ದಕ್ಷಿಣ ರಾಜ್ಯಗಳ ಸಭೆ ಯಶಸ್ವಿ : 51 ಅಂತಾರಾಜ್ಯ ಸಮಸ್ಯೆಗಳ ಪೈಕಿ 40 ಇತ್ಯರ್ಥ!

By Kannadaprabha News  |  First Published Nov 15, 2021, 1:10 AM IST

*ಅಂತಾರಾಜ್ಯ ಸಮಸ್ಯೆ ಪರಿಹಾರಕ್ಕೆ ವಲಯ ಸಮಿತಿ ಶಕ್ತ: ಶಾ
*ದಕ್ಷಿಣದ ಕೊಡುಗೆಯಿಲ್ಲದೆ ಭಾರತ ಅಭಿವೃದ್ಧಿ ಕಲ್ಪನೆ ಅಸಾಧ್ಯ
*ದೇಶದ ಎಲ್ಲ ಭಾಷೆಗಳಿಗೆ ಮೋದಿ ಸರ್ಕಾರ ಗೌರವ
*ದಕ್ಷಿಣ ರಾಜ್ಯಗಳ ಸಿಎಂಗಳ ಸಭೆಯಲ್ಲಿ ಗೃಹ ಸಚಿವ ಹೇಳಿಕೆ
 


ತಿರುಪತಿ(ನ.15): ಭಾನುವಾರ ತಿರುಪತಿಯಲ್ಲಿ (Tirupati)  ನಡೆದ ದಕ್ಷಿಣ ವಲಯದ ಸಮಿತಿ ಸಭೆ ಯಶಸ್ವಿಯಾಗಿದೆ. ದಕ್ಷಿಣ ರಾಜ್ಯಗಳ 51 ಸಮಸ್ಯೆಗಳ ಪೈಕಿ 40 ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಸಭೆಯ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಖುದ್ದು ಈ ಘೋಷಣೆ ಮಾಡಿದ್ದಾರೆ. ಭಾನುವಾರ ತಿರುಪತಿಯ ತಾಜ್‌ ತಿರುಪತಿ ಹೋಟೆಲ್‌ನಲ್ಲಿ (Taj Tirupati Hotel) ನಡೆದ 29ನೇ ದಕ್ಷಿಣ ವಲಯದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಕ್ಷಿಣ ಭಾರತದ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಶ್ರೀಮಂತಿಕೆಯನ್ನು ಕೊಂಡಾಡಿದರು.

ದಕ್ಷಿಣ ಭಾರತದ (Southern India) ಪುರಾತನ ಸಾಂಸ್ಕೃತಿಕ, ಸಾಂಪ್ರದಾಯಿಕ ಮತ್ತು ಭಾಷೆಗಳು ಭಾರತದ ಸಂಸ್ಕೃತಿ ಮತ್ತು ಪ್ರಾಚೀನ ಪರಂಪರೆಯನ್ನು ಶ್ರೀಮಂತಗೊಳಿಸಿವೆ. ದಕ್ಷಿಣ ಭಾರತದ ಬಹುಮುಖ್ಯವಾದ ಕೊಡುಗೆಗಳು ಇಲ್ಲದೆ ಭಾರತದ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳಲು ಅಸಾಧ್ಯ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ದೇಶದ ಎಲ್ಲಾ ಭಾಷೆಗಳನ್ನು (Langauges) ಗೌರವದಿಂದ ಕಾಣುತ್ತದೆ. ಇದರ ಪ್ರತೀಕವಾಗಿ ದಕ್ಷಿಣ ವಲಯದ ಸಮಿತಿ ಸಭೆಯಲ್ಲಿ ದಕ್ಷಿಣ ರಾಜ್ಯಗಳ ಎಲ್ಲಾ ಭಾಷೆಗಳ ತರ್ಜುಮೆ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳಿದರು.

Tap to resize

Latest Videos

ಕೃಷಿಮೇಳಕ್ಕೆ ತೆರೆ: 8 ಲಕ್ಷ ಮಂದಿ ಭೇಟಿ, ಆನ್‌ಲೈನ್‌ನಲ್ಲೂ 38 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ!

ವಾಸ್ತವವಾಗಿ ಸಲಹಾ ಸಂಸ್ಥೆಗಳಾಗಿರುವ ‘ವಲಯ ಸಮಿತಿ’ಗಳಿಗೆ ಹಲವು ಅಂತರ್‌ರಾಜ್ಯ ಬಿಕ್ಕಟ್ಟುಗಳನ್ನು ಪರಿಹರಿಸುವ ಸಾಮರ್ಥ್ಯವನ್ನೂ ಹೊಂದಿವೆ. ರಾಜ್ಯಗಳ ಮಧ್ಯೆ ಉದ್ಭವಿಸಿದ ವಿವಾದಾತ್ಮಕ ವಿಚಾರಗಳ ಕುರಿತಾಗಿ ಸದಸ್ಯ ರಾಜ್ಯಗಳ ಮಧ್ಯೆ ನೇರ ಸಮಾಲೋಚನೆಗೆ ಅವಕಾಶ ಕಲ್ಪಿಸಿ, ತನ್ಮೂಲಕ ಗೊತ್ತುವಳಿ ಕೈಗೊಳ್ಳಲು ವಲಯ ಸಮಿತಿಗಳು ವೇದಿಕೆ ಕಲ್ಪಿಸಲಿವೆ ಎಂದು ಹೇಳಿದರು.

ಡ್ರಗ್ಸ್‌  ಹಾವಳಿ ತಡೆಯಿರಿ!

ಡ್ರಗ್ಸ್‌ ಹಾವಳಿಯನ್ನು (Drugs) ತಡೆಯಬೇಕು. ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳ ತನಿಖೆ 60 ದಿನದಲ್ಲಿ ಮುಗಿಯಬೇಕು ಎಂದೂ ಸೂಚಿಸಿದರು. ಸಭೆಯಲ್ಲಿ ಮುಖ್ಯಮಂತ್ರಿಗಳಾದ ಕರ್ನಾಟಕದ ಬಸವರಾಜ ಬೊಮ್ಮಾಯಿ(Basavraj Bommai) , ಆಂಧ್ರಪ್ರದೇಶದ ಜಗನ್‌ಮೋಹನ್‌ ರೆಡ್ಡಿ (Jagan Mohan Reddy) , ಪುದುಚೇರಿಯ ಎನ್‌. ರಂಗಸ್ವಾಮಿ (N Rangaswamy), ತೆಲಂಗಾಣ ಗೃಹ ಸಚಿವ ಮೊಹಮ್ಮದ್‌ ಅಲಿ (Mohammed Ali), ಕೇರಳ ಸಚಿವ ಬಾಲಗೋಪಾಲ್‌ (Balgopal), ತಮಿಳುನಾಡಿನ ಸಚಿವ ಶೇಖರಬಾಬು  (Shekar Babu) ಸೇರಿದಂತೆ ದಕ್ಷಿಣ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಇನ್ನಿತರ ಮುಖಂಡರು ಭಾಗವಹಿಸಿದ್ದರು.

111 ಕೋಟಿ ಡೋಸ್‌ ಸಾಧನೆ:

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲಶ್ರುತಿಯಿಂದಾಗಿ ಈವರೆಗೆ ದೇಶಾದ್ಯಂತ 111 ಕೋಟಿ ಕೋವಿಡ್‌ ಲಸಿಕೆ (Corona Vaccine) ಡೋಸ್‌ಗಳನ್ನು ನೀಡಲಾಗಿದೆ. ಇದೊಂದು ಮಹಾ ಸಾಧನೆ ಹಾಗೂ ದೇಶದ ಒಕ್ಕೂಟ ಸಹಕಾರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.

ನಾಯಕತ್ವ ಬದಲಾವಣೆ ವಿಚಾರ : 

ರಾಜ್ಯದಲ್ಲಿ ನಾಯಕತ್ವ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ (BJP National Secretary Arun Singh), ಪ್ರತಿಪಕ್ಷ ಕಾಂಗ್ರೆಸ್‌ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಆಪಾದಿಸಿದ್ದಾರೆ.

ಪರ-ವಿರೋಧ ಚರ್ಚೆ: ಕೊನೆಗೂ ಕ್ಷಮೆಯಾಚಿಸಿದ ನಾದಬ್ರಹ್ಮ ಹಂಸಲೇಖ

ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ (Congress) ಬಳಿ ಯಾವುದೇ ವಿಷಯಗಳಿಲ್ಲದ ಕಾರಣ ಅದು ಬಿಜೆಪಿ ಬಗ್ಗೆ ಸುಳ್ಳು ಆರೋಪ- ಆಧಾರರಹಿತ ಟೀಕೆ ಮಾಡುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಕಾರ್ಯಚಟುವಟಿಕೆಯನ್ನೂ ಶ್ಲಾಘಿಸಿದರು.

click me!