
ಅಮರಾವತಿ: ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳ ಪೈಕಿ ಒಂದಾದ ಅಮರಾವತಿ ಪ್ರಾಂತ್ಯದ ಐದು ಜಿಲ್ಲೆಗಳಲ್ಲಿ ಆರು ತಿಂಗಳಲ್ಲಿ 557 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಅಮರಾವತಿಯಲ್ಲಿ 170, ಯವತ್ಮಾಲ್‌ನಲ್ಲಿ 150, ಬುಲ್ಡಾನಾದಲ್ಲಿ 111, ಅಕೋಲಾದಲ್ಲಿ 92, ವಾಶಿಮ್‌ನಲ್ಲಿ 34 ಆತ್ಮಹತ್ಯೆ ದಾಖಲಾಗಿವೆ. ಇದರಲ್ಲಿ 53 ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರ ನೆರವು ನೀಡಿದ್ದು, 284 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಬೆಳೆ ನಷ್ಟ, ಮಳೆ ಕೊರತೆ, ಸಾಲದ ಹೊರೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಒಟ್ಟಾರೆ 2851 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
7 ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ
ನವದೆಹಲಿ: ಶಾಸಕರ ನಿಧನ, ರಾಜೀನಾಮೆಯಿಂದಾಗಿ ತೆರವಾಗಿದ್ದ ಏಳು ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ಬುಧವಾರ ಚುನಾವಣೆ ನಡೆಯಿತು. ಚುನಾವಣೆ ನಡೆದ ಉತ್ತರಾಖಂಡ, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೆಲವೆಡೆ ಘರ್ಷಣೆಗಳು ದಾಖಲಾದವು. ಇದರಿಂದಾಗಿ ಕೆಲ ಅಧಿಕಾರಿಗಳು ಗಾಯಗೊಂಡರು. ಮಿಕ್ಕಂತೆ, ಮಧ್ಯಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಯಾವುದೇ ಘರ್ಷಣೆ ನಡೆಯದೆ ಶಾಂತಿಯುತ ಮತದಾನ ನಡೆಯಿತು. ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಸುಬ್ಬಿಂದರ್ ಸಿಂಗ್ ಸುಕ್ಕು ಅವರ ಪತ್ನಿ ಕಮಲೇಶ್ ಠಾಕೂರ್ ಸಹ ಸ್ಪರ್ಧಿಸಿದ್ದರು. ಇದು 2024ರ ಲೋಕಸಭಾ ಚುನಾವಣೆ ಬಳಿಕ ನಡೆದ ಮೊದಲ ಚುನಾವಣೆಯಾಗಿದೆ. ಇನ್ನೂ ಹಲವು ಉಪಚುನಾವಣೆ ನಡೆಯಬೇಕಿದೆ.
ಪಾಳು ಭೂಮಿಗೂ ಬರ ಪರಿಹಾರ: ಯಾದಗಿರಿಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ
ನೀಟಲ್ಲಿ ಸಾಮೂಹಿಕ ಅಕ್ರಮ ನಡೆದಿಲ್ಲ, ಮರು ಪರೀಕ್ಷೆ ಬೇಡ: ಕೇಂದ್ರ
ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ನಿಜ. ಆದರೆ ಸಾಮೂಹಿಕವಾಗಿ ಅಕ್ರಮ ನಡೆದಿಲ್ಲ. ಹೀಗಾಗಿ ನೀಟ್‌ಗೆ ಮರುಪರೀಕ್ಷೆ ನಡೆಸುವುದು ಬೇಡ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಬುಧವಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೋರಿಕೆ ಸಲ್ಲಿಸಿದೆ. ಪರೀಕ್ಷಾ ಅಕ್ರಮಗಳ ಕುರಿತು ಮದ್ರಾಸ್ ಐಐಟಿ ನಡೆಸಿದ ಅಧ್ಯಯನ ವರದಿ ಆಧರಿಸಿ ಕೇಂದ್ರ ಸರ್ಕಾರ ಈ ಕೋರಿಕೆ ಸಲ್ಲಿಸಿದೆ. ಒಂದು ವೇಳೆನೀಟ್ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಬಂದಿದ್ದರೆ ಮರುಪರೀಕ್ಷೆ ಅನಿವಾರ್ಯ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಹೇಳಿತ್ತು.
ರಾಜ್ಯದಲ್ಲಿ ಅಧಿಕ ಮಳೆ, ಬತ್ತಿ ಬರಡಾಗಿದ್ದ ತುಂಗಭದ್ರಾ ಸೇರಿ ಎಲ್ಲಾ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ