ಠಾಕ್ರೆ ಮನೆಯಲ್ಲಿ ನಾಗರಹಾವು ; ‘ಮಹಾ’ ರಾಜಕೀಯದಲ್ಲಿ ಭಾರೀ ಬದಲಾವಣೆ..?

Published : Aug 08, 2023, 10:58 AM ISTUpdated : Aug 08, 2023, 11:03 AM IST
ಠಾಕ್ರೆ ಮನೆಯಲ್ಲಿ ನಾಗರಹಾವು ; ‘ಮಹಾ’ ರಾಜಕೀಯದಲ್ಲಿ ಭಾರೀ ಬದಲಾವಣೆ..?

ಸಾರಾಂಶ

ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮುಂಬೈ ನಿವಾಸದಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಪತ್ತೆಯಾಗಿದೆ. ಇದು ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ಹಾಗೂ ಜ್ಯೋತಿಷ್ಯದ ತಿರುವು ಪಡೆದುಕೊಂಡಿದೆ. ಮನೆಗೆ ನಾಗರಹಾವು ಬಂದರೆ ಶುಭನೋ ಅಥವಾ ಅಶುಭವೋ ಎಂಬ ಮಾಹಿತಿ ಇಲ್ಲಿದೆ.

ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮುಂಬೈ ನಿವಾಸದಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಪತ್ತೆಯಾಗಿದೆ. ಇದು ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ಹಾಗೂ ಜ್ಯೋತಿಷ್ಯದ ತಿರುವು ಪಡೆದುಕೊಂಡಿದೆ. ಮನೆಗೆ ನಾಗರಹಾವು ಬಂದರೆ ಶುಭನೋ ಅಥವಾ ಅಶುಭವೋ ಎಂಬ ಮಾಹಿತಿ ಇಲ್ಲಿದೆ.

ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮನೆಯಲ್ಲಿ ಭಾರೀ ಗಾತ್ರದ ನಾಗರಹಾವು ಪತ್ತೆಯಾಗಿದೆ. ಮುಂಬೈನ ಬಾಂದ್ರಾದ ಕಲಾ ನಗರದಲ್ಲಿರುವ ಠಾಕ್ರೆ ಅವರ ಮಾತೋಶ್ರೀ ನಿವಾಸದ ಆವರಣದಲ್ಲಿ ಹಾವು ಕಾಣಿಸಿಕೊಂಡಿದೆ. ಉರಗ ರಕ್ಷಕ ಅತುಲ್ ಕಾಂಬ್ಳೆ, ತಮ್ಮ ತಂಡದೊಂದಿಗೆ ಠಾಕ್ರೆ ನಿವಾಸಕ್ಕೆ ಬಂದು ಮನೆಯೊಳಗಿದ್ದ ನಾಗರ ಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಇದರ ಜೊತೆಗೆ ಈ ವಿಚಾರದಲ್ಲಿ ರಾಜಕೀಯ ಹಾಗೂ ಜ್ಯೋತಿಷ್ಯ ನುಸುಳಿದೆ.

ಠಾಕ್ರೆ ಮನೆಯಲ್ಲಿ ನಾಗರಹಾವು, ಪರಿಣಾಮ ಏನು..?

ಉದ್ಧವ್ ಠಾಕ್ರೆ ಮನೆಯಲ್ಲಿ ನಾಗರಹಾವು ಪತ್ತೆ ಆದ ಹಿನ್ನೆಲೆ ಮಹಾರಾಷ್ಟ್ರ ರಾಜಕೀಯದಲ್ಲಿ ಏನಾದರೂ ಬದಲಾವಣೆ ಸಾಧ್ಯತೆ ಇದೆಯಾ ಎಂಬ ಚರ್ಚೆ ಕೂಡ ನಡೆದಿದೆ. ಹಾಗೂ ಠಾಕ್ರೆ ಕುಟುಂಬಕ್ಕೆ ಇದರಿಂದ ಏನಾದರೂ ಪರಿಣಾಮ ಆಗಲಿದೆಯಾ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಅಷ್ಟಕ್ಕೂ ನಾಗರಹಾವು ಮನೆಗೆ ಬಂದರೆ  ಶುಭನೋ ಅಥವಾ ಅಶುಭವೋ ಎಂಬ ಡೀಟೇಲ್ಸ್ ಇಲ್ಲಿದೆ.

ಕನ್ಯಾರಾಶಿಯಲ್ಲಿ ಮಂಗಳನ ಸಂಚಾರ; ನಿಮ್ಮ ಕನಸನ್ನೆಲ್ಲಾ ನನಸು ಮಾಡ್ತಾನೆ ಈ ಗ್ರಹಗಳ ಕಮಾಂಡರ್‌

 

ಇದು ಮುಂಬರುವ ಅನಾಹುತದ ಸೂಚನೆಯೇ

ಹಾವುಗಳು ಕಣ್ಣಿಗೆ ಕಂಡರೇ ಹೌಹಾರುವಂತಾಗುತ್ತದೆ. ಅದರಲ್ಲೂ ನಾಗರಹಾವು ಮನೆಗೆ ಬಂದರೆ ಭಯ ಬೀಳುತ್ತಾರೆ. ಇದೇನೋ ದೋಷದ ಸೂಚನೆಯೂ, ಬರಲಿರುವ ಅನಾಹುತದ ಸೂಚನೆಯೋ ಎಂದು ಗೊಂದಲವಾಗುತ್ತದೆ. ಮತ್ತೆ ಕೆಲವರು ಹಾವು ಮನೆಗೆ ಬರುವುದು ಶುಭ ಎಂದು ನಂಬುತ್ತಾರೆ. ರಾಹು ಕೇತುಗಳನ್ನು ಕೂಡಾ ಹಾವಿನ ತಲೆ ಮತ್ತು ದೇಹ ಎಂದು ಭಾವಿಸಲಾಗುತ್ತದೆ. ಸರ್ಪವನ್ನು ಕೊಂದರೆ ಬ್ರಹ್ಮಹತ್ಯಾ ದೋಷ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ಸರ್ಪ ಸಂಸ್ಕಾರ ಮಾಡಲೇಬೇಕು, ಇಲ್ಲದಿದ್ದರೆ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ನಂಬಲಾಗುತ್ತದೆ. ಹಾವುಗಳು ಕನಸಿನಲ್ಲಿ ಕಂಡರೂ ಅವೇನೋ ಸೂಚನೆ ನೀಡುತ್ತಿವೆ ಎಂದು ಭಾವಿಸುವ ನಮಗೆ ಅವು ನೇರ ಮನೆಗೇ ಬಂದರೆ ಶುಭ ಶಕುನವೋ, ಅಪಶಕುನವೋ ತಿಳಿಯದೆ ಕಂಗಾಲಾಗುವಂತಾಗುತ್ತದೆ.

ಶಶ ರಾಜಯೋಗ: ಇವರ ಕೈ ಹಿಡಿದು ನಡೆಸುವನು ಶನಿದೇವ..!

 

ಇದು ಅದೃಷ್ಟದ ಸಂಕೇತ ಎನ್ನುತ್ತಾರೆ ಜ್ಯೋತಿಷಿಗಳು

ಸಾಮಾನ್ಯವಾಗಿ ಹಾವು ಮನೆಗೆ ಬಂದರೆ ಮಂಗಳಕರವಾಗಿರುತ್ತದೆ. ಕಪ್ಪು ಹಾವು ಮನೆಗೆ ಬಂದರೆ, ನೀವು ಯಶಸ್ಸನ್ನು ಪಡೆಯುತ್ತೀರಿ, ಬಯಕೆ ಈಡೇರಲಿದೆ ಎಂದು ಇದು ಸೂಚಿಸುತ್ತದೆ. ಅದೂ ಅಲ್ಲದೆ, ಸರ್ಪದೋಷವಿದ್ದಾಗ ಸಂತಾನ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ ಎನ್ನಲಾಗುತ್ತದೆ. ಹೀಗಾಗಿ, ಈ ಹಾವು ಮನೆಗೆ ಬಂದಾಗ ಅದು ಸಂತಾನ ಭಾಗ್ಯದ ಸೂಚನೆ ಎಂದೂ ತಿಳಿಯಲಾಗುತ್ತದೆ. ಇನ್ನು ಬಿಳಿ ನಾಗರ ಮನೆಗೆ ಬಂದರೆ ಮನೆಯಲ್ಲಿ ಸಂಪತ್ತಿನ ಮಳೆಯಾಗುತ್ತದೆ ಎಂದು ಭಾವಿಸಲಾಗುತ್ತದೆ. ಹಾವಿನ ಮರಿ ಬಂದರೆ ಅದು ಅದೃಷ್ಟ ಖುಲಾಯಿಸುತ್ತಿರುವ, ದೊಡ್ಡ ಲಾಭದ ಸೂಚನೆ. ಹಸಿರು ಹಾವು ಬಂದರೆ, ಸಮಸ್ಯೆಗಳು ಮುಗಿವ ಕಾಲ ಎಂದು ಭಾವಿಸಬಹುದು. ಹೀಗಾಗಿ ಠಾಕ್ರೆ ಕುಟುಂಬಕ್ಕೆ ಇದರಿಂದ ಯಾವುದೇ ತೊಂದರೆ ಆಗಲ್ಲ. ರಾಜಕೀಯವಾಗಿ ಹಾಗೂ ಕೌಟುಂಬಿಕವಾಗಿ ಇದು ಅವರಿಗೆ ಶುಭ ಸೂಚನೆ ಅನ್ನುತ್ತಾರೆ ಜ್ಯೋತಿಷಿಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!