮಳೆ ಕೂಡಾ ಸುರಿದಿದೆ.
ಇದರಿಂದ ಕೆಲ ಗಂಟೆಗಳ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಮುಂಬೈನ ಕೆಲವೆಡೆ ಮೆಟ್ರೋ, ಸ್ಥಳೀಯ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಿಮಾನ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿತ್ತು. ಧೂಳು ಮಿಶ್ರಿತ ಬಿರುಗಾಳಿ ಬೀಸುತ್ತಿದ್ದಂತೆ ಸುತ್ತಲು ಕತ್ತಲೂ ಕವಿದ ವಾತವಾರಣ ಸೃಷ್ಟಿಯಾಗಿತ್ತು. ಹೀಗಾಗಿ ತಾತ್ಕಾಲಿಕವಾಗಿ ಕೆಲ ಹೊತ್ತು ವಿಮಾನಗಳ ಹಾರಾಟ ನಿಲ್ಲಿಸಲಾಗಿತ್ತು. ಮೆಟ್ರೋ ಹಳಿಯ ಮೇಲೆ ಜಾಹೀರಾತು ಫಲಕ ಬಿದ್ದು, ಅರೇಯಾ ಮತ್ತು ಅಂಧೇರಿ ಪೂರ್ವದ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಬಲವಾದ ಗಾಳಿಯಿಂದ ಥಾಣೆ ಮತ್ತು ಮುಲ್ನೆಡ್ ಮಾರ್ಗದ ರೈಲ್ವೆ ಹಳಿಗಳು ಬಾಗಿದ ಘಟನೆಯೂ ನಡೆದಿದೆ.
ಮೋದಿ 3.0 ಮೊದಲ ಸಭೆಗೆ ಅಜೆಂಡಾ ತಯಾರಿ: ಕಾರ್ಯಸೂಚಿ ರಚನೆ
ಇನ್ನು ಬಿರುಗಾಳಿಯಿಂದ ಮುಂಬೈನ ಹಲೆವೆಡೆ ಫ್ಲೆಕ್ಸ್‌ಗಳು ನೆಲಕ್ಕುರುಳಿವೆ. ಇಲ್ಲಿನ ಘೋಟ್ಕಪುರದಲ್ಲಿ ಫ್ಲೆಕ್ಸ್ ಬಿದ್ದು 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಹಲೆವೆಡೆ ಮರಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ