ನಾಪತ್ತೆಯಾಗಿದ್ದ ಒಂದೇ ಕುಟುಂಬದ ಐವರ ಶವ 8 ಅಡಿ ಆಳದ ಗುಂಡಿಯಲ್ಲಿ ಪತ್ತೆ!

By Suvarna NewsFirst Published Jun 30, 2021, 5:31 PM IST
Highlights

* ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಒಂದೇ ಕುಟುಂಬದ ಸದಸ್ಯರು

* ತನಿಖೆಯಲ್ಲಿ ಬಯಲಾಯ್ತು ಶಾಕಿಂಗ್ ಅಂಶ

* ಎಂಟು ಅಡಿ ಆಳದ ಗುಂಡಿಯಲ್ಲಿ ಐವರ ಶವ ಪತ್ತೆ

ಭೋಪಾಲ್(ಜೂ.30): ಕಳೆದ ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಒಂದೇ ಕುಟುಂಬದ ಐವರ ಶವ ಮಂಗಳವಾರ ಸಂಜೆ ಮಧ್ಯಪ್ರದೇಶದ ದೇವಾಸ್‌ ಜಿಲ್ಲೆಯಲ್ಲಿ ಹೊಲವೊಂದರಲ್ಲಿ ಪತ್ತೆಯಾಗಿವೆ. ಐವರನ್ನೂ ಕತ್ತು ಹಿಸುಕಿ ಕೊಲ್ಲಲಾಗಿದ್ದು, ಮೊದಲೇ ತೋಡಿದ್ದ ಎಂಟರಿಂದ ಹತ್ತು ಅಡಿ ಆಳದ ಗುಂಡಿಯಲ್ಲಿ ಮುಚ್ಚಲಾಗಿದೆ. 

ಪೊಲೀಸರ ಅನ್ವಯ 45 ವರ್ಷದ ಮಮತಾ, ಆಕೆಯ ಇಬ್ಬರು ಹೆಣಮಕ್ಕಳಾದ 21 ವರ್ಷದ ರೂಪಾಲಿ ಹಾಗೂ 14 ವರ್ಷದ ದಿವ್ಯಾ ಹಾಗೂ ಇವರ ಇಬ್ಬರು ಕಸಿನನ್‌ಗಳು ಧೆವಾಸ್‌ನ ತಮ್ಮ ನಿವಾಸದಿಂದ ಮೇ 13ರಂದು ನಾಪತ್ತೆಯಾಗಿದ್ದರು. ಸಂತ್ರಸ್ತರಲ್ಲಿ ಒಬ್ಬಾಕೆ ಜೊತೆ ಸಂಬಂಧ ಹೊಂದಿದ್ದ ಮನೆ ಮಾಲೀಕ ಹಾಗೂ ಆತನ ಸುಮಾರು ಹನ್ನೆರಡು ಜೊತೆಗಾರರು ಈ ಕುಕೃತ್ಯದ ಹಿಂದಿದ್ದಾರೆ ಎನ್ನಲಾಗಿದೆ. ಮುಖ್ಯ ಆರೋಪಿ ಸುರೇಂದ್ರ ಹಾಗೂ ಇತರ ಶಂಕಿತರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಏಳು ಮಂದಿಗಾಗಿ ಹುಡುಕಾಟ ಮುಂದುವರೆದಿದೆ.

ಪೊಲೀಸರು ಈ ಎಂಟು ಅಡಿ ಆಳದ ಗುಂಡಿಯನ್ನು ತೋಡಿದಾಗ ಐದು ಪ್ರತ್ಯೇಕ ಕೊಳೆತ ಶವಗಳು ಸಿಕ್ಕಿವೆ. ಇವರಲ್ಲಿ ಯಾರೊಬ್ಬರ ದೇಹದ ಮೇಲೂ ಬಟ್ಟೆ ಇರಲಿಲ್ಲ. ಆರೋಪಿಗಳು ಇವರೆಲ್ಲರ ಬಟ್ಟೆಯನ್ನು ಸುಟ್ಟು ಹಾಕಿದ್ದರು. ಅಲ್ಲದೇ ಈ ಶವ ಅತೀ ಬೇಗ ಕೊಳೆತು ಹೋಗಬೇಕೆಂದು ಯೂರಿಯಾ ಹಾಗೂ ಉಪ್ಪಿನಿಂದ ಮುಚ್ಚಲಾಗಿತ್ತು. 

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಸುರೇಂದ್ರ ಚೌಹಾಣ್ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ. ಚೌಹಾಣ್ ಈ ಕೊಲೆಗಳಿಗೆ ಸಂಚು ರೂಪಿಸಿದ್ದ. ಐವರು ಈತನಿಗೆ ಗುಂಡಿ ತೋಡಲು ಸಹಾಯ ಮಾಡಿದ್ದರು. ಕುಟುಂಬ ಸದಸ್ಯರು ಇವರೆಲ್ಲರೂ ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದರು. ಅಲ್ಲದೇ ಹುಡುಕುವ ಪ್ರಯತ್ನ ನಡೆಸಿದ್ದರು. ಕೊಲೆಗಾರರು ಮಹಿಳೆಯ ಹಿರಿಯ ಮಗಳ ಐಡಿಯಿಂದ ಮೆಸೇಜ್ ಪೋಸ್ಟ್‌ ಮಾಡಿ ಪೊಲೀಸರನ್ನು ಗೊಂದಕ್ಕೀಡು ಮಾಡಿದ್ದರು. ಇಲ್ಲಿ ರೂಪಾಲಿ ತನ್ನಿಷ್ಟದ ಯುವಕನೊಂದಿಗೆ ಮದುವೆಯಾಗಿದ್ದು, ತಾಯಿ, ತಂಗಿ ಹಾಗೂ ಇಬ್ಬರು ಕಸಿನ್ಸ್ ತನ್ನ ಜೊತೆಗಿದ್ದಾರೆಂದು ಪೋಸ್ಟ್ ಮಾಡಿದ್ದರು.

ಪೊಲೀಸರು ರೂಪಾಲಿಯ ಮೊಬೈಲ್ ಟ್ರ್ಯಾಕ್ ಮಾಡಿದ್ದರು. ಆಕೆಯ ಕಾಲ್‌ ಡಿಟೇಲ್ಸ್‌ನಿಂದ ಆಕೆ ಹಾಗೂ ಮನೆ ಮಾಲೀಕ ನಿರಂತರ ಸಂಪರ್ಕದಲ್ಲಿದ್ದರೆಂಬ ಮಾಹಿತಿ ತಿಳಿದು ಬಂದಿದೆ. ಮನೆ ಮಾಲೀಕನನ್ನು ಪ್ರಶ್ನಿಸಿದಾಗ ಈ ವಿಚಾರವನ್ನು ಆತ ತಳ್ಳಿ ಹಾಕಿದ್ದಾನೆ. ಪೊಲೀಸರು ಮತ್ತಷ್ಟು ತನಿಖೆ ನಡೆಸಿದಾಗ ಎಲ್ಲಾ ವಿಚಾರ ಬಯಲಾಗಿದೆ. ಅಲ್ಲದೇ ರೂಪಾಲಿ ಜೊತೆ ಸಂಬಂಧವಿಟ್ಟುಕೊಂಡಿದ್ದರೂ ಅನ್ಯ ಮಹಿಳೆ ಜೊತೆ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ. 

click me!