
ಪಾಟ್ನಾ(ಅ.24): ಬಿಹಾರ ವಿಧಾನಸಭಾ ಚುನಾವಣೆಗೆ ನವೆಂಬರ್ 28ರಿಂದ ಮೂರು ಹಂತದಲ್ಲಿ ಮತದಾನ ನಡೆಯಲಿದೆ. ಇದಕ್ಕೂ ಮುನ್ನ ಬಿಜೆಪಿ, ಜೆಡಿಯು, ಆರ್‌ಜೆಡಿ ಹಾಗೂ ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ತಮ್ಮ ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಚಿತ ಕೊರೋನಾ ಲಸಿಕೆಯ ಭರವಸೆ ಮಾಡಿದೆ. ಸದ್ಯ ಶೇ. 66 ರಷ್ಟು ಮಂದಿಗೆ ಈ ವಿಚಾರ ಹಿಡಿಸಿದೆ ಎಂಬುವುದು ಸಮೀಕ್ಷೆಯೊಂದರಲ್ಲಿ ಬಯಲಾಗಿದೆ.
"
ಭಾರತದ ನೂತನ ಒಪೀನಿಯನ್ ಗ್ಯಾದರಿಂಗ್ ಟೆಕ್ನಾಲಜಿ ಸ್ಟಾರ್ಟಪ್ 'ಪ್ರಶ್ನಂ' ಬಿಹಾರದ 2000 ಮಂದಿ ಬಳಿ ಈ ಪ್ರಶ್ನೆಯನ್ನು ಕೇಳಿದೆ. ಇವುಗಳಲ್ಲಿ ಪ್ರಮುಖ ಪ್ರಶ್ನೆಗಳು ಹೀಗಿದ್ದವು.
* ಬಿಜೆಪಿ ಪ್ರಣಾಳಿಕೆಯಲ್ಲಿ ಉಚಿತ ಕೊರೋನಾ ಲಸಿಕೆ ನೀಡುವ ಬಗ್ಗೆ ಘೋಷಿಸಿರುವ ವಿಚಾರ ನಿಮಗೆ ತಿಳಿದಿದೆಯೇ?
*ಚುನಾವಣೆ ವೇಳೆ ಕೊರೋನಾ ನಿಗ್ರಹಿಸುವ ಲಸಿಕೆ ಉಚಿತವಾಗಿ ನೀಡುತ್ತೇವೆಂದು ಕೊಟ್ಟ ಭರವಸೆ ಸರಿಯೇ?
ಮೊದಲ ಪ್ರಶ್ನೆ ಶೇ. 53ರಷ್ಟು ಮಂದಿ ಬಿಜೆಪಿ ನೀಡಿರುವ ಈ ಭರವಸೆ ಬಗ್ಗೆ ತಮಗೆ ಮಾಹಿತಿ ಇದೆ ಎಂದು ಉತ್ತರಿಸಿದ್ದಾರೆ.
ಸುಮಾರು ಶೇ. 66ರಷ್ಟು ಮಂದಿ ಚುನಾವಣೆ ವೇಳೆ ಇಂತಹ ಭರವಸೆ ನೀಡಿದ್ದು ಸರಿ ಎಂದಿದ್ದಾರೆ.
ಸರ್ವೆ ನಡೆದಿದ್ದು ಹೇಗೆ?
2020ರ ಅಕ್ಟೋಬರ್ 23ರಂದು ಈ ಸಮೀಕ್ಷೆ ನಡೆದಿತ್ತು. ಇದನ್ನು ಪೂರ್ಣಗೊಳಿಸಲು ಕೇವಲ ಒಂದು ತಾಸು ತಗುಲಿತ್ತು. ಇದರಲ್ಲಿ ಶೇ. 45 ಮಹಿಳೆಯರು ಹಾಗೂ ಶೇ. 55ರಷ್ಟು ಪುರುಷರು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ