ಮೋದಿ ಮೇಲೆ ಶೇ.69 ಜನರಿಗೆ ವಿಶ್ವಾಸ| ಐಎಎನ್‌ಎಸ್, ಸಿವೋಟರ್ ಸಮೀಕ್ಷೆ| ದೇಶದ 3ನೇ 2ರಷ್ಟುಜನಕ್ಕೆ ಕೇಂದ್ರ ಸರ್ಕಾರ ಮೇಲೆ ನಂಬಿಕೆ
ನವದೆಹಲಿ(ಅ.11): ಕೊರೋನಾ ವೈರಸ್ ತಾಂಡವ, ಅದರ ಪರಿಣಾಮವಾಗಿ ದೇಶದ ಆರ್ಥಿಕತೆ ಕುಸಿತ, ಮತ್ತೊಂದೆಡೆ ಚೀನಾದ ತಗಾದೆ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಮೇಲಿನ ದೇಶವಾಸಿಗಳ ವಿಶ್ವಾಸ ಮಾತ್ರ ಕಡಿಮೆಯಾಗಿಲ್ಲ ಎಂಬುದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ದೇಶದ ಮೂರನೇ ಎರಡರಷ್ಟುಮಂದಿ ಇವತ್ತಿಗೂ ಮೋದಿ ಅವರ ಮೇಲೆ ತಮಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತಮಗೆ ವಿಶ್ವಾಸವಿದೆ ಎಂದು ಶೇ.69.3ರಷ್ಟುಮಂದಿ ತಿಳಿಸಿದ್ದಾರೆ ಎಂದು ಐಎಎನ್‌ಎಸ್- ಸಿವೋಟರ್ ಸಂಸ್ಥೆಗಳ ಸಮೀಕ್ಷೆ ತಿಳಿಸಿವೆ. ಆದರೆ ಶೇ.16.2ರಷ್ಟುಮಂದಿ ಮಾತ್ರ ತಮಗೆ ವಿಶ್ವಾಸವಿಲ್ಲ ಎಂದಿದ್ದರೆ, ಶೇ.14.1ರಷ್ಟುಮಂದಿ ತಮಗೆ ಆ ಬಗ್ಗೆ ಗೊತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
undefined
ಇನ್ನುಳಿದಂತೆ ರಾಜ್ಯ ಸರ್ಕಾರಗಳ ಮೇಲೆ ಶೇ.67.7ರಷ್ಟುಮಂದಿ ವಿಶ್ವಾಸವಿರಿಸಿಕೊಂಡಿದ್ದಾರೆ. ಆದರೆ ನಗರಪಾಲಿಕೆಗಳ ವಿಷಯಕ್ಕೆ ಬಂದರೆ ವಿಶ್ವಾಸದ ಪ್ರಮಾಣ ಶೇ.54ರಷ್ಟಿದೆ. ಪಂಚಾಯತ್ ಮಟ್ಟದಲ್ಲಿ ಇದೂ ಇನ್ನು ಕಡಿಮೆ ಇದ್ದು, ಶೇ.50.4ರಷ್ಟಿದೆ. ಪೊಲೀಸರ ಮೇಲೆ ತಮಗೆ ವಿಶ್ವಾಸವಿದೆ ಎಂದು ಶೇ.62.4ರಷ್ಟುಮಂದಿ ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಎಲ್ಲ ರಾಜ್ಯಗಳ ಎಲ್ಲ ಜಿಲ್ಲೆಗಳ 5 ಸಾವಿರಕ್ಕೂ ಅಧಿಕ ಜನರನ್ನು ಸಂದರ್ಶಿಸಿ ಸೆಪ್ಟೆಂಬರ್ ಕೊನೆಯ ವಾರ ಹಾಗೂ ಅಕ್ಟೋಬರ್ ಮೊದಲ ವಾರ ಈ ಸಮೀಕ್ಷೆಯನ್ನು ನಡೆಸಲಾಗಿದೆ.
ಸಮೀಕ್ಷೆ ಫಲಿತಾಂಶ
ಮೋದಿ ಮೇಲೆ ವಿಶ್ವಾಸ ಶೇ.69.3
ಮೋದಿ ಮೇಲೆ ಅವಿಶ್ವಾಸ ಶೇ.16.2
ಯಾವ ಅಭಿಪ್ರಾಯ ಇಲ್ಲ ಶೇ.14.1
ರಾಜ್ಯ ಸರ್ಕಾರಗಳ ಮೇಲೆ ವಿಶ್ವಾಸ ಶೇ.67.7
ಪೊಲೀಸರ ಮೇಲೆ ವಿಶ್ವಾಸ ಶೇ.62.4
ನಗರಪಾಲಿಕೆಗಳ ಮೇಲೆ ವಿಶ್ವಾಸ ಶೇ.54
ಪಂಚಾಯ್ತಿಗಳ ಮೇಲೆ ವಿಶ್ವಾಸ ಶೇ.50.4