ಶಾಲೇಲಿ ಬ್ಲೇಡಿಂದ ಒಂದೇ ರೀತಿ ಕೈ ಕೊಯ್ದುಕೊಂಡ 35 ಮಕ್ಕಳು!

Kannadaprabha News   | Kannada Prabha
Published : Feb 21, 2026, 06:39 AM IST
 blade

ಸಾರಾಂಶ

ಇಲ್ಲಿನ ಶಾಲೆಯೊಂದರಲ್ಲಿ 35 ಮಕ್ಕಳು ಬ್ಲೇಡ್‌ ಬಳಸಿಕೊಂಡು ತಮ್ಮ ಕೈಯ್ಯನ್ನು ತಾವೇ ಕೊಯ್ದುಕೊಂಡಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 6ರಿಂದ 8ನೇ ತರಗತಿ ಮಕ್ಕಳು ಒಬ್ಬರನ್ನೊಬ್ಬರು ನೋಡಿಕೊಂಡು ಒಂದು ತಿಂಗಳಿಂದ ಹೀಗೆ ಮಾಡುತ್ತಿದ್ದು, ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ

ಧಂತರಿ: ಇಲ್ಲಿನ ಶಾಲೆಯೊಂದರಲ್ಲಿ 35 ಮಕ್ಕಳು ಬ್ಲೇಡ್‌ ಬಳಸಿಕೊಂಡು ತಮ್ಮ ಕೈಯ್ಯನ್ನು ತಾವೇ ಕೊಯ್ದುಕೊಂಡಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 6ರಿಂದ 8ನೇ ತರಗತಿ ಮಕ್ಕಳು ಒಬ್ಬರನ್ನೊಬ್ಬರು ನೋಡಿಕೊಂಡು ಒಂದು ತಿಂಗಳಿಂದ ಹೀಗೆ ಮಾಡುತ್ತಿದ್ದು, ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕೊರಿಯಾ ಗೇಮಿಂಗ್‌ ಚಟಕ್ಕೆ ಬಿದ್ದು ಗಾಜಿಯಾಬಾದ್‌ನಲ್ಲಿ ಮೂವರು ಸೋದರಿಯರು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಪ್ರಕರಣ ಬೆಳಕಿಗೆ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ.

ಮಕ್ಕಳ ಮಣಿಕಟ್ಟಿನಲ್ಲಿ ಗೀರಿನ ಗುರುತುಗಳು

ಮಕ್ಕಳ ಮಣಿಕಟ್ಟಿನಲ್ಲಿ ಗೀರಿನ ಗುರುತುಗಳು ಇರುವುದನ್ನು ಕಂಡ ಪೋಷಕರು ಅದನ್ನು ಶಿಕ್ಷಕರ ಗಮನಕ್ಕೆ ತಂದಿದ್ದರು. ಶಾಲೆಯ ಆಡಳಿತ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿತ್ತು. ಈ ಸುದ್ದಿ ಹೊರಬರುತ್ತಿದ್ದಂತೆ ಶಾಲೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ‘ಮಕ್ಕಳಿಗೆ ಶಾಲೆಯಲ್ಲಿ ಬ್ಲೇಡ್‌ ಹೇಗೆ ಸಿಕ್ಕಿತು? ಶಿಕ್ಷಕರಿಗೆ ಏಕೆ ಅವರ ಕೈಯ್ಯಲ್ಲಿನ ಗಾಯ ಕಾಣಲಿಲ್ಲ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. 15-20 ದಿನಗಳ ಹಿಂದೆ ಹೀಗೆ ಮಾಡಿಕೊಂಡಿದ್ದ 21 ಹುಡುಗರು ಮತ್ತು 14 ಹುಡುಗಿಯರು, ಗಾಯವನ್ನು ಸಮವಸ್ತ್ರದಲ್ಲಿ ಮುಚ್ಚಿಟ್ಟುಕೊಂಡಿದ್ದರು ಎನ್ನಲಾಗಿದೆ. ಗೀರು ಆಳವಾಗಿರದ ಕಾರಣ ಪ್ರಾಣಾಪಾಯವಿಲ್ಲ.

ಕಾರಣವೇನು?:

ಮಾದಕವಸ್ತುಗಳ ಚಟಕ್ಕೆ ಬಿದ್ದು ಅಥವಾ ಆನ್‌ಲೈನ್‌ ಆಟಗಳಲ್ಲಿನ ಚಾಲೆಂಜ್‌ ಒಪ್ಪಿಕೊಂಡು ಮಕ್ಕಳು ಕೈ ಕೊಯ್ದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ವಿಚಾರಿಸಿದಾಗ, ಒಬ್ಬರು ಮಾಡುವುದನ್ನು ನೋಡಿ ನಾವೂ ಮಾಡಿಕೊಂಡೆವು ಎಂಬ ಉತ್ತರ ಸಿಗುತ್ತಿದೆ. ಬ್ಲಾಕ್ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅತ್ತ ವಿದ್ಯಾರ್ಥಿಗಳನ್ನು ಆಪ್ತ ಸಮಾಲೋಚನೆಗೂ ಒಳಪಡಿಸಲಾಗಿದೆ. ಪೋಷಕರ ಮೊಬೈಲ್‌ಗಳನ್ನೂ ಪರಿಶೀಲಿಸಲಾಗಿದ್ದು, ಅದರಲ್ಲಿ ಅಪಾಯಕಾರಿ ಆಟಗಳು ಕಂಡುಬಂದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ಸಾಂನಲ್ಲಿ ಆಪರೇಷನ್ ಕಮಲ ಭೀತಿ: ಬೆಂಗಳೂರಿನಲ್ಲಿ ಬೀಡು ಬಿಟ್ಟ ಅಸ್ಸಾಂನ 12 ಕಾಂಗ್ರೆಸ್ ಶಾಸಕರು
ಮೊನಾಲಿಸಾ ಜೊತೆ ಮದುವೆಗೆ ಫರ್ಮಾನ್ ಖಾನ್ ಪೋಷಕರಿಂದಲೂ ವಿರೋಧ: ಅವರು ಹೇಳಿದ್ದೇನು?