ಲೋಕಸಭಾ ಚುನಾವಣೆ 2024: 7200 ಅಭ್ಯರ್ಥಿಗಳಿಗೆ ಠೇವಣಿಯೇ ನಷ್ಟ

By Kannadaprabha NewsFirst Published Jun 14, 2024, 7:08 AM IST
Highlights

543 ಸ್ಥಾನಗಳಿಗೆ ಸ್ಪರ್ಧಿಸಿದ್ದವರ ಪೈಕಿ ಶೇ.86.1ರಷ್ಟು ಅಂದರೆ 8,360 ಅಭ್ಯರ್ಥಿಗಳು ನಿಗದಿತ ಪ್ರಮಾಣದ ಮತ ಪಡೆಯದ ಹಿನ್ನೆಲೆಯಲ್ಲಿ ಭದ್ರತಾ ಠೇವಣಿ ಕಳೆದುಕೊಂಡಿದ್ದಾರೆ. ಅಂದರೆ ತಮ್ಮ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಆರನೇ ಒಂದು ಭಾಗವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.
 

ನವದೆಹಲಿ(ಜೂ.14):  ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 8360 ಅಭ್ಯರ್ಥಿಗಳ ಪೈಕಿ 7,194 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅವರು ಕಳೆದುಕೊಂಡ ಠೇವಣಿಯ ಒಟ್ಟು ಮೊತ್ತ 16.36 ಕೋಟಿ ರು.
ಚುನಾವಣಾ ಆಯೋಗದ ದತ್ತಾಂಶದ ಪ್ರಕಾರ, 543 ಸ್ಥಾನಗಳಿಗೆ ಸ್ಪರ್ಧಿಸಿದ್ದವರ ಪೈಕಿ ಶೇ.86.1ರಷ್ಟು ಅಂದರೆ 8,360 ಅಭ್ಯರ್ಥಿಗಳು ನಿಗದಿತ ಪ್ರಮಾಣದ ಮತ ಪಡೆಯದ ಹಿನ್ನೆಲೆಯಲ್ಲಿ ಭದ್ರತಾ ಠೇವಣಿ ಕಳೆದುಕೊಂಡಿದ್ದಾರೆ. ಅಂದರೆ ತಮ್ಮ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಆರನೇ ಒಂದು ಭಾಗವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.

ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿ ಈ ಬಾರಿಯ ಚುನಾವಣೆಯಲ್ಲಿ 488 ಅಭ್ಯರ್ಥಿಗಳಲ್ಲಿ 476, ಕಾಂಗ್ರೆಸ್‌ 51, ವಂಚಿತ್ ಬಹುಜನ ಆಘಾಡಿ ಪಕ್ಷ (ವಿಬಿಎ) 33, ಸಿಪಿಎಂ 20, ಬಿಜೆಪಿ 28 ಮತ್ತು 3,904 ಪಕ್ಷೇತರ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

Latest Videos

ಈಶ್ವರಪ್ಪಗೆ ಬರೀ 30 ಸಾವಿರ ಮತ; ಭಾರೀ ಸೋಲು, ಠೇವಣಿ ನಷ್ಟ!

2019ರ ಚುನಾವಣೆಯಲ್ಲಿ 6,923 ಅಭ್ಯರ್ಥಿಗಳು ಅಂದರೆ ಶೇ. 86 ರಷ್ಟು ಅಭ್ಯರ್ಥಿಗಳು ಒಟ್ಟು 15.87 ಕೋಟಿ ರು. ಠೇವಣಿಯನ್ನು ಕಳೆದುಕೊಂಡಿದ್ದರು.

click me!