6 ಸುಪ್ರೀಂ ಜಡ್ಜ್‌ಗಳಿಗೆ ಎಚ್‌1ಎನ್‌1: ಕಲಾಪ ವ್ಯತ್ಯಯ ಸಾಧ್ಯತೆ

Published : Feb 26, 2020, 10:59 AM IST
6 ಸುಪ್ರೀಂ ಜಡ್ಜ್‌ಗಳಿಗೆ ಎಚ್‌1ಎನ್‌1: ಕಲಾಪ ವ್ಯತ್ಯಯ ಸಾಧ್ಯತೆ

ಸಾರಾಂಶ

6 ಸುಪ್ರೀಂ ಜಡ್ಜ್‌ಗಳಿಗೆ ಎಚ್‌1ಎನ್‌1|  ಸುಪ್ರೀಂ ಕೋರ್ಟ್‌ ಕಲಾಪಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ 

ನವದೆಹಲಿ[ಫೆ.26]: ಸುಪ್ರೀಂ ಕೋರ್ಟ್‌ನ 6 ನ್ಯಾಯಾಧೀಶರಿಗೆ ಎಚ್‌1ಎನ್‌1 ಜ್ವರ ತಗುಲಿದೆ. ಇದರಿಂದ ಸುಪ್ರೀಂ ಕೋರ್ಟ್‌ ಕಲಾಪಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಮಂಗಳವಾರ ಈ ಕುರಿತು ನ್ಯಾಯಾಧೀಶರು ಹಾಗೂ ವಕೀಲರ ಜತೆ ಚರ್ಚೆ ನಡೆಸಿದ ಮುಖ್ಯ ನ್ಯಾಯಾಧೀಶ ಎಸ್‌.ಎ. ಬೋಬ್ಡೆ ಅವರು, ಜ್ವರ ಹರಡುವಿಕೆ ತಡೆಗಟ್ಟಲು ವಕೀಲರು ಹಾಗೂ ಕೋರ್ಟ್‌ ಸಿಬ್ಬಂದಿಗೆ ಲಸಿಕೆ ಹಾಕಿಸಬೇಕು ಎಂದು ಸೂಚಿಸಿದರು.

ಈ ಬಗ್ಗೆ ತಮ್ಮ ಕಲಾಪದಲ್ಲಿ ವಿವರ ನೀಡಿದ ನ್ಯಾ| ಡಿ.ವೈ. ಚಂದ್ರಚೂಡ, ‘ನ್ಯಾ| ಬೋಬ್ಡೆ ನೇತೃತ್ವದಲ್ಲಿ ಸಭೆ ನಡೆಯಿತು. ಜ್ವರ ತಡೆಗೆ ಲಸಿಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ’ ಎಂದರು. ಬೋಬ್ಡೆ ಸಭೆ ನಡೆಸುತ್ತಿದ್ದ ಕಾರಣ 10.30ಕ್ಕೆ ಆರಂಭವಾಗಬೇಕಿದ್ದು ಕೋರ್ಟ್‌ ಕಲಾಪಗಳು 11.08ಕ್ಕೆ ಆರಂಭವಾದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಮಶಾನದಲ್ಲಿ ನಿಗೂಢ ಕೃತ್ಯ : ಚಿತೆಯ ಮೇಲೆ ಕುರಿ ತಲೆಬುರುಡೆ; ಮದ್ಯದ ಬಾಟಲಿಗಳು, ಬೆಚ್ಚಿಬಿದ್ದ ಗ್ರಾಮಸ್ಥರು
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?