Vande Bharat Express ಬಡಿದು 54 ವರ್ಷದ ಮಹಿಳೆ ಸಾವು!

By Santosh Naik  |  First Published Nov 8, 2022, 6:45 PM IST

ದೇಶದ ಐದನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅನಾವರಣಗೊಳ್ಳಲು ಕೆಲವೇ ದಿನಗಳು ಬಾಕಿ ಇರುವಾಗಲೇ ಮುಂಬೈ ಸೆಂಟ್ರಲ್‌ ಹಾಗೂ ಗಾಂಧಿನಗರ ನಡುವಿನ ರೈಲಿನ ಪ್ರಕರಣಗಳು ಮುಂದುವರಿದಿದೆ. ಜಾನುವಾರಿಗೆ ಡಿಕ್ಕಿ ಹೊಡೆದಿದ್ದ ಪ್ರಕರಣಗಳ ಬೆನ್ನಲ್ಲಿಯೇ ಮಂಗಳವಾರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮೊದಲ ಬಲಿಯಾಗಿದೆ.
 


ಅಹಮದಾಬಾದ್‌ (ನ.8): ಪ್ರತಿ ಬಾರಿಯೂ ಒಂದಿಲ್ಲೊಂದು ಕಾರಣಗಳಿಂದಾಗಿ ಸುದ್ದಿಯಲ್ಲಿರುವ ದೇಶದ ಹೆಮ್ಮೆಯ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮೊದಲ ಬಲಿಯಾಗಿದೆ. ಮುಂಬೈ ಹಾಗೂ ಗಾಂಧಿನಗರ ಕ್ಯಾಪಿಟಲ್‌ ನಡುವಿನ ಮಾರ್ಗದಲ್ಲಿ ಸಂಚರಿಸುವ ದೇಶದ ಮೂರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಈವರೆಗೂ ಜಾನುವಾರುಗಳಿಗೆ ಡಿಕ್ಕಿ ಹೊಡೆದಿದ್ದು ಸುದ್ದಿಯಾಗುತ್ತಿತ್ತು. ಮಂಗಳವಾರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಬರುವಾಗ ರೈಲ್ವೇ ಟ್ರ್ಯಾಕ್‌ ದಾಟಲು ಯತ್ನಿಸಿದ 54 ವರ್ಷದ ಮಹಿಳೆಯ ಮೇಲೆ ರೈಲು ಹರಿದಿದೆ. ಗುಜರಾತ್‌ನ ಆನಂದ್‌ನಲ್ಲಿ ಈ ಘಟನೆ ನಡೆದಿದೆ ಎಂದು ರೈಲ್ವೆ ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.ಆನಂದ್‌ ಪ್ರದೇಶದ ಬಳಿ, ಮಹಿಳೆ ರೈಲ್ವೇ ಹಳಿಯನ್ನು ದಾಟುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಂದೇ ಭಾರತ್‌ ರೈಲು ಅನಾವರಣವಾದ ದಿನದಿಂದಲೂ ಇಂಥದ್ದೇ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಇದೇ ಪ್ರಕರಣು ಸಾಮಾನ್ಯ ರೈಲಿನಲ್ಲಾದರೇ ಹೆಚ್ಚಿನ ಮಹತ್ವ ಪಡೆಯುತ್ತಿರಲಿಲ್ಲ. ಆದರೆ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಂದೇ ಭಾರತ್‌ ರೈಲಿನ ವಿಚಾರದಲ್ಲಿ ಸಾಕಷ್ಟು ನೆಗೆಟಿವ್‌ ಅಂಶಗಳೇ ಸುದ್ದಿಯಾಗುತ್ತಿವೆ.  ರೈಲ್ವೇ ಹಳಿ ದಾಟುವಾಗ ಮಹಿಳೆಯೊಬ್ಬರು ಸಾವನ್ನಪ್ಪಿರುವುದು ರೈಲ್ವೆ ಹಳಿಗಳ ಅಕ್ಕ ಪಕ್ಕದಲ್ಲಿ ಬದುಕುವ ಜನರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೇಲಿನ ಪ್ರಾಥಮಿಕ ಮಾಹಿತಿಯು ಈ ಹಂತದಲ್ಲಿ ಲಭ್ಯವಿದೆ. ಆದರೆ, ಸಮಗ್ರ ತನಿಖೆಯ ನಂತರವಷ್ಟೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.ಸ್ವದೇಶಿ ನಿರ್ಮಿತ ವಂದೇ ಭಾರತ್ ರೈಲಿಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದರು. ಅಲ್ಲಿಂದೀಚೆಗೆ ರೈಲು ಹಳಿಗಳ (Railway Track) ಮೇಲೆ ಜಾನುವಾರುಗಳು (Cattle) ಬಂದಿದ್ದರಿಂದ ವಂದೇ ಭಾರತ್ ರೈಲು ಮೂರು ಬಾರಿ ಅಪಘಾತಕ್ಕೀಡಾಗಿದೆ. ಇದು ರೈಲ್ವೆ ಹಳಿಗಳ ಸುರಕ್ಷತೆಯ ಕುರಿತು  ಪ್ರಶ್ನೆಗಳನ್ನು ಹಾಕಿದೆ.  ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಇಂದು ಆನಂದ್ ಬಳಿಯ ರೈಲ್ವೇ ಹಳಿಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಮಹಿಳೆಯ ಮೃತದೇಹವನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಿದ್ದಾರೆ.  ಅದರೊಂದಿಗೆ ಸಾವು ಕಂಡ ಮಹಿಳೆಯನ್ನು ಗುರುತಿಸುವ ಪ್ರಯತ್ನವೂ ತೀವ್ರಗೊಂಡಿದೆ. ಈ ಹಿಂದೆ ಜಾನುವಾರುಗಳಿಗೆ ವಂದೇ ಭಾರತ್ ರೈಲು ಡಿಕ್ಕಿಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗಳಿಗೆ ಕಾರಣವಾಗಿತ್ತು.

Tap to resize

Latest Videos

Vande Bharat Express: ಚೆನ್ನೈ-ಮೈಸೂರು ಪ್ರಯಾಣಕ್ಕೆ 921 ರೂಪಾಯಿ ಟಿಕೆಟ್‌!

ದೇಶದ ಐದನೇ ವಂದೇ ಭಾರತ್‌ ರೈಲಿಗೆ ನ.11ಕ್ಕೆ ಚಾಲನೆ: ನವದೆಹಲಿ (New Delhi) ಹಾಗೂ ವಾರಣಾಸಿ (Varanasi) ನಡುವೆ ದೇಶದ ಮೊಟ್ಟಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ (Vande Bharath Express) ಪ್ರಧಾನಿ ನರೇಂದ್ರ ಮೋದಿ (Prime Minister Naredra Modi) 2019ರ ಫೆಬ್ರವರಿ 15ರಂದು ಚಾಲನೆ ನೀಡಿದ್ದರು. ಅದೇ ವರ್ಷದ ಅಕ್ಟೋಬರ್‌ನಲ್ಲಿ ನವದೆಹಲಿ ಹಾಗೂ ಶ್ರೀ ಮಾತಾ ವೈಷ್ಣೋದೇವಿ ಖತ್ರಾ ನಿಲ್ದಾಣದ ನಡುವೆ 2ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಾಗಿತ್ತು.

ಗೂಳಿಗೆ ಗುದ್ದಿ ಮತ್ತೆ ನುಜ್ಜುಗುಜ್ಜಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು..!

ಇಂದು ಆನಂದ್‌ನಲ್ಲಿ ಅಪಘಾತಕ್ಕೆ ಈಡಾಗಿರುವ ರೈಲನ್ನು ಇದೇ ವರ್ಷದ ಸೆಪ್ಟೆಂಬರ್‌ 20ಕ್ಕೆ ಚಾಲನೆ ನೀಡಲಾಗಿತ್ತು. ಕಳೆದ ತಿಂಗಳು ನವದೆಹಲಿ ಹಾಗೂ ಆಂಬ್‌ ಅಂದೌರಾ ನಡುವೆ ದೇಶದ ನಾಲ್ಕನೇ ವಂದೇ ಭಾರತ್‌ಗೆ ಚಾಲನೆ ನೀಡಲಾಗಿತ್ತು. ದಕ್ಷಿಣ ಭಾರತದ ಮೊಟ್ಟಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ನರೇಂದ್ರ ಮೋದಿ ನವೆಂಬರ್ 11 ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ಈ ರೈಲು ಮೈಸೂರು-ಬೆಂಗಳೂರು-ಚೆನ್ನೈ ಹಾಗೂ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಚಲಿಸಲಿದೆ. ಇದಕ್ಕಾಗಿ ಸಿದ್ಧತೆಗಳೂ ಕೂಡ ಭರ್ಜರಿಯಾಗಿ ನಡೆದಿವೆ. 

click me!